Advertisement

ರಾಜ್ಯದ 8 ರಾಜಕೀಯ ಪಕ್ಷಗಳಿಗೆ ಗೇಟ್‌ಪಾಸ್‌: ಚುನಾವಣ ಆಯೋಗ 

02:11 AM May 28, 2022 | Team Udayavani |

ಬೆಂಗಳೂರು: ಅಸ್ತಿತ್ವ ಕಳೆದುