Advertisement
ನಾಲ್ವರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 150ಕ್ಕೂ ಅಧಿಕ ಮಂದಿಯ ತನಿಖಾ ತಂಡ ಇದುವರೆಗೂ ಸಾಕಷ್ಟು ಸಾûಾ$Âಧಾರಗಳನ್ನು ಸಂಗ್ರಹಿಸಿದೆ. ಘಟನಾ ಸ್ಥಳ, ಗೌರಿ ಪತ್ರಿಕಾ ಕಚೇರಿಯ ಆಸು-ಪಾಸಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆ ಸಿಕ್ಕ ಶಂಕಿತರ ಚಹರೆ, ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ನುರಿತ ಚಿತ್ರಕಾರರಿಂದ 25-30ರ ವಯೋಮಾನದ ಇಬ್ಬರು ವ್ಯಕ್ತಿಗಳ ರೇಖಾಚಿತ್ರಗಳನ್ನು ಸಿದ್ದಪಡಿಸಲಾಗಿದೆ. ಈ ಮೂರು ರೇಖಾಚಿತ್ರಗಳ ಪೈಕಿ ಎರಡು ರೇಖಾಚಿತ್ರಗಳು ಒಬ್ಬನೇ ವ್ಯಕ್ತಿಯನ್ನು ಹೋಲುವಂತಹ ಚಿತ್ರಗಳಾಗಿದ್ದು, ಇನ್ನೊಂದು ರೇಖಾಚಿತ್ರ ಪ್ರತ್ಯೇಕ ವ್ಯಕ್ತಿಯದ್ದಾಗಿದೆ ಎಂದು ಎಸ್‌ಐಟಿಯ ಮುಖ್ಯಸ್ಥ ಬಿ.ಕೆ.ಸಿಂಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
ಹಂತಕರು ವಾರದ ಮೊದಲೇ ನಗರಕ್ಕೆ ಬಂದು ಠಿಕಾಣಿ ಹೂಡಿರುವ ಸಾಧ್ಯತೆಯಿದ್ದು, ಗೌರಿ ಲಂಕೇಶ್ ಮನೆಯ ಸುತ್ತಿಲಿನ ನೀಲನಕ್ಷೆ ಕೂಡ ಸಿದ್ದಪಡಿಸಿದ್ದರು ಎಂಬ ಮಾಹಿತಿಯಿದೆ. ಹೀಗಾಗಿ ಆರೋಪಿಗಳ ರೇಖಾಚಿತ್ರ ಬಿಡುಗಡೆ ಮಾಡಿದ್ದು, ಸ್ಥಳೀಯರು, ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳನ್ನು ಕಂಡಿದ್ದಲ್ಲಿ ಮಾಹಿತಿ ನೀಡಬೇಕು. ಅವರು ವಾಸಿಸುತ್ತಿದ್ದ ಮನೆ, ಹೋಟೆಲ್‌ನಲ್ಲಿ ತಂಗಿದ್ದರೆ ಅಲ್ಲಿ ನೋಡಿದವರು ಮಾಹಿತಿ ನೀಡುವಂತೆ ಕೋರಲಾಗಿದೆ. ಜತೆಗೆ ಆರೋಪಿಗಳು ಬಳಸಿದ್ದ ಬೈಕ್‌ನ ಮಾಹಿತಿ ಕೂಡ ಬಹಿರಂಗ ಪಡಿಸಿದ್ದು, ಈ ಬಗ್ಗೆಯೂ ಸಾರ್ವಜನಿಕರು ತಮಗೆ ಮಾಹಿತಿ ನೀಡಬೇಕು. ಅಲ್ಲದೇ, ನರೇಂದ್ರ ದಾಭೋಲ್ಕರ್, ಎಂ.ಎಂ.ಕಲುºರ್ಗಿ ಪ್ರಕರಣದಲ್ಲಿ ತನಿಖಾ ತಂಡಗಳು ಬಿಡುಗಡೆಯಾದ ಶಂಕಿತ ಆರೋಪಿಗಳ ರೇಖಾಚಿತ್ರಗಳಿಗಿಂತಲೂ ಹೆಚ್ಚು ಗುಣಮಟ್ಟ ಹೊಂದಿದೆ ಎಂದು ಸಿಂಗ್ ಮನವಿ ಮಾಡಿದರು.
