Advertisement
ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಮರ್ಥಿಸಿಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರನ್ನು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ಗಳಲ್ಲಿ ಅವರ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು. ಜತೆಗೆ ಗೌರಿ ಲಂಕೇಶ್ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ ಹೇಳಿಕೆಗಳನ್ನು ಹಾಕಿದ ಮಧುಕರ ಆರ್ ಮಯ್ಯ ಎಂಬುವವರನ್ನು ತೀರ್ಥಹಳ್ಳಿಯಲ್ಲಿ ಬಂಧಿಸಲಾಗಿದೆ.
Related Articles
Advertisement
ಗೌರಿ ಲಂಕೇಶ್ ಅವರು ಪತ್ರಕರ್ತರರಾಗಿದ್ದು, ಅವರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರ ಎಂದು ಬಹುತೇಕ ಬರಹಗಾರರು, ಪತ್ರಕರ್ತರು ಸ್ಟೇಟಸ್ ಅಪ್‌ಡೇಟ್ ಮಾಡಿದ್ದರು. ” ವ್ಯಕ್ತಿಯನ್ನು ಕೊಲ್ಲಬಹುದೇ ವಿನಾ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲ’ ಎಂಬ ಒಕ್ಕೊರಲ ಅಭಿಪ್ರಾಯ ಸಾಮಾನ್ಯವೆಂಬಂತೆ ಕಾಣುತ್ತಿತ್ತು.
ಇದರ ನಡುವೆಯೂ ಕೆಲ ಕಿಡಿಗೇಡಿಗಳು ಗೌರಿ ಅವರ ಹತ್ಯೆಯನ್ನು ಸಂಭ್ರಮಿಸುವ ರೀತಿಯಲ್ಲಿ ಸ್ಟೇಟಸ್, ಕಮೆಂಟ್‌ಗಳನ್ನು ನೀಡಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಬಿಂಬಿಸುತ್ತಿತ್ತು. ಅಂಥವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದೂ ಕಂಡು ಬಂದಿತು. ಗೌರಿ ಅವರ ಅವರ ಹತ್ಯೆ ಕುರಿತ ಪೋಸ್ಟರ್‌ಗಳು, ಸ್ಟೇಟಸ್‌ಗಳು, ಅವರ ಚಿತ್ರಗಳು ಸಾಕಷ್ಟು ಸ್ಪಂದನೆಗೆ ಓಳಗಾದವು. ಚರ್ಚೆಗೆ ನಾಂದಿ ಹಾಡಿದವು.
ಅಮೆರಿಕಾ ರಾಯಭಾರ ಕಚೇರಿ ಖಂಡನೆಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಲೇ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಲಾಗುವುದು ಹಾಗೂ ಅವರ ಕುಟುಂಬದವರು, ಸ್ನೇಹಿತರು ಹಾಗೂ ಅವರ ಸಹುದ್ಯೋಗಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಾರತದ ಅಮೆರಿಕಾ ರಾಯಭಾರ ಕಚೇರಿ ಸಂತಾಪ ಸೂಚಿಸಿದೆ.