Advertisement

Davanagere: ಕೇಂದ್ರ ಸರಕಾರದಿಂದ ಗ್ರಾಮಾಭಿವೃದಿಗೆ ಆದ್ಯತೆ: ಗಾಯಿತ್ರಿ ಸಿದ್ದೇಶ್ವರ್‌

09:59 AM Apr 04, 2024 | Team Udayavani |

ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗ್ರಾಮಾಭಿವೃದ್ಧಿಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ತಿಳಿಸಿದರು.

Advertisement

ಬುಧವಾರ ಹದಡಿ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಲೇರಿ, ಹಳೆ ಬಿಸಲೇರಿ, ದುರ್ಗಾಂಬಿಕಾ ಕ್ಯಾಂಪ್‌, ವಡೇರಹಳ್ಳಿ, ಬಟ್ಲಕಟ್ಟೆ, ಬಲ್ಲೂರು (ಕ್ಯಾಂಪ್‌), ಜಡಗನಹಳ್ಳಿ, ಶಿರಗಾನಹಳ್ಳಿ, ಹಳೇ ಕೊಳೇನಹಳ್ಳಿ, ಗಿರಿಯಾಪುರ, ಕೈದಾಳೆ (ಕ್ಯಾಂಪ್‌), ಹೊಸ ನಾಯ್ಕನಹಳ್ಳಿ, ಬುಳ್ಳಾಪುರ (ಕ್ಯಾಂಪ್‌), ಚಂದ್ರನ ಹಳ್ಳಿ, ಮರುಳಸಿದ್ದೇಶ್ವರ ನಗರ, ಹನುಮಂತಾಪುರ, ಎಸ್‌.ಎ.ರವೀಂದ್ರನಾಥ್‌ ಬಡಾವಣೆ, ಹಳೇ ಬೆಳವನೂರು, ಜವಳಘಟ್ಟ,
ತರಳಬಾಳು ನಗರ, ಮಹಾದೇವಿಪುರ ಗ್ರಾಮಗಳಲ್ಲಿ ಅವರು ಪ್ರಚಾರ ನಡೆಸಿ ಮಾತನಾಡಿದರು.

ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರತಿಯೊಂದು ಗ್ರಾಮಕ್ಕೆ ರಸ್ತೆ, ಚರಂಡಿ, ಡಿಜಿಟಲ್‌ ಗ್ರಂಥಾಲಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಅನೇಕ ಯೋಜನೆಗಳನ್ನು ಜಾರಿಗೆ
ತಂದಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ. ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಅಥವಾ ಮೂರು-ನಾಲ್ಕು ಪಂಚಾಯಿತಿ ಒಳಗೊಂಡು ಒಂದು ಕೌಶಲ್ಯ ಅಭಿವೃದ್ಧಿ ಕೇಂದ್ರ ತೆರೆಯಲು ಚಿಂತನೆ ಮಾಡಲಾಗುತ್ತಿದೆ. ಗ್ರಾಮೀಣ
ಭಾಗದ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಜೊತೆ ಸ್ವ-ಉದ್ಯೋಗಕ್ಕೆ ವರವಾಗಲಿದೆ ಎಂದು ತಿಳಿಸಿದರು. ಈ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ ಅವರು ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ಧಾರೆ.

Advertisement

ಮುಂದಿನ ದಿನಗಳಲ್ಲಿ ನಿಮ್ಮ ಮತ್ತು ನಿಮ್ಮ ಗ್ರಾಮಗಳ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ. 30 ವರ್ಷಗಳಿಂದ ನಮ್ಮ ಕುಟುಂಬ ನಿಮ್ಮ ಸೇವೆ
ಮಾಡಿಕೊಂಡು ಬರುತ್ತಿದೆ. ಬಹಳ ಜನ ಕೇಂದ್ರದಲ್ಲಿ ಮೋದಿ ಜೀ ಪ್ರಧಾನಿ ಆಗಬೇಕು. ದಾವಣಗೆರೆಯಲ್ಲಿ ಗಾಯಿತ್ರಿ ಸಿದ್ದೇಶ್ವರ್‌ ಸಂಸದರಾಗಬೇಕು ಅಂತ ನಿರ್ಧಾರ ಮಾಡಿದ್ಧಾರೆ. ಈಗಾಗಲೇ ನಮ್ಮ ಗೆಲುವು ನಿಶ್ಚಿತ ಎಂದು ತಿಳಿಸಿದರು.

ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ನಿವಾಸಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ರವೀಂದ್ರನಾಥ್‌ ಅವರ
ಸಾರಥ್ಯದಲ್ಲಿ ಶಿರಮಗೊಂಡನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲಿ ಜೊತೆಯಾಗಿ ಪ್ರಚಾರ ನಡೆಸಿದರು. ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಾಜಿ ಮೇಯರ್‌ ಬಿ.ಜಿ.ಅಜಯ್‌ ಕುಮಾರ್‌, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ನಗರಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಶ್ರೀನಿವಾಸ್‌, ಮಂಡಲ ಅಧ್ಯಕ್ಷ ಆನಂದರಾವ್‌ ಸಿಂಧೆ, ವೆಂಕಟೇಶ, ನೀಲಗುಂದ ರಾಜು, ಗುರುಪ್ರಸಾದ್‌, ಗ್ರಾಪಂ ಮಾಜಿ ಸದಸ್ಯ ಬಸವರಾಜ್‌, ಗ್ರಾಮ
ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ, ನೀಲಮ್ಮ, ಮಹಾನಗರ ಪಾಲಿಕೆ ಸದಸ್ಯರು, ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಮುಖಂಡರು ಇದ್ದರು.

ಇದನ್ನೂ ಓದಿ: ISKCON ನಿಂದ ಕಳೆದ ತಿಂಗಳು 400 ಕೋಟಿ ಊಟ.. ಗಡಿಯಾಚೆಗೂ ಬಿಸಿಯೂಟ ಸೇವೆಗೆ ಸಿದ್ಧ: ಮಧು ಪಂಡಿತ

Advertisement

Udayavani is now on Telegram. Click here to join our channel and stay updated with the latest news.

Next