ಮುಂಬೈ: ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರು ಸಾರ್ವಕಾಲಿಕ ಭಾರತ Xl ಆಯ್ಕೆ (All Time Xl) ಮಾಡಿದ್ದಾರೆ. ತಮ್ಮ ತಂಡದಲ್ಲಿ ಮಹೇಂದ್ರ ಸೀಂಗ್ ಧೋನಿ ಅವರನ್ನು ಆಯ್ಕೆ ಮಾಡಿರುವ ಗಂಭೀರ್, ಕೆಲವು ಪ್ರಮುಖ ಹೆಸರುಗಳನ್ನು ಕೈಬಿಟ್ಟಿದ್ದಾರೆ.
ಭಾರತದ ಮಾಜಿ ಆರಂಭಿಕ ಬ್ಯಾಟರ್ ಗಂಭೀರ್ ಅವರು ತಂಡದಲ್ಲಿ ಪ್ರಸ್ತುತ ನಾಯಕ ರೋಹಿತ್ ಶರ್ಮಾ ಮತ್ತು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಡುವ ಮೂಲಕ ಅನೇಕರನ್ನು ಅಚ್ಚರಿಗೊಳಿದ್ದಾರೆ.
ಸ್ಪೋರ್ಟ್ಸ್ ಕೀಡಾ ಜೊತೆ ನಡೆದ ಮಾತುಕತೆಯಲ್ಲಿ ಗಂಭೀರ್ ಅವರು ತಮ್ಮ ಸಾರ್ವಕಾಲಿಕ ತಂಡ ಆಯ್ಕೆ ಮಾಡಿದರು. ಆರಂಭಿಕ ಆಟಗಾರರಲ್ಲಿ ತನ್ನ ಜತೆಗೆ (ಗೌತಮ್ ಗಂಭೀರ್) ವೀರೆಂದ್ರ ಸೆಹವಾಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಗಂಭೀರ್ ಅವರು ಮಾಜಿ ನಾಯಕ, ಮಾಜಿ ಕೋಚ್ ರಾಹುಲ್ ದ್ರಾವಿಡ್ ರನ್ನು ಆಯ್ಕೆ ಮಾಡಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್, ಬಳಿಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಆಯ್ಕೆ ಮಾಡಿದ್ದಾರೆ.
ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಅನಿಲ್ ಕುಂಬ್ಳೆ ಮತ್ತು ರವಿಚಂದ್ರನ್ ಅಶ್ವಿನ್ ಅವರು ಗಂಭೀರ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ವೇಗಿಗಳಾಗಿ ಇರ್ಫಾನ್ ಪಠಾಣ್ ಮತ್ತು ಜಹೀರ್ ಖಾನ್ ಅವರು ಗಂಭೀರ್ ತಂಡದಲ್ಲಿದ್ದಾರೆ.
ಗಂಭೀರ್ ಅವರ ಭಾರತ ಸಾರ್ವಕಾಲಿಕ XI: ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂಎಸ್ ಧೋನಿ (ವಿ.ಕೀ), ಅನಿಲ್ ಕುಂಬ್ಳೆ, ರವಿಚಂದ್ರನ್ ಅಶ್ವಿನ್, ಇರ್ಫಾನ್ ಪಠಾಣ್, ಜಹೀರ್ ಖಾನ್