ಮುಂಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತ ತಲುಪುತ್ತಿದೆ. ಲೀಗ್ ಹಂತದ ಪಂದ್ಯಗಳು ಮುಗಿದು ಇನ್ನು ಕೇವಲ ಪ್ಲೇ ಆಫ್ ಹಂತ ಮಾತ್ರ ಬಾಕಿಯಿದೆ. ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಸಿದ್ದು, ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಹಣಾಹಣಿ ನಡೆಸಲಿದೆ.
ಕೆ.ಎಲ್.ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶ ಪಡೆಯದೇ ಇದ್ದರೂ ರಾಹುಲ್ ಮಾತ್ರ ತನ್ನ ಬ್ಯಾಟಿಂಗ್ ನಿಂದ ಮಿಂಚಿದ್ದಾರೆ. ಈ ಬಾರಿಯೂ 600ಕ್ಕಿಂತ ಹೆಚ್ಚಿನ ರನ್ ಗಳಿಸಿದ್ದಾರೆ.
ಕೆ ಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಮಾಜಿ ಆಟಗಾರ ಗೌತಮ್ ಗಂಭೀರ್, ಕೆ ಎಲ್.ರಾಹುಲ್ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಬಿಜೆಪಿಯವರು ಓಟಿಗಾಗಿ ಸೆಕ್ಯೂಲರ್ ಆಗಲು ಹೊರಟಿದ್ದಾರೆ: ಪ್ರಮೋದ್ ಮುತಾಲಿಕ್ ವಾಗ್ದಾಳಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ರಾಹುಲ್ ಸ್ಪೋಟಕ ಅರ್ಧಶತಕ ಬಾರಿಸಿದ್ದರು. ಆ ಬಳಿಕ ಮಾತನಾಡಿದ ಗಂಭೀರ್, “ನೀವು ಈ ರೀತಿ ಬ್ಯಾಟ್ ಮಾಡಲು ಸಾಧ್ಯವಾಗುವುದಾದರೆ ಯಾಕೆ ಪ್ರತಿ ಬಾರಿಯೂ ಈ ರೀತಿ ಬ್ಯಾಟ್ ಮಾಡಬಾರದು? ಮತ್ತು ಬಹುಶಃ ರಾಹುಲ್ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಪಡೆದಿದ್ದಾರೆ. ಅವನು ಭಾರತದಲ್ಲಿ ಬೇರೆಯವರಿಗಿಂತ ಹೆಚ್ಚು ಹೊಡೆತಗಳನ್ನು (ಶಾಟ್ಸ್) ಪಡೆದಿದ್ದಾನೆ. ಮತ್ತು ಅವನು ಅದನ್ನು ಇಂದಿನ ಆಟದಲ್ಲಿ ತೋರಿಸಿದ್ದಾನೆ “ಎಂದರು.
ಕೆ ಎಲ್ ರಾಹುಲ್ ಸದ್ಯ ಕೂಟದಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ಹೊಂದಿದ್ದಾರೆ.