Advertisement

ಗೌರಿ ಲಂಕೇಶ್‌ಗೆ ‘ರಾ ಇನ್‌ ವಾರ್‌’ಪ್ರಶಸ್ತಿ

09:30 AM Oct 06, 2017 | Team Udayavani |

ಬೆಂಗಳೂರು: ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್‌ ಹತ್ಯೆಯಾಗಿ ಗುರುವಾರಕ್ಕೆ ಸರಿಯಾಗಿ ಒಂದು ತಿಂಗಳು. ಈ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಹೋರಾಟಗಾರರಿಗೆ ನೀಡುವ ‘ರಾ ಇನ್‌ ವಾರ್‌’ ಪ್ರಶಸ್ತಿಯನ್ನು ಮರಣೋತ್ತರವಾಗಿ ಗೌರಿ ಲಂಕೇಶ್‌ ಅವರಿಗೆ ನೀಡಲಾಗಿದೆ.

Advertisement

ರಷ್ಯಾ ಪತ್ರಕರ್ತೆ ಅನಾ ಪೊಲಿತ್ಕೊವಾಸ್ಕಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಪತ್ರಕರ್ತೆಯೊಬ್ಬರಿಗೆ ಈ ಗೌರವ ಸಂದಿದೆ. ಗೌರಿ ಲಂಕೇಶ್‌ ಅವರ ಜತೆಯಲ್ಲಿ ಪಾಕಿಸ್ಥಾನದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಗುಲಾಲಿ ಇಸ್ಲಾಮಿಲ್‌ ಅವರಿಗೂ ಈ ಪ್ರಶಸ್ತಿ ನೀಡಲಾಗಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿದ್ದ ಅನಾ ಪೊಲಿತ್ಕೊವಾಸ್ಕಾ ರಷ್ಯಾ- ಚೆಚನ್ಯಾ ಯುದ್ಧದಲ್ಲಿ ತೀವ್ರ ತೊಂದರೆಗೊಳಗಾದವರ ಪರ ದನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿಯೇ ಅವರನ್ನು 2006ರ ಅ. 2ರಂದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇವರ ಹೆಸರಿನಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next