Advertisement
ಈ ಸಂದರ್ಭದಲ್ಲಿ ಮಾತನಾಡಿದ ಗಾಯಿತ್ರಿ ಸಿದ್ದೇಶ್ವರ, ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ನಮ್ಮ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾನು ಕೂಡ ಈಗಾಗಲೇ ಇಡೀ ಕ್ಷೇತ್ರ ಒಂದು ಸುತ್ತು ಸುತ್ತಿದ್ದೇನೆ. ಸಿದ್ದೇಶ್ವರ್ ಅವರು ನೋಡದ ಹಳ್ಳಿಗಳಿಲ್ಲ, ಹೋಗದ ರಸ್ತೆಗಳಿಲ್ಲ. ಇಡೀ ಕ್ಷೇತ್ರದ ಮತದಾರ ಪ್ರಭುಗಳು ನಮ್ಮ ಕುಟುಂಬದವರಿಗೆ ಆರು ಬಾರಿ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಅವರ ಆಶೀರ್ವಾದ ಸಿಗಲಿದೆ, ನಾನು ಗೆದ್ದು ಮೋದಿ ಅವರ ಕೈ ಬಲಪಡಿಸುತ್ತೇನೆ ಎಂಬ ವಿಶ್ವಾಸ ಇದೆ. ಮತದಾರರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.
ಕೈಗೊಂಡಿಲ್ಲ. ಅಧಿಕಾರ ಇದ್ದಾಗ ಏನೂ ಮಾಡಲು ಆಗದವರು ಈಗ ಬಂದು ನಾನು ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿದ್ದಾರೆ. ಇದು ದಿನವೂ ಮನೆ, ಕಲ್ಲೇಶ್ವರ ಮಿಲ್ ಬಿಟ್ಟು ಹೊರಗೆ ಬಾರದವರಿಗೆ ಜಿಲ್ಲೆಯ ಸಮಸ್ಯೆ ಏನು ಗೊತ್ತು ಎಂದು ಪ್ರಶ್ನಿಸಿದರು. ನನ್ನ ಕ್ರಮ ಸಂಖ್ಯೆ 1, ಗುರುತು ಕಮಲದ ಗುರುತು, ಬಿಜೆಪಿಗೆ ಹಾಕುವ
ಒಂದೊಂದು ಮತವೂ ದೇಶದ ಭವಿಷ್ಯ, ಸುರಕ್ಷೆ, ಸಮೃದ್ಧಿ, ಅಭಿವೃದ್ಧಿ, ಮುಂದಿನ ಯುವ ಪೀಳಿಗೆಯ ಭವಿಷ್ಯಕ್ಕಾಗಿ. ಅಮೂಲ್ಯವಾದ ಮತವನ್ನ ಬಿಜೆಪಿ ಹಾಕಿ,
ದೇಶ ಉಳಿಸಿ ಎಂದು ಮನವಿ ಮಾಡಿದರು. ಯಶವಂತರಾವ್ ಜಾಧವ್, ರಮೇಶ್‌ನಾಯ್ಕ, ರೇವಣ್ಣ ಸಿದ್ದಪ್ಪ, ಬಿಎಂ. ಸತೀಶ್, ಗ್ಯಾರಳ್ಳಿ ಶಿವಕುಮಾರ್ ಇತರರು ಇದ್ದರು.