Advertisement

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

09:30 AM Mar 26, 2024 | Team Udayavani |

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಸೋಮವಾರ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ದಾವಣಗೆರೆಯ ವಿವಿಧ ಭಾಗದಲ್ಲಿ ನಡೆದ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಕ್ಕಳು, ಯುವತಿಯರ ಕುಶಲೋಪರಿ ವಿಚಾರಿಸಿದರು.

Advertisement

ನಂತರ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಗ್ರಾಮೀಣ ಭಾಗದ ಪ್ರತಿಯೊಬ್ಬರ ಮನೆಗೂ ಕುಡಿವ ನೀರಿಗಾಗಿ ನಲ್ಲಿ (ನಳ) ಅಳವಡಿಸುವ ಜಲಜೀವನ್‌ ಮಿಷನ್‌ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ. ಇದನ್ನು ಎಲ್ಲ ಕಡೆ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಯೋಜನೆಗಳ ಜಾರಿ ಮಾಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿ ಆಗಲು ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ರಾಮೀಣ ಭಾಗಕ್ಕೆ ಮತ್ತು ರೈತರಿಗೆ ಅನುಕೂಲ ಆಗುವ ಸಾಕಷ್ಟು ಯೋಜನೆ ಜಾರಿಗೊಳಿಸಿದ್ದಾರೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ನೂರಾರು ಕೋಟಿ ಅನುದಾನವನ್ನು ದಾವಣಗೆರೆ ಜಿಲ್ಲೆಗೆ ನೀಡಿದ್ದಾರೆ.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ಯಾವಣಗಿ ಗ್ರಾಮದಲ್ಲಿ ಬೀಜೋತ್ಪಾದನಾ ಕೇಂದ್ರದ ಬಲವರ್ಧನೆಗಾಗಿ 1.50 ಕೋಟಿ, ಬಸವಾಪಟ್ಟಣ ಮತ್ತು ತ್ಯಾವಣಗಿಯ ಹೊಸ ರೈತ ಸಂಪರ್ಕ ಕಟ್ಟಡಗಳ ನಿರ್ಮಾಣಕ್ಕೆ 1.20 ಕೋಟಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ನಮ್ಮ ಮಾವ ಜಿ. ಮಲ್ಲಿಕಾರ್ಜುನಪ್ಪ ಅವರು ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅದೇ ಕಾರಣಕ್ಕಾಗಿ ಲೋಕಸಭಾ ಕ್ಷೇತ್ರದ ಜನ ನಮ್ಮ ಕುಟುಂಬದ ಮೇಲೆ 29 ವರ್ಷ ಗಳಿಂದ

Advertisement

ಆಶೀರ್ವಾದ ಮಾಡುತ್ತಿದ್ದಾರೆ. ಈ ಬಾರಿ ಜಿ.ಎಂ. ಸಿದ್ದೇಶ್ವರ ಬದಲಾಗಿ ಅವರ ಪತ್ನಿಯಾದ ನನಗೆ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಮತದಾರರು ನನ್ನನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎಂದು ಕೋರಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರ್ಚಘಟ್ಟ, ಕುಂಟಪಾಲನಹಳ್ಳಿ, ಯರವ್ವನಾಗ್ತಿಹಳ್ಳಿ, ಯರವ್ವನಾಗ್ತಿಹಳ್ಳಿ ಕ್ಯಾಂಪ್‌,ಲೋಕಿಕೆರೆ, ಹೂವಿನಮಡು, ಮತ್ತಿ,ಶ್ಯಾಗಲೆ, ಕಾರಿಗನೂರು ಕ್ರಾಸ್‌, ಗೋಣಿವಾಡ, ಗೋಣಿವಾಡಕ್ಯಾಂಪ್‌,ಹೊನ್ನಮರಡಿ, ಮಳಲ್ಕೆರೆ, ಕೋಡಿಹಳ್ಳಿ ಮತ್ತು ಕ್ಯಾಂಪ್‌ಸೇರಿದಂತೆ 15 ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿದರು. ಪ್ರತಿಯೊಂದು ಗ್ರಾಮದಲ್ಲೂ ಬಿಜೆಪಿ ಕಾರ್ಯಕರ್ತರು,ಅಭಿಮಾನಿಗಳು, ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ದೇವಾಲಯಗಳಿಗೆ ಭೇಟಿ ನೀಡಿ ಗ್ರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ, ಮುಖಂಡ ಜಿ.ಎಸ್‌. ಅನಿತ್‌ಕುಮಾರ್‌, ಜಿ.ಎಸ್‌. ಶ್ಯಾಮ್‌, ಅಣಬೇರು ಜೀವನಮೂರ್ತಿ, ಸಹನಾ ರವಿ, ಕತ್ತಲಗೆರೆ ಅನಿಲ್‌, ಅಣಜಿ ಗುಡ್ಡೇಶ್‌, ಓಂಕಾರಪ್ಪ,ಸದಾಶಿವು, ಕಾಶೀಪುರ ಸಿದ್ದೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next