Advertisement
ಈ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಸಹೋದರಿ ಕವಿತಾ ಲಂಕೇಶ್ ಜತೆ “ಉದಯವಾಣಿ’ನಡೆಸಿದ ಸಂದರ್ಶನ ಇಲ್ಲಿದೆ.
ನೋಡಿ ನಾನು ಮೊದಲಿಗೆ ಹೇಳಿ ಬಿಡುತ್ತೇನೆ. ನಮ್ಮ ಇಡೀ ಕುಟುಂಬ ದುಃಖದಲ್ಲಿದೆ. ನಮಗೆ ಈಗ ಬೇಕಿರುವುದು ನ್ಯಾಯ. ಬೇರೆ ಯಾವ ವಿಚಾರಗಳೂ ನಮಗೆ ಬೇಡ.
Related Articles
ಯಾರ್ಯಾರೋ ವೈಯಕ್ತಿಕ ದೃಷ್ಟಿಯಲ್ಲಿ ಏನೇನೋ ಕಮೆಂಟ್ ಮಾಡ್ತಿದಾರೆ. ನಾನು ಅಂತಹ ಹೇಳಿಕೆಗಳಿಗೆಲ್ಲ ಪ್ರತಿ ಕ್ರಿಯಿಸಲು ಹೋಗುವುದಿಲ್ಲ. ಸಂಪೂರ್ಣವಾದ ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು ಎಂಬು ದಷ್ಟೇ ನಮ್ಮ ಒತ್ತಾಯ.
Advertisement
ನೀವು ಸಿಬಿಐ ತನಿಖೆಗೆ ಒತ್ತಾಯಿಸಿದಿರಿ, ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿತು?ನಾನು ಸಿಬಿಐಗೆ ವಹಿಸಿ ಎಂದು ಹೇಳಿದ್ದು ಹೌದು. ಆದರೆ, ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ. ಅಮ್ಮ ಸಹ ಎಸ್‌ಐಟಿ ತನಿಖೆ ಆಗಲಿ ಎಂದು ಹೇಳಿದರು. ಅಮ್ಮನ ಮಾತಿಗೆ ಗೌರವ ಕೊಟ್ಟು ನಾನು ಒಪ್ಪಿದ್ದೇನೆ. ಎಸ್‌ಐಟಿ ತನಿಖೆಯಲ್ಲಿ ನ್ಯಾಯ ಸಿಗದಿದ್ದರೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಗೌರಿ ಅವರ ಹತ್ಯೆ ವಿಚಾರದಲ್ಲಿ ನಿಮ್ಮ ಹಾಗೂ ಕವಿತಾ ಅವರ ಹೇಳಿಕೆಗಳಲ್ಲಿ ವ್ಯತ್ಯಾಸವಿದೆಯಾ?
ನೋ, ಯಾವುದೇ ಗೊಂದಲ ಇಲ್ಲ.ನಮ್ಮ ಕುಟುಂಬ ಒಟ್ಟಾಗಿ ಸ್ಪಷ್ಟತೆ ಹೊಂದಿದೆ. ತನಿಖೆ ನ್ಯಾಯ ಸಮ್ಮತವಾಗಿ ಆಗಬೇಕು. ಹಂತಕರ ಪತ್ತೆ ಹಚ್ಚಬೇಕು.ಗೌರಿಗೂ ನ್ಯಾಯ ಸಿಗಬೇಕು,ನಮಗೂ ನ್ಯಾಯ ಸಿಗಬೇಕು. ಹತ್ಯೆಗೆ ನಿಮ್ಮ ಪ್ರಕಾರ ಕಾರಣ ಏನಿರಬಹುದು?
ಸೈದ್ಧಾಂತಿಕ ವಿಚಾರಕ್ಕಾಗಿ ಆಗಿರಬಹುದು. ಬಲಪಂಥೀಯ ತೀವ್ರ ಗಾಮಿಗಳ ಕೈವಾಡವೂ ಇರಬಹುದು, ಏಕೆಂದರೆ ಗೌರಿ ಎಡ ಪಂಥೀಯ ವಿಚಾರ ಸಿದ್ಧಾಂತ ಪ್ರತಿ ಪಾದಿಸುತ್ತಿದ್ದರು. ನಕ್ಸಲೀಯರ ಒಂದು ಗುಂಪಿನ ಕೈವಾಡವೂ ಇರಬಹುದು ಎಂಬ ಅನುಮಾನವೂ ಇದೆ. ಹೀಗಾಗಿ,ತನಿಖೆ ಎಲ್ಲ ಕೋನದಿಂದ ಆಗಿ ಸತ್ಯಾಂಶ ಗೊತ್ತಾಗಲಿ.ನಮಗೆ ಈ ವಿಚಾರದಲ್ಲಿ ರಾಜಕೀಯ ಬೇಕಿಲ್ಲ.ಗೌರಿಯ ವಿಚಾರ,ಸಿದ್ಧಾಂತಗಳಲ್ಲಿ ಅಭಿಪ್ರಾಯ ಬೇಧ ಇರಬಹುದು. ಆದರೆ, ಅದಕ್ಕೆ ಕೊಲೆ ಸಮರ್ಥನೀಯವಲ್ಲ. ಮೊದಲು ಎಸ್‌ಐಟಿ ತನಿಖೆಯಾಗಲಿ: ಕವಿತಾ ಲಂಕೇಶ್ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣ ಬೇರೆ ಸ್ವರೂಪ ಪಡೆಯುತ್ತಿರುವಂತಿದೆಯಲ್ಲ?
ಇದು ದುರಂತ. ಕ್ರೂರ ಮನಸ್ಸುಗಳು ಏನೇನೋ ಹರಡುತ್ತಿವೆ.ನಮಗೆ ಅಂತಿಮವಾಗಿ ಬೇಕಿರುವುದು ನ್ಯಾಯ. ಗೌರಿ ಲಂಕೇಶ್ ಅವರಿಗೆ ಬರವಣಿಗೆಯೇ ಮುಳುವಾಯ್ತು ಅನಿಸುತ್ತಾ?
ಪತ್ರಿಕೆಯಲ್ಲಿ ಬರೆದರೆ ಕೊಲೆ ಮಾಡುವುದು ಎಂದರೆ ಕ್ರೂರತನ. ಪ್ರಾಣಿಗಳಿಗಿಂತ ಹೀನತನ. ಅಪ್ಪ ಬರೀತಿರಲಿಲ್ವಾ? ಸರ್ಕಾರಗಳೇ ಬಿದ್ದು ಹೋಗ್ತಿದು. ಅವರ ಮೇಲೆ ದಾಳಿ ಆಗಿತ್ತಾ?ಖುಷÌಂತ್ ಸಿಂಗ್ ಬರೀತಿರ ಲಿಲ್ವಾ? ಅವರಿಗೂ ಬೆದರಿಕೆಗಳು ಇದ್ದವು ಆದರೆ,ನಮ್ಮ ಅಕ್ಕ ಗೌರಿ ಹೇಡಿಯಾಗಿರಲಿಲ್ಲ. ಶಾಸಕ ಜೀವ ರಾಜ್ ಅವರ ಹೇಳಿಕೆ ವಿವಾದವಾಗಿದೆಯಲ್ಲ?
ಯಾರೋ ಏನೋ ಹೇಳ್ತಾರೆ. ಅವೆಲ್ಲವೂ ಅಪ್ರಸ್ತುತ. ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರಲಿ. ನಿಮ್ಮ ಪ್ರಕಾರ ಗೌರಿ ಲಂಕೇಶ್ ಅವರ ಹತ್ಯೆಗೆ ಕಾರಣ ಏನಿರಬಹುದು? ನಿಮ್ಮ ಹಾಗೂ ಇಂದ್ರಜಿತ್ ಹೇಳಿಕೆಗಳಲ್ಲಿ ಭಿನ್ನ ಧ್ವನಿ ಇದೆಯಾ?
ಇಲ್ಲ. ಯಾವುದೇ ಭಿನ್ನ ಧ್ವನಿ ಇಲ್ಲ. ಅವರೇ, ಇವರೇ ಎಂದು ನಾನು ಹೇಳುವುದಿಲ್ಲ. ಬಲ ಪಂಥೀಯರೇ
ಆಗಲಿ ಅಥವಾ ನಕ್ಸಲೀಯರ ಒಂದು ಗುಂಪೇ ಮಾಡಿರಲಿ. ಯಾರೇ ಆಗಿರಲಿ ಶಿಕ್ಷೆ ಆಗಲಿ ಎಂಬುದಷ್ಟೇ ನಮ್ಮ ಇಡೀ ಕುಟುಂಬದ ಮನವಿ. ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂಬ ಒತ್ತಾಯವೂ ಇದೆಯಲ್ಲ?
ಇದೀಗ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ. ಮೊದಲು ಎಸ್‌ಐಟಿ ತನಿಖೆಯಾಗಲಿ. ಯಾವ ಸಂಸ್ಥೆಯಿಂದ ತನಿಖೆ ಎನ್ನುವುದಕ್ಕಿಂತ ಸತ್ಯಾಂಶ ಹೊರಬರಬೇಕು. ದುಷ್ಕ ರ್ಮಿಗಳು ಪತ್ತೆಯಾಗಬೇಕು. ಹಂತಕರ ಶಿಕ್ಷೆಯಾಗಬೇಕು. ಸದ್ಯಕ್ಕೆ ತನಿಖೆ ವಿಚಾರದಲ್ಲೂ ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. – ಎಸ್.ಲಕ್ಷ್ಮಿ ನಾರಾಯಣ