Advertisement

ವಿದಾಯ ಪಂದ್ಯದಲ್ಲಿ ಗಂಭೀರ್‌ ಶತಕ

09:00 AM Dec 09, 2018 | |

ಹೊಸದಿಲ್ಲಿ: ಖ್ಯಾತ ಎಡಗೈ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ತಮ್ಮ ವಿದಾಯ ಪಂದ್ಯವನ್ನು ಸ್ಮರಣೀಯಗೊಳಿಸಿದ್ದಾರೆ. ಆಂಧ್ರ ಪ್ರದೇಶ ವಿರುದ್ಧ ತವರಿನ “ಫಿರೋಜ್‌ ಷಾ ಕೋಟ್ಲಾ’ ಅಂಗಳದಲ್ಲಿ ಕೊನೆಯ ಸಲ ಬ್ಯಾಟ್‌ ಹಿಡಿದು ಬಂದ ಗಂಭೀರ್‌ 3ನೇ ದಿನದಾಟದಲ್ಲಿ ಶತಕ ಬಾರಿಸಿ ಮಿಂಚಿದರು. 

Advertisement

92 ರನ್ನಿನಿಂದ ಬ್ಯಾಟಿಂಗ್‌ ಮುಂದುವರಿಸಿದ ಗಂಭೀರ್‌ 112 ರನ್‌ ಬಾರಿಸಿ ಅಭಿಮಾನಿಗಳನ್ನು ರಂಜಿಸಿದರು. 185 ಎಸೆತಗಳ ಈ ಬ್ಯಾಟಿಂಗ್‌ ವೇಳೆ 10 ಬೌಂಡರಿ ಸಿಡಿಯಿತು. ಗಂಭೀರ್‌ ಅವರ ಈ ಆಕರ್ಷಕ ಆಟಕ್ಕೆ ಪತ್ನಿ ಹಾಗೂ ಇಬ್ಬರು ಪುತ್ರಿಯರೂ ಸಾಕ್ಷಿಯಾದರು. ಶುಕ್ರವಾರ ಗಂಭೀರ್‌ ಅರ್ಧ ಶತಕ ಪೂರೈಸಿದ ವೇಳೆ ಇವರು ಸ್ಟೇಡಿಯಂಗೆ ಆಗಮಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next