Advertisement
ನಗರದ ಕುಂದವಾಡ ಕೆರೆ, ಗಂಗೂಬಾಯಿ ಹಾನಗಲ್ ಉದ್ಯಾನವನ ಸೇರಿದಂತೆ ವಿವಿಧ ಉದ್ಯಾನವನಗಳಿಗೆ ಭೇಟಿ ನೀಡಿದ ಗಾಯತ್ರಿ ಸಿದ್ದೇಶ್ವರ, ವಾಯುವಿಹಾರ ಮಾಡುವರಲ್ಲಿ ಮತಯಾಚಿಸಿದರು. ಕೇಂದ್ರ ಸರ್ಕಾರದ ಸಾಧನೆ, ಕಳೆದ 20 ವರ್ಷಗಳಿಂದ ಸಂಸದರು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು. ಮೋದಿ ನೇತೃತ್ವದಲ್ಲಿ ಭಾರತ ವಿಶ್ವಗುರು ಆಗುತ್ತಿದೆ. ಮೋದಿ ಜೀ ಅವರ ಆಡಳಿತ ಎಲ್ಲರೂ ಮೆಚ್ಚಿಕೊಂಡಿದ್ದು, ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎನ್ನುವುದು ಜನರ ಸಂಕಲ್ಪ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ತಮ್ಮನ್ನು ಗೆಲ್ಲಿಸಿ ಕಳುಹಿಸುವಮೂಲಕ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎಂದು ಗಾಯತ್ರಿ ಸಿದ್ದೇಶ್ವರ ಮತದಾರರಲ್ಲಿ ಮನವಿ ಮಾಡಿದರು.
Related Articles
Advertisement
ನಿಟ್ಟುವಳ್ಳಿಯಲ್ಲಿರುವ ನಾಯಕ ಸಮಾಜದ ಮುಖಂಡ ಹಾಗೂ ಜೆಡಿಎಸ್‌ನ ಚಂದ್ರಶೇಖರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ,ಅಭಿಮಾನದ ಸನ್ಮಾನ ಸ್ವೀಕರಿಸಿದರು. ಧೂಡಾ ಮಾಜಿ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಕೆ.ಬಿ. ಕೊಟ್ರೇಶ್, ಪಾಲಿಕೆ ಸದ್ಯಸರಾದ ಉಮಾ ಪ್ರಕಾಶ್. ಸಂಗನಗೌಡರು, ದುಗೇìಶ್, ರೇಣುಕಾ ಶ್ರೀನಿವಾಸ್, ಬಸವರಾಜ್, ಶಶಿಕುಮಾರ್ ಒಡೆಯರ್, ಕುಂಬಾರ ನಾಗರಾಜ್, ಲಾಯರ್ ಹನುಮಂತಪ್ಪ, ಶಿವಾಜಿ ರಾವ್ ಮುಕದಪ್ಪ ಮತ್ತಿತರರು ಇದ್ದರು.
ಬಳಿಕ ಸಮೀಪದ ದೊಡ್ಡ ಬಾತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಗಾಯತ್ರಿ ಸಿದ್ದೇಶ್ವರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ
ದರ್ಶನ ಪಡೆದರು. ಈ ವೇಳೆ ದೇವಸ್ಥಾನ ಸಮಿತಿ ಸದಸ್ಯರು ಸನ್ಮಾನಿಸಿ, ಗೌರವಿಸಿದರು. ನಂತರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಹಣ್ಣು ನೀಡುವ ಮೂಲಕ ಭಕ್ತಿ ಸಮರ್ಪಿಸಿದರು. ಇದನ್ನೂ ಓದಿ: Lok Sabha Election: ಗುಜರಾತ್‌ನ 2 ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ!