Advertisement

ಗೌರವ್‌ ಸೋಲಂಕಿ, ನಿಖತ್‌ಗೆ ಮುನ್ನಡೆ

12:30 AM Feb 17, 2019 | Team Udayavani |

ಹೊಸದಿಲ್ಲಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಗೌರವ್‌ ಸೋಲಂಕಿ ಹಾಗೂ ಮಾಜಿ ಜೂನಿಯರ್‌ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ “ಸ್ಟ್ರಾಂಜಾ ಮೆಮೊರಿಯಲ್‌ ಬಾಕ್ಸಿಂಗ್‌’ ಕೂಟದಲ್ಲಿ ಮುನ್ನಡೆದಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆ ಯುತ್ತಿರುವ ಈ ಕೂಟದ ಪುರುಷರ 52 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಗೌರವ್‌ ಸೋಲಂಕಿ ಹಾಗೂ ವನಿತೆಯರ 51 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಖತ್‌ ಜರೀನ್‌ ಪ್ರಿ-ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 

Advertisement

ಸೋಲಂಕಿ ಅಮೆರಿಕದ ಅಬ್ರಹಾಂ ಪೆರೆಝ್ ವಿರುದ್ಧ ಜಯ ಸಾಧಿಸಿದರು. ಗೌರವ್‌ ಮುಂದಿನ ಪಂದ್ಯದಲ್ಲಿ ಕಜಕೀಸ್ಥಾನದ ಅನ್ವರ್‌ ಮುಜಾಪಾರೊವ್‌ ಅವರನ್ನು ಎದುರಿಸಲಿದ್ದಾರೆ. ಮತ್ತೂಂದು ಸ್ಪರ್ಧೆಯಲ್ಲಿ ಅಜೆರ್‌ಬೈಜನ್‌ನ ಸರ್ಕಾನ್‌ ಅಲಿಯೆವ್‌ ಅವರನ್ನು ಸೋಲಿಸಿದ ಅಂಕುಶ್‌ ದಾಹಿಯ (60 ಕೆ.ಜಿ.) 16ನೇ ಸುತ್ತಿನಲ್ಲಿ ಮ್ಯಾಕೊxನಿಯಾದ ಜಾಸಿನ್‌ ಜಮಾ ವಿರುದ್ಧ ಆಡಲು ಸಜ್ಜಾಗಿದ್ದಾರೆ.

ನಿಖತ್‌ ಜರೀನ್‌ಗೆ ಜಯ
ವನಿತೆಯರ ಸ್ಪರ್ಧೆಯಲ್ಲಿ  ನಿಖತ್‌ ಜರೀನ್‌ ಇಟಲಿಯ ಗಿಯೋವನ್ನಾ ಮಾಚೀìಸ್‌ ಅವರನ್ನು ಸೋಲಿಸಿದರು. ಹಲವು ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಜರೀನ್‌ ಮುಂದಿನ ಪಂದ್ಯದಲ್ಲಿ ಬಲರೂಸ್‌ನ ಯಾನಾ ಬರ್ಮ್ ವಿರುದ್ಧ ಆಡಲಿದ್ದಾರೆ. 60 ಕೆ.ಜಿ. ವಿಭಾಗದಲ್ಲಿ ಭಾರತದ ಮತ್ತೋರ್ವ ಬಾಕ್ಸರ್‌ ನೀರಜ್‌ ಸ್ಥಳೀಯ ಬಾಕ್ಸರ್‌ ಅಸ್ಲಾಹನ್‌ ಮೆಹೆಡೊವಾ ಅವರನ್ನು ಸೋಲಿಸಿದರು.

ಹಲವು ನಿರಾಸೆ
ಪುರುಷರ ವಿಭಾಗದಲ್ಲಿ ನಿರೀಕ್ಷೆ ಮೂಡಿಸಿದ್ದ ಗೌರವ್‌ ಬಿಧುರಿ (56 ಕೆ.ಜಿ.) ಮೊದಲ ಸುತ್ತಿನಲ್ಲೇ ಸ್ಥಳೀಯ ಬಾಕ್ಸರ್‌ ಇಮಾನ್ಯುಯೆಲ್‌ ಬೊಗೇವ್‌ ವಿರುದ್ಧ ಸೋಲನುಭವಿಸಿದರು. ವನಿತಾ ವಿಭಾಗದ ಭರವಸೆಯ ಬಾಕ್ಸರ್‌ ಪಿಂಕಿ ರಾಣಿ ಜಂಗ್ರಾ (51 ಕೆ.ಜಿ.)  ಅವರು ಫಿನಿಪಿನೊ ಐರಿಶ್‌ ಮ್ಯಾಗೊ ವಿರುದ್ಧ ಮುಗ್ಗರಿಸಿದರು. ಪುರುಷರ ವಿಭಾಗದಲ್ಲಿ ಆಶಿಶ್‌ ಕುಮಾರ್‌ (75 ಕೆ.ಜಿ.), ಆಶಿಶ್‌ (64 ಕೆ.ಜಿ.), ವನಿತಾ 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನೂಪುರ್‌ ಮತ್ತು ನೀತು ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ಹೊರನಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next