ಥಿಂಪು(ಭೂತಾನ್): ಭಾರತದ ಶ್ರೀಮಂತ ಕೈಗಾರಿಕೋದ್ಯಮಿ ಗೌತಮ್ ಅದಾನಿ ಭೂತಾನ್ ಪ್ರಧಾನಿಯನ್ನು ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಭೂತಾನ್ ನಲ್ಲಿ 570 ಮೆಗಾ ವ್ಯಾಟ್ ನ ಗ್ರೀನ್ ಹೈಡ್ರೋ ಪ್ಲಾಂಟ್ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿದರು.
ಇದನ್ನೂ ಓದಿ:ICC T20 World Cup: ಇನ್ನು ಸೂಪರ್ 8 ಕದನ; ಇಲ್ಲಿದೆ ಭಾರತದ ಪಂದ್ಯಗಳ ವಿವರ
ಭೂತಾನ್ ಪ್ರಧಾನಿ ಅವರೊಂದಿಗೆ ಗೌತಮ್ ಅದಾನಿ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಭೂತಾನ್ ಪ್ರಧಾನಿ ದಶೋ ತ್ಶೆರಿಂಗ್ ಟೋಬ್ ಅವರ ಜತೆ ಮಾತುಕತೆ ನಡೆಸಿದ್ದು, ಚುಖಾ ಪ್ರಾಂತ್ಯದಲ್ಲಿ 570 ಮೆಗಾ ವ್ಯಾಟ್ ನ ಗ್ರೀನ್ ಹೈಡ್ರೋ ಸ್ಥಾವರ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಅದಾನಿ ತಿಳಿಸಿದ್ದಾರೆ.
ಗ್ರೀನ್ ಹೈಡ್ರೋ ಸ್ಥಾವರ ಸೇರಿದಂತೆ ಭೂತಾನ್ ನಲ್ಲಿ ಇನ್ನೂ ಹೆಚ್ಚಿನ ಕಾರ್ಯ ನಡೆಸಲು ಎದುರು ನೋಡುತ್ತಿರುವುದಾಗಿ ಅದಾನಿ ಆಶಯ ವ್ಯಕ್ತಪಡಿಸಿದ್ದಾರೆ. ಭೂತಾನ್ ಪ್ರಧಾನಿ ಮತ್ತು ರಾಜನನ್ನು ಅದಾನಿ ಭೇಟಿಯಾಗಿರುವ ಫೋಟೋಗಳನ್ನು ಅದಾನಿ ಗ್ರೂಪ್ ಅಧ್ಯಕ್ಷರಾದ ಅದಾನಿ ತನ್ನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.