Advertisement

60 ಓವರ್‌ ಪೂರ್ತಿ ಆಡಿ 36 ರನ್‌ ಗಳಿಸಿದ ಗಾವಸ್ಕರ್‌!

10:25 AM Dec 08, 2019 | mahesh |

ಕ್ರಿಕೆಟ್‌ ಆಟಗಾರನಾಗಿ ವಿಪರೀತ ಅನ್ನುವಷ್ಟು ಜನಪ್ರಿಯತೆ, ಹಣ ಮಾಡಿದವರ ಪೈಕಿ ಸುನೀಲ್‌
ಗಾವಸ್ಕರ್‌ಗೆ ಪ್ರಮುಖ ಸ್ಥಾನ. ಟೆಸ್ಟ್‌ ಕ್ರಿಕೆಟ್‌ನಲ್ಲಿ 10000 ರನ್‌ ಗಳಿಸಿದ ಜಗತ್ತಿನ ಮೊದಲ ಆಟಗಾರ ಎಂಬ ಒಂದು ಹೆಗ್ಗಳಿಕೆ, ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ (ಈ ದಾಖಲೆ ಮುರಿಯಲ್ಪಟ್ಟಿದೆ) ಎಂಬ ಇನ್ನೊಂದು ಹೆಗ್ಗಳಿಕೆ ಕೂಡ ಗಾವಸ್ಕರ್‌ ಅವರದ್ದೇ ಆಗಿತ್ತು ಎಂಬುದನ್ನು ತಪ್ಪದೇ
ಹೇಳಬೇಕು. ಗಾವಸ್ಕರ್‌ ಹೆಸರಿನಲ್ಲಿ ಇರುವ ದಾಖಲೆಗಳು ಹಲವು. ಕುಳ್ಳಗಿದ್ದ ಕಾರಣಕ್ಕೆ, ಜಿಗಿದು
ಕ್ಯಾಚ್‌ ಹಿಡಿಯಲು ಅಥವಾ ಡೈವ್‌ ಹೊಡೆದು ಚೆಂಡು ತಡೆಯಲು ಆಗುವುದಿಲ್ಲ ಎಂಬ ಕಾರಣಕ್ಕೆ
ಈತನನ್ನು ಸ್ಲಿಪ್‌ನಲ್ಲಿ ಫೀಲ್ಡಿಂಗ್‌ಗೆ ನಿಲ್ಲಿಸಲಾಗುತ್ತಿತ್ತು. ಈ ಮಹರಾಯ ಅಲ್ಲಿ
ನಿಂತಿದ್ದೇ ಭರ್ತಿ 100 ಕ್ಯಾಚ್‌ ಹಿಡಿದ. ಪರಿಣಾಮ, 100 ಕ್ಯಾಚ್‌ ಹಿಡಿದ ಮೊದಲ ಭಾರತೀಯ
ಎಂಬ ಹೆಗ್ಗಳಿಕೆ ಕೂಡ ಅವನದೇ ಆಯ್ತು.

Advertisement

ಗಾವಸ್ಕರ್‌ ಹೆಸರಲ್ಲಿ ಇರುವ ಇನ್ನೊಂದು ಅಪರೂಪದ ದಾಖಲೆ ಎಂದರೆ, ಒಂದು ದಿನದ
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪೂರ್ತಿ 50 ಓರ್ವ ಆಡಿ, ಅತಿ ಕಡಿಮೆ ರನ್‌ ಗಳಿಸಿದ್ದು! ಏಕದಿನ ಪಂದ್ಯವೆಂದರೆ ಎಂಥಾ ತೆಪರು ಆಟಗಾರ ಆದರೂ ಪೂರ್ತಿ 15 ಓರ್ವ ಆಡಿದರೂ ಕಡಿಮೆ ಅಂದರೂ 25 ರನ್‌ ಹೊಡೆಯುತ್ತಾನೆ. ಅಷ್ಟು ರನ್‌ ಹೊಡೆಯಲೇ ಬೇಕು. ಆದರೆ ಈ ಮಹರಾಯ ಗಾವಸ್ಕರ್‌, ಪೂರ್ತಿ
60 ಓವರ್‌ ಆಡಿ, 174 ಎದುರಿಸಿ ಕೇವಲ 36 ರನ್‌ ಹೊಡೆದರು! ( ಆ ಸಂದರ್ಭದಲ್ಲಿ ಏಕದಿನ
ಪಂದ್ಯ 60 ಓವರ್‌ ನಡೆಯುತ್ತಿತ್ತು). ಅಷ್ಟು ಹೊತ್ತಿನ ಸುದೀರ್ಘ‌ ಆಟದಲ್ಲಿ ಕೇವಲ ಒಂದು ಬೌಂಡರಿ ಇತ್ತು. ಇಂಗ್ಲೆಂಡ್‌ ತಂಡದ ವಿರುದ್ಧ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್‌ 336 ರನ್‌ ಗಳಿಸಿತು. ಭಾರತ 3 ವಿಕೆಟ್‌ ನಷ್ಟಕ್ಕೆ 132 ರನ್‌ ಗಳಿಸಿತು. ಭಾರತ ಆ ಮ್ಯಾಚ್‌ ಸೋತಿತು ನಿಜ. ಆದರೆ ಗಾವಸ್ಕರ್‌ ಕಿರೀಟಕ್ಕೆ ಹೊಸದೊಂದು ದಾಖಲೆ ಸೇರಿಕೊಂಡಿತು.


ಮೊದಲ ಎಸೆತವೇ ಸಿಕ್ಸರ್‌ಗೆ ಅಟ್ಟಿದ ಕ್ರಿಸ್‌ ಗೇಲ್‌

ಟೆಸ್ಟ್‌ ಪಂದ್ಯ ಅಂದರೆ ಪೂರ್ತಿ ಐದು ದಿನದ ಆಟ. ಅಲ್ಲಿ ಅವಸರ ಇರುವುದಿಲ್ಲ.
ಆಟಗಾರರು ಈ ಲೆಕ್ಕಾಚಾರದಲ್ಲಿಯೇ ಮೈದಾನಕ್ಕೆ ಇಳಿಯುತ್ತಾರೆ. ಒಂದು ದಿನದ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ ಅರ್ಧಗಂಟೆಯಲ್ಲಿ 50 ರನ್‌ ಹೊಡೆಯುವ ಆಟಗಾರ,
ಟೆಸ್ಟ್‌ನಲ್ಲಿ ಪೂರ್ತಿ ಅರ್ಧ ದಿನ ಆಡಿದರೂ 40 ರನ್‌ ನ ಗಡಿ ದಾಟಿ ನಿರುಮ್ಮಳ ಭಾವದಿಂದ
ಇರುತ್ತಾನೆ. ಐದು ದಿನ ಸಮಯವಿದೆ ಅನ್ನುವ ಕಾರಣಕ್ಕೇ ಬ್ಯಾಟ್ಸ್‌ಮನ್‌ಗಳೂ ಮೊದಲ ಓವರ್‌
ನಲ್ಲಿಯೇ ಬೌಂಡರಿ ಹೊಡೆಯುವ ಪ್ರಯತ್ನ ಮಾಡುವುದಿಲ್ಲ. ಟೆಸ್ಟ್‌ ಕ್ರಿಕೆಟ್‌ ಆರಂಭ
ಆದಾಗಿಂದಲೂ ಇದು ಒಂದು ಸಂಪ್ರದಾಯದಂತೆಯೇ ನಡೆದುಕೊಂಡು ಬಂತು. ಆದರೆ, ಕ್ರಿಸ್‌ ಗೇಲ್‌
ಎಂಬ ಬಿಡುಬೀಸಿನ ಆಟಗಾರ ಬಂದವನೇ, ಅದೊಂದು ಸಂಪ್ರದಾಯವನ್ನೇ ಬದಲಿಸಿಬಿಟ್ಟ.
2012ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಓವರ್‌ ಮೊದಲ
ಎಸೆತವನ್ನೇ ಸಿಕ್ಸರ್‌ಗೆ ಕಳಿಸಿ ಹೊಸದೊಂದು ದಾಖಲೆ ಬರೆದ ಗೇಲ…. 137 ವರ್ಷದ
ಕ್ರಿಕೆಟ್‌ ಇತಿಹಾಸದಲ್ಲಿ, ಟೆಸ್ಟ್‌ ಪಂದ್ಯದಲ್ಲಿ ಮೊದಲ ಬಾಲನ್ನೇ ಸಿಕ್ಸರ್‌ಗೆ ಹೊಡೆದ
ಧೀರ ಅನ್ನಿಸಿಕೊಂಡ…

Advertisement

Udayavani is now on Telegram. Click here to join our channel and stay updated with the latest news.

Next