Advertisement
ಈ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಕ್ಯಾಚ್ ಇದೀಗ ಚರ್ಚೆಯ ವಿಷಯವಾಗಿದೆ. ಪಂಜಾಬ್ ಗೆಲುವಿಗೆ 9 ಎಸೆತದಲ್ಲಿ 11 ರನ್ ಅವಶ್ಯಕತೆಯಿತ್ತು. ಈ ವೇಳೆ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಚೆಂಡನ್ನು ಮಿಡ್ ವಿಕೆಟ್ ಕಡೆಗೆ ಬಾರಿಸಿದರು. ಫೀಲ್ಡರ್ ರಾಹುಲ್ ತ್ರಿಪಾಠಿ ಓಡಿ ಬಂದು ಡೈವ್ ಹಾಕಿ ಚೆಂಡನ್ನು ಹಿಡಿದು ಸಂಭ್ರಮಿಸಿದರು.
Related Articles
Advertisement
ಆದರೆ ಈ ತೀರ್ಪಿನ ವಿರುದ್ಧ ಗೌತಮ್ ಗಂಭೀರ್ ಮತ್ತು ಗ್ರೇಮ್ ಸ್ವಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ ಇದು ನಾನು ನೋಡಿದ ಅತ್ಯಂತ ಕೆಟ್ಟ ಅಂಪೈರಿಂಗ್ ನಿರ್ಧಾರ’ ಎಂದು ಗ್ರೇಮ್ ಸ್ವಾನ್ ಹೇಳಿದ್ದಾರೆ.
ಅವರು ರಿಪ್ಲೇ ಒಂದು ಬಾರಿಗಿಂತ ಹೆಚ್ಚು ನೋಡಿಲ್ಲ. ಒಂದು ವೇಳೆ ಕೆ ಎಲ್ ರಾಹುಲ್ ಔಟಾಗಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು. ಇಂತಹ ಘಟನೆಗಳು ಐಪಿಎಲ್ ನಲ್ಲಿ ಮರುಕಳಿಸಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.