Advertisement
ವೃತ್ತಿ ದ್ವೇಷವಿಲ್ಲಗೌರಿಲಂಕೇಶ್ ಹತ್ಯೆಗೈಯಲು ವೃತ್ತಿ ದ್ವೇಷ ಕಾರಣವಲ್ಲ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಈವರೆಗೂ ನಡೆದ ವಿಚಾರಣೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಈ ಹತ್ಯೆ ವೃತ್ತಿ ವೈಷಮ್ಯದಿಂದ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ, ಇದನ್ನು ಹೊರತು ಪಡಿಸಿ ವೈಯಕ್ತಿಕ, ವೈಚಾರಿಕತೆ, ಸಾಮಾಜಿಕ ಚಟುವಟಿಕೆಗಳು, ನಕ್ಸಲ್, ಕೌಟುಂಬಿಕ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು. 250: ಇಷ್ಟು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ
700: ಪೊಲೀಸರು ವೀಕ್ಷಿಸಿರುವ ಸಿಸಿಟಿವಿ ದೃಶ್ಯಾವಳಿಗಳು
75ಟಿಬಿ: ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಾವಳಿಗಳ ಗಾತ್ರ
(ಇಲ್ಲಿಗೆ ಮಾಹಿತಿ ಕೊಡಿ:)
ಮೊಬೈಲ್ ಸಂಖ್ಯೆ 9480800202, ವಾಟ್ಸ್‌ಆ್ಯಪ್ ನಂ-9480800304, 9480801701 ಅಥವಾ ಇ-ಮೇಲ್ ವಿಳಾಸ sit.glankesh@ksp.gov.in ಕಂಟ್ರಿಮೇಡ್ ಪಿಸ್ತೂಲ್‌ನಿಂದಲೇ ಹತ್ಯೆ
ಗೌರಿಲಂಕೇಶ್ ಅವರನ್ನು 7.65 ಎಂಎಂ ಕಂಟ್ರಿಮೆಡ್ ಪಿಸ್ತೂಲ್‌ನಿಂದಲೇ ಹತ್ಯೆಗೈದಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಆದರೆ, ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ, ರಾಜ್ಯದ ಎಂ.ಎಂ. ಕಲುºರ್ಗಿ ಹತ್ಯೆಗೈದ ಪಿಸ್ತೂಲ್‌ನಿಂದಲೇ ಕೃತ್ಯ ನಡೆದಿದೆ ಎಂಬುದು ಹೇಳಲು ಸಾಧ್ಯವಿಲ್ಲ. ಆದರೆ, ಕೃತ್ಯದ ಮಾದರಿಯಲ್ಲಿ ಕೆಲವೊಂದು ಹೋಲಿಕೆಗಳೂ ಇವೆ. ಏಕೆಂದರೆ, ಎಂ.ಎಂ.ಕಲುºರ್ಗಿ ಹತ್ಯೆಗೈದ ಪಿಸ್ತೂಲ್‌ನ ಕಾರ್ಟಿÅಡ್ಜ್ನ ವರದಿ ದೆಹಲಿಯ ಸಿಬಿಐ ಅಧಿಕಾರಿಗಳಿಂದ ಇನ್ನು ಬಂದಿಲ್ಲ. ಇನ್ನು ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್, ಪಾನ್ಸರೆ ಹತ್ಯೆ ಕುರಿತ ವಿಧಿವಿಜ್ಞಾನ ಪರೀûಾ ವರದಿ ಮತ್ತು ಬ್ಯಾಲೆಸ್ಟಿಕ್ ವರದಿಯ ಕುರಿತು ಪ್ರಕರಣಗಳ ತನಿಖಾಧಿಕಾರಗಳಿಂದ ಕೇಳಿಯೇ ಇಲ್ಲ ಎಂದು ಬಿ.ಕೆ.ಸಿಂಗ್ ಸ್ಪಷ್ಟಪಡಿಸಿದರು. ರೇಖಾ ಚಿತ್ರ ಸಕ್ಸಸ್ಸಾಗಿದ್ದು ವಿರಳ
ಶಂಕಿತರ ರೇಖಾಚಿತ್ರ ಬಿಡುಗಡೆ ಮಾಡಿದ ಪ್ರಕರಣಗಳಲ್ಲಿ ಯಶಸ್ಸು ಸಿಕ್ಕಿರುವುದು ವಿರಳ ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ರಾಜ್ಯದಲ್ಲಿ ನಡೆದ ಕೆಲವೊಂದು ಹೈಫೊÅàಫೈಲ್ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ರೇಖಾಚಿತ್ರ ಬಿಡುಗಡೆ ಮಾಡಿದ್ದರೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಆದರೆ, ಯಾವುದೇ ಸೂಕ್ಷ್ಮ ಪ್ರಕರಣಗಳಲ್ಲಿ ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದರೆ, ಆರೋಪಿಯೂ ತನ್ನ ವೇಷ ಭೂಷಣಗಳನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಇಡೀ ಪ್ರಕರಣ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ. 2013ರಲ್ಲಿ ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಬಳಿಕವೂ ಸ್ಥಳೀಯರ ಹೇಳಿಕೆಯನ್ನಾಧರಿಸಿ ರೇಖಾಚಿತ್ರ ಬಿಡುಗಡೆ ಮಾಡಲಾಯಿತು. ಆದರೆ, ಆರೋಪಿಗಳ ಪತ್ತೆಯಾಗಲಿಲ್ಲ. ಇನ್ನು ಇದೇ ವರ್ಷದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಕಾಪೆೊàìರೇಷನ್ ಬ್ಯಾಂಕ್‌ನಲ್ಲಿ ಜ್ಯೋತಿಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಾಗ ಸಂತ್ರಸ್ತೆಯ ಮಾಹಿತಿ ಅನ್ವಯ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಲಾಯಿತು. ಆದರೆ, ಯಶಸ್ವಿಯಾಗಲಿಲ್ಲ. ಕೊನೆಗೆ ಆಂಧ್ರಪ್ರದೇಶ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅದೇ ರೀತಿ ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟದಲ್ಲೂ ಶಂಕಿತನ ರೇಖಾಚಿತ್ರ ಪ್ರಕಟಿಸಲಾಗಿತ್ತು. ಆದರೆ, ಪತ್ತೆಯಾಗಲಿಲ್ಲ. ಮಣಿಪಾಲದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗಲೂ ಪೊಲೀಸರು ಶಂಕಿತನ ರೇಖಾಚಿತ್ರ ಬಿಡುಗಡೆ ಮಾಡಿದ್ದರು. ಕೊನೆಗೆ ಸ್ಥಳೀಯ ಸಿಸಿಟಿವಿ ನೆರವಿನಿಂದ ಆರೋಪಿಯನ್ನು ಪತ್ತೆ ಮಾಡಲಾಗಿತ್ತು. ಹಿಂದೂ ಸಂಘಟನೆ ಬಗ್ಗೆ ಮಾಹಿತಿ ಇಲ್ಲ-ಸಿಂಗ್
ಮೂರು ರೇಖಾಚಿತ್ರಗಳ ಪೈಕಿ ಒಬ್ಬ ಶಂಕಿತನ ಹಣೆ ಮೇಲೆ ಕುಂಕುಮ ಮತ್ತೂಬ್ಬನ ಕಿವಿಯಲ್ಲಿ ವಾಲೆ ಹಾಕಿದ್ದು, ಹಿಂದೂ ಸಂಘಟನೆ ಸದಸ್ಯರ ಮೇಲೆ ಅನುಮಾನವಿದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಸ್ಥಳೀಯರು ಹಾಗೂ ಸಾûಾ$Âಗಳನ್ನಾಧರಿಸಿ ಶಂಕಿತ ಹಂತಕನ ಹಣೆಯ ಮೇಲೆ ಕುಂಕುಮ ಇಡಲಾಗಿದೆಯೇ ಹೊರತು, ಯಾವುದೇ ಹಿಂದೂಪರ ಸಂಘಟನೆ ಕಾರ್ಯಕರ್ತರ ಮೇಲಾಗಲಿ, ಹಿಂದೂ ಸಂಘಟನೆಗಳಾಗಲೀ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಇದು ಕೇವಲ ವದಂತಿ ಅಷ್ಟೇ ಎಂದು ಸ್ಪಷ್ಟಪಡಿಸಿದರು.