Advertisement

ಮಂಗಳೂರಿಗೆ ಮತ್ತೆ ಬಂತು ಎರಡು ಕಾಡುಕೋಣ! ಗ್ರಾಮಸ್ಥರಲ್ಲಿ ಆತಂಕ

01:17 AM Jun 01, 2022 | Team Udayavani |

ಮಂಗಳೂರು: ನಗರದ ಮರೋಳಿ ಬಳಿ ಮಂಗಳವಾರ ಬೆಳಗ್ಗೆ ಎರಡು ಕಾಡುಕೋಣಗಳು ಕಾಣಿಸಿ ಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದವು.

Advertisement

ಕಾಡುಕೋಣಗಳನ್ನು ಕಂಡ ಕೂಡಲೇ ಪರಿಸರದ ಮಂದಿ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ರಾತ್ರಿ ವರೆಗೆ ಇಲಾಖೆಯವರು ಮತ್ತು ಸ್ಥಳೀಯರು ಕಾರ್ಯಾಚರಣೆ ನಡೆಸಿದರೂ ಕಾಡುಕೋಣಗಳನ್ನು ಸೆರೆ ಹಿಡಿಯಲು ಸಾಧ್ಯವಾಗಿಲ್ಲ.

ಮರೋಳಿಯ ಇದೇ ಪ್ರದೇಶದಲ್ಲಿ ಈ ಹಿಂದೆ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.ಸ್ಥಳೀಯರಾದ ಭಾಸ್ಕರ್‌ ಪ್ರತಿಕ್ರಿಯಿಸಿ, “ಮರೋಳಿಯ ಕೆನರಾ ವರ್ಕ್‌ಶಾಪ್‌ ಬಳಿ ನನ್ನ ಟೈಲರಿಂಗ್‌ ಅಂಗಡಿಯಿದ್ದು, 9.45 ಸುಮಾರಿಗೆ ಆ ಪ್ರದೇಶದಲ್ಲಿ ಕಾಡು ಕೋಣ ಕಾಣಿಸಿಕೊಂಡಿತ್ತು ಎಂದರು.

ಕಾಡುಕೋಣದ ಹೆಜ್ಜೆ ಗುರುತು ಸ್ಥಳದಲ್ಲಿ ಪತ್ತೆಯಾಗಿದೆ. ಈ ಹಿಂದೆ ಕೂಡ ಇದೇ ಪರಿಸರದ ಸುತ್ತಮುತ್ತ ಕಾಡು ಕೋಣವೊಂದು ಕಾಣಿಸಿತ್ತು. ಬಜಪೆ-ಕೆಂಜಾರು ಪ್ರದೇಶದಿಂದ ಬಂದಿರಬಹುದು ಎಂಬುದಾಗಿ ಅಂದಾ ಜಿಸಲಾಗಿದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಪೈ ತಿಳಿಸಿದ್ದಾರೆ.

2 ವರ್ಷಗಳ ಹಿಂದೆ ಆತಂಕ ಮೂಡಿಸಿದ್ದ ಕಾಡುಕೋಣ
2020ರ ಮೇ 4ರಂದು ನಗರದ ಕುದ್ರೋಳಿ, ಮಣ್ಣಗುಡ್ಡ ವ್ಯಾಪ್ತಿಯ ಜನನಿಬಿಡ ರಸ್ತೆಯಲ್ಲಿ ಕಾಡುಕೋಣ ಕಾಣಿಸಿಕೊಂಡಿತ್ತು. ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್‌, ಬಿಜೈ ಭಾಗದೆಲ್ಲೆಲ್ಲ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಕೊನೆಗೂ ಮಣ್ಣಗುಡ್ಡ ಗೋದಾಮಿನ ಸಮೀಪ ಅರಿ ವಳಿಕೆ ಚುಚ್ಚುಮದ್ದು ಪ್ರಯೋ ಗಿಸಲಾಗಿತ್ತು. ಬಳಿಕ ರಕ್ಷಿತಾರಣ್ಯಕ್ಕೆ ಕರೆ ದೊಯ್ಯುವಾಗ ಮಾರ್ಗ ಮಧ್ಯೆ ಹೃದಯಾಘಾತದಿಂದ ಕಾಡುಕೋಣ ಮೃತಪಟ್ಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next