Advertisement
ನಾಡಿನ ಹರಗುರು ಚರಮೂರ್ತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ನಾಡಿನ ಗಣ್ಯಾತೀತರು ನಾಡಿನ ಒಳಿತಿಗೆ ಬೇಡಿಕೊಂಡರು. ಸುತ್ತಲಿನ ನೂರಾರು ಹಳ್ಳಿಗಳ ಜನರು ಎತ್ತಿನ ಬಂಡಿ, ಟಂಟಂ, ಲಾರಿ ಸೇರಿ ಬಸ್‌ಗಳನ್ನೇರಿ ರವಿವಾರ ಮಧ್ಯಾಹ್ನವೇ ಜಾತ್ರೆಗೆಆಗಮಿಸಿದ್ದರೆ, ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಮಠದಲ್ಲಿ ಧಾರ್ಮಿಕ ಸಂಪ್ರದಾಯದಂತೆನಂದಿ ಕೋಲಿನ ಮೆರವಣಿಗೆ ಜರುಗಿತು. ಗವಿಸಿದ್ದೇಶ್ವರರ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಬಳಿಕ ಧ್ವಜಾರೋಹಣ ಸ್ಥಳಕ್ಕೆ ಆಗಮಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಡಾ| ಮಾಲತಿ ಹೊಳ್ಳ ಧ್ವಜಾರೋಹಣ ನೆರವೇರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
Related Articles
Advertisement
ಹೌದ್ದ ಹುಲಿಯಾ ಎಂದ ಅನ್ಸಾರಿ : ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಗವಿಸಿದ್ದೇಶ್ವರ ಮಹಾರಥೋತ್ಸವ ವೇಳೆ ಭಾಷಣ ಆರಂಭಿಸಿದರು. ಗವಿಮಠದ ಜಾತ್ರೆ, ಗತ ವೈಭವಮಾತನಾಡುತ್ತಲೇ ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ನೋಡುತ್ತಲೇ ಈಗಎಲ್ಲವೂ ಹೌದ್ದ ಹುಲಿಯಾ ಎನ್ನುವ ಮಾತು ಕೇಳಿ ಬರುತ್ತಿವೆ ಎನ್ನುವ.
ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಧ್ಯಾತ್ಮ, ಅಕ್ಷರ,ಅನ್ನದಾಸೋಹ ಸಂಸ್ಕೃತಿಯಲ್ಲಿ ಹೆಸರು ಮಾಡಿದೆ.ಅನೇಕ ಮಕ್ಕಳಿಗೆ ಶಿಕ್ಷಣ ಕೊಡುವ ಕಾಯಕವೂ ಮಠದಿಂದ ನಡೆದಿದೆ. ಇತ್ತೀಚೆಗೆ ಶ್ರೀಗಳು ಕೈಗೊಂಡ ಹಿರೇಹಳ್ಳದ ಸ್ವಚ್ಛತಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಶ್ರೀಗಳು ರೈತರ ಹಿತ ಕಾಯುತ್ತಿದ್ದಾರೆ. ಅದಕ್ಕೆ ಜಿಲ್ಲಾಡಳಿತವೂ ಸಹಕಾರ ನೀಡಿದೆ. ಗವಿಮಠವು ಸಾಮಾಜಿಕ ಆಂದೋಲನ ಜಾತ್ರೆಯಾಗಿದೆ. –ಪಿ. ಸುನೀಲ್‌ಕುಮಾರ್, ಕೊಪ್ಪಳ ಜಿಲ್ಲಾ ಧಿಕಾರಿ