Advertisement

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಹೊಟ್ಟೆ ಮಂಜನ ತೀವ್ರ ವಿಚಾರಣೆ

06:15 AM Mar 04, 2018 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ವಶಕ್ಕೆ ಪಡೆದುಕೊಂಡಿರುವ ಮದ್ದೂರಿನ ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜನನ್ನು ಎಸ್‌ಐಟಿ(ವಿಶೇಷ ತನಿಖಾ ದಳ) ತೀವ್ರ ವಿಚಾರಣೆಗೊಳಪಡಿಸಿದೆ.

Advertisement

ಮೂರು ತಿಂಗಳ ಹಿಂದೆಯೇ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಸೂಕ್ತ ಸಾûಾ$Âಧಾರಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ನವೀನ್‌ ಕುಮಾರ್‌ನ ಬೆನ್ನು ಬಿದ್ದಿದ್ದ ಸುಮಾರು 200ಕ್ಕೂ ಅಧಿಕ ಮಂದಿ ಅಧಿಕಾರಿಗಳ ತಂಡ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪದಲ್ಲಿ ಫೆ.18ರಂದು ನವೀನ್‌ ಕುಮಾರ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದೆ.

ಆರೋಪಿ ನವೀನ್‌ ಕುಮಾರ್‌ ಹಿಂದೂ ಪರ ಸಂಘಟನೆವೊಂದರಲ್ಲಿ ಗುರುತಿಸಿಕೊಂಡಿದಲ್ಲದೇ, ಮೈಸೂರು, ಮಂಡ್ಯದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ಜತೆಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ನೆರೆ ರಾಜ್ಯಗಳಿಂದ ಖರೀದಿಸಿ ರಾಜ್ಯದಲ್ಲಿ ಮಾರಾಟ ಮಾಡುತ್ತಿರುವ ದಂಧೆ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಅಷ್ಟೇ ಅಲ್ಲದೇ, ಪಶ್ಚಿಮ ಬಂಗಾಳ, ಬಿಹಾರದಿಂದ ಶಸ್ತ್ರಾಸ್ತ್ರ ಮಾರಾಟ ದಂಧೆ, ಮಂಗಳೂರಿನ ಭೂಗತ ಪಾತಕಿಗಳ ಜತೆ ಸಂಪರ್ಕ, ಈ ಮೊದಲೇ ಗೌರಿ ಹತ್ಯೆಗೆ ಸಂಚು ರೂಪಿಸಿದ್ದರೇ, ಎಡಪಂಥೀಯರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಎಂಬ ಶಂಕೆ ಹಾಗೂ ಮುಂಬೈನ ಸುಪಾರಿ ಹಂತಕರ ಜತೆ ನಿರಂತರ ಸಂಪರ್ಕ ಹೊಂದಿರುವುದು ಸೇರಿದಂತೆ ಕೆಲ ಪ್ರಮುಖ ಅಂಶಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next