Advertisement
ಜತೆಗೆ ಮೆರವಣಿಗೆ ಹಾಗೂ ಸಮಾವೇಶದ ಪ್ರಾರಂಭದಿಂದ ಕೊನೆವೆರೆಗೂ “ಗೌರಿ ಹತ್ಯೆ ಹಂತಕರ ಪತ್ತೆ’ ಮಾಡಿ ಎಂಬ ಹಕ್ಕೊತ್ತಾಯ ನಿರಂತರವಾಗಿ ಕೇಳಿಬರುತ್ತಿತ್ತು. “ನಾನು ಗೌರಿ, ವ್ಯಕ್ತಿಯನ್ನು ಕೊಲ್ಲಬಹುದು… ವಿಚಾರಧಾರೆಯನ್ನಲ್ಲ’ ಎಂಬ ಫಲಕಗಳನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಎತ್ತಿ ಹಿಡಿದು ಗೌರಿ ಲಂಕೇಶ್ ರೇಖಾಚಿತ್ರ ಇರುವ ಕಪ್ಪು ಪಟ್ಟಿ ಕಟ್ಟಿಕೊಂಡು ಹೋರಾಟದ ಕಿಚ್ಚು ಪ್ರದರ್ಶಿಸಿದರು.
Related Articles
Advertisement
ಸಮಾವೇಶದಲ್ಲಿ ಚಿದಾನಂದ ರಾಜಘಟ್ಟ: ಗೌರಿ ಲಂಕೇಶ್ ವಿಚ್ಛೇದಿತ ಪತಿ ಚಿದಾನಂದ ರಾಜಘಟ್ಟ ಪತ್ನಿ ಸಮೇತ ಸಮಾವೇಶದಲ್ಲಿ ಭಾಗವಹಿಸಿದ್ದರು. ರಾಜಘಟ್ಟ ಹಾಗೂ ಅವರ ಪತ್ನಿ ಸಮಾವೇಶಕ್ಕಾಗಿಯೇ ಅಮೆರಿಕಾದಿಂದ ಬಂದಿದ್ದರು. ಸಾಮಾನ್ಯರಂತೆ ಕಾರ್ಯಕರ್ತರ ಮಧ್ಯೆ ಕುಳಿತು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಪೆರಿಯಾರ್ ಪ್ರಶಸ್ತಿ: ಹತ್ಯೆಯಾಗಿರುವ ಗೌರಿ ಲಂಕೇಶ್‌ಗೆ ಪೆರಿಯಾರ್ ಅವರ 130ನೇ ಜನ್ಮದಿನಾಚರಣೆಯ ಅಂಗವಾಗಿ ಪೆರಿಯಾರ್ ಪ್ರಶಸ್ತಿ ಘೋಷಣೆ ಮಾಡಿದೆ. ಸೆ.17ರಂದು ನಗರದ ಕಾನಿಷ್ಕ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರಿ ಅವರ ಕುಟುಂಬ ಸದಸ್ಯರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕೋಮುವಾದಿಗಳನ್ನು ಅಧಿಕಾರಕ್ಕೆ ತಂದು ಕೈಕೊಟ್ಟು ಹಗ್ಗ ಕಟ್ಟಿಸಿಕೊಂಡಂತಾಗಿದೆ. ಕಾಂಗ್ರೆಸ್ ಕುದಿಯುವ ನೀರು ಇದ್ದಂತೆ. ಪ್ರಾದೇಶಿಕ ಪಕ್ಷಗಳು ನಿಂತ ನೀರು, ಎಡಪಕ್ಷಗಳು ಶುದ್ಧ ನೀರು, ಆದರೆ ಅದು ಪಾತಾಳಗಂಗೆ ಇದ್ದಂತೆ ಆ ನೀರು ಕುಡಿಯಲು ಸಿಗುವುದಿಲ್ಲ. ಬಿಜೆಪಿ ಬೆಂಕಿ ಇದ್ದಂತೆ. ಈ ಕುದಿಯವ ನೀರು, ನಿಂತ ನೀರು ಹಾಗೂ ಶುದ್ಧ ನೀರು ಸೇರಿ ಬೆಂಕಿ ಆರಿಸುವ ಕೆಲಸ ಮಾಡಬೇಕಾಗಿದೆ.-ವೀರಭದ್ರಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ ಗೌರಿ ಹತ್ಯೆ ನಮ್ಮನ್ನೆಲ್ಲ ಕಲಕಿದೆ. ದ್ವೇಷ ಬೆಳೆಸುವ ರಾಜಕೀಯ ಪಕ್ಷ ಹಾಗೂ ಧರ್ಮಗಳು ನಮಗೆ ಬೇಕಿಲ್ಲ. ಇದರ ವಿರುದ್ಧ ಗದಾಪ್ರಹಾರ ಮಾಡಬೇಕಾಗಿದೆ. ತೇಪೆ ಹಚ್ಚುವ ಕೆಲಸ ಆಗಬಾರದು. ಸುಧಾರಣೆಯ ಮನ್ವಂತರ ಆರಂಭಿಸಬೇಕಾಗಿದೆ. ಕ್ರಾಂತಿ ಎಂದರೆ ರಕ್ತ ಕ್ರಾಂತಿ ಎಂಬ ಭ್ರಾಂತಿ ಬೇಡ. ಮನಸ್ಸುಗಳ ಪರಿವರ್ತನೆಯ ಕ್ರಾಂತಿ ಆಗಬೇಕು.
-ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ ಕಲಬುರ್ಗಿ ಮತ್ತು ಗೌರಿಯ ಹತ್ಯೆ ಮಾಡಿದವರು ಸಂತೋಷಪಡುತ್ತಿದ್ದಾರೆ. ಈ ಸಾವು ಇತಿಹಾಸ ಪುಟಗಳಲ್ಲಿ ದಾಖಲಾಗುತ್ತದೆ. ಇದರಿಂದ ನೊಂದು-ಬೆಂದುಕೊಳ್ಳುವುದು ಬೇಡ. ಪುರೋಹಿತಶಾಹಿ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ.
-ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚುವ ಪ್ರಾಮಾಣಿಕ ಕೆಲಸ ಸರ್ಕಾರ ಮಾಡುತ್ತಿರಬಹುದು. ಆದರೆ, ಆರೋಪಿಗಳು ಪತ್ತೆಯಾಗುತ್ತಾರೆ ಎಂಬ ಖಾತರಿ ಇಲ್ಲ.
-ಎ.ಕೆ. ಸುಬ್ಬಯ್ಯ, ಹಿರಿಯ ವಕೀಲ