*
ಯಾಮಿ ಗೌತಮ್ ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಗ, “ಅವಳು’ ಜೊತೆ ಮಾತನಾಡುತ್ತಾ, “ಹಿಮಾಚಲ ಪ್ರದೇಶದ ಹಿಮದಷ್ಟೇ ತಣ್ಣನೆಯ ಹುಡುಗಿ ತಾನು’ ಅಂತ ಹೇಳಿಕೊಂಡಿದ್ದರು. ಹಿಮಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಹುಟ್ಟಿ ಚಂಡೀಘಡದಲ್ಲಿ ಬೆಳೆದವರು ಯಾಮಿ. “ಅಚ್ಚ ಬಿಳುಪಿನ ಹಿಮಬೆಟ್ಟಗಳನ್ನ ನೋಡುತ್ತ ಬೆಳೆದ ನನಗೆ ನಿಸರ್ಗ ಸಹಜತೆಯ ಪಾಠ ಹೇಳಿಕೊಟ್ಟಿದೆ’ ಎನ್ನುವ ಯಾಮಿ ಗೌತಮ್, ಉಡುಪು, ನಡತೆ, ವ್ಯಕ್ತಿತ್ವದಲ್ಲಿ ಸರಳತೆಯನ್ನೇ ಮೆರೆದವರು.
Advertisement
ಕಾಬಿಲ್‌ನ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದ ಯಾಮಿ, ದುಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಪುಟಾಣಿ ಫ್ರಾಕ್‌ನಲ್ಲಿ. ಕಪ್ಪು ಬಿಳಿ ಬಣ್ಣದ ಚೆಕ್ಸ್ ಚೆಕ್ಸ್ ಫ್ರಾಕ್. ಅಲ್ಲೊಂದು ಇಲ್ಲೊಂದು ಕೆಂಪು ಗುಲಾಬಿ ಹೂವು. ಅಂಚಿಗೆ ಕಪ್ಪು ಬಣ್ಣದ ಫ್ರಿಲ್. ಸಡನ್ನಾಗಿ ನೋಡಿದ್ರೆ ಪಕ್ಕದ್ಮನೆ ಪಾಪುವಿನ ಫ್ರಾಕ್‌ನ ಎತ್ಕೊಂಡು ಬಂದು ಹಾಕ್ಕೊಂಡ ಹಾಗೆ! ಯಾಮಿಯ ಈ ಕೂಲ್ ಟ್ರಾವೆಲ್ ಅವತಾರ್‌ಗೆ ಡಿಸೈನರ್ ಜೈ ಅಂದಿದ್ದಾರೆ. ಈ ಡ್ರೆಸ್‌ನ° ಡಿಸೈನ್ ಮಾಡಿರೋದು ಸಂಚಿತಾ. ಆಕೆ ಹೇಳ್ಳೋ ಪ್ರಕಾರ , “ಚಕ್ಕರ್x ಡ್ರೆಸ್‌ಗಳಿಗೆ ಸಾಂಪ್ರದಾಯಿಕ ಹಿನ್ನೆಲೆ ಇದೆ. ಅದರಲ್ಲೂ ಬ್ಲ್ಯಾಕ್ ಆ್ಯಂಡ್ ವೈಟ್ ಚಕ್ಕರ್x ಡ್ರೆಸ್‌ಗಳು 80ರ ದಶಕದಲ್ಲಿ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಡ್ರೆಸ್‌ಗಳು ಎಂದೇ ಫೇಮಸ್ ಆಗಿದ್ದವು. ಚಕ್ಕರ್x ಮಿನಿ ಡ್ರೆಸ್‌ಗಳನ್ನು ತೊಡುವುದು ಅತ್ಯಂತ ಸ್ಟೈಲಿಸ್ಟ್ ಎಂದೇ ನಂಬಲಾಗಿತ್ತು. ಬಾಲಿವುಡ್‌ಗೆ ಈ ಸ್ಟೈಲ್ ಬಂದದ್ದು ಐರೋಪ್ಯ ಮೂಲದ ಸಿನಿಮಾಗಳಿಂದ. ಆ ವೈಭವವನ್ನು ಮತ್ತೆ ಈ ಡ್ರೆಸ್‌ಗಳ ಮೂಲಕ ಹಿಡಿದಿಡುವ ಪ್ರಯತ್ನ ಮಾಡುತ್ತೇನೆ’ ಅಂತಾರೆ.
Related Articles
Advertisement