Advertisement

ಕಿಂಗ್ಸ್‌  ಇಲೆವೆನ್‌ ಪಂಜಾಬ್‌ ಗೆ ಗಂಭೀರ್‌ ಕೋಚಿಂಗ್‌?

12:11 PM Dec 15, 2018 | Team Udayavani |

ಮೊಹಾಲಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದ ಗೌತಮ್‌ ಗಂಭೀರ್‌ ಹೊಸ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ದಿಲ್ಲಿ ಕ್ರಿಕೆಟಿಗ ಮುಂಬರುವ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಕೋಚಿಂಗ್‌ ಸಿಬಂದಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

Advertisement

ಈ ಕುರಿತಂತೆ ಪಂಜಾಬ್‌ ಫ್ರಾಂಚೈಸಿ ಗಂಭೀರ್‌ಗೆ ಆಹ್ವಾನ ನೀಡಿದೆ ಎನ್ನಲಾಗಿದೆ. ಇತ್ತೀಚೆಗೆ ಗಂಭೀರ್‌ ಜತೆ ಪಂಜಾಬ್‌ ಸಾಮಾಜಿಕ ಜಾಲತಾಣದಲ್ಲಿ ಸಂಭಾಷಣೆ ನಡೆಸಿತ್ತು. ಈ ವೇಳೆ ಪಂಜಾಬ್‌ ತಂಡವನ್ನು ದೇಶಿ ಕ್ರಿಕೆಟ್‌ ಕೂಟದಲ್ಲಿ ಸೇರಿಕೊಳ್ಳುವ ಸೂಚನೆಯೊಂದನ್ನು ಗಂಭೀರ್‌ ನೀಡಿದ್ದರು. ಹೀಗಾಗಿ ಅವರು ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next