ಮುಂಬಯಿ: ಅಖೀಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿಯ 87ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ವಿಶೇಷ ಅಲಂಕಾರ ಪೂಜೆಯು ಆ.25ರಂದು ಬಲು ಸಡಗರದಿಂದ ಜರಗಿತು. ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಹಾದೇವ ಪೂಜಾರಿ ಅವರ ನೇತೃತ್ವದಲ್ಲಿ ಯಕ್ಷ ಪ್ರಿಯ ಬಳಗ ಮತ್ತು ಯಕ್ಷ ಕಲಾ ತರಂಗದ ಹಿಮ್ಮೇಳದವರ ಚೆಂಡೆ ಮದ್ದಳೆಯ ನಿನಾದದೊಂದಿಗೆ ಪ್ರಧಾನ ಅರ್ಚಕ ವೇದಮೂರ್ತಿ ಡಾ | ಎಂ. ಜೆ. ಪ್ರವೀಣ್ ಭಟ್ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸಂಪ್ರದಾಯದಂತೆ ಗ್ರಾಮದೇವಿಯ ಸನ್ನಿಧಿಯಲ್ಲಿ ಪೂಜೆ ನೆಡೆದ ಬಳಿಕ ಭವ್ಯ ರಂಗ ಮಂಟಪದಲ್ಲಿ ರಾರಾಜಿಸುವ ವಿN°àಶ್ವರನಿಗೆ 23 ಆರತಿಗಳೊಂದಿಗೆ ವಿಶೇಷ ಮಹಾಪೂಜೆ ನೆರವೇರಿತು. ತದನಂತರ ನೆರೆದ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ಪ್ರಿಯ ಬಳಗ ಮತ್ತು ಯಕ್ಷ ಕಲಾ ತರಂಗ ಹಾಗೂ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ಸುದರ್ಶನ ವಿಜಯ-ಸುಧನ್ವ ಮೋಕ್ಷ ಎಂಬ ಕಥಾ ಭಾಗದ ಯಕ್ಷಗಾನ ಬಯಲಾಟವು ಪ್ರದರ್ಶನಗೊಂಡಿತು.
ಎನ್. ಎನ್. ಪೂಜಾರಿ, ಸಾವಿತ್ರಿ ಎಂ. ಪೂಜಾರಿ, ಲಲಿತಾ ಎಸ್. ದೇವಾಡಿಗ, ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ, ಕಾರ್ಯದರ್ಶಿ ಯಶೋದಾ ಎಸ್. ಪೂಜಾರಿ, ಸಜೀತ್ ಮಾರಣಕಟ್ಟೆ , ರಂಗ ಎಸ್. ಪೂಜಾರಿ, ಸತೀಶ್ ಪೂಜಾರಿ ನಾಗೂರು, ಬಾಲರಾಜ್ ಆಚಾರ್ಯ, ದಾಮೋದರ್ ಪೂಜಾರಿ, ಲೋಕೇಶ್ ನಾಯ್ಕ ಮತ್ತು ಯಕ್ಷಗಾನ ಕಲಾವಿದರು ಹಾಗೂ ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ನೆರೆದಿದ್ದರು.
ಸುಧಾಕರ ಪೂಜಾರಿ,ಜನಾರ್ಧನ ನಾಯ್ಕನಕಟ್ಟೆ, ಅಣ್ಣಪ್ಪ ಚೆರುಮಕ್ಕಿ, ಸಾಗರ್ ದೇವಾಡಿಗ, ಗೋಪಾಲ್ ಪೂಜಾರಿ ಮತ್ತಿತರರು ಕಾರ್ಯಕ್ರಮ ನೆರವೇರಲು ಸಹಕರಿಸಿದರು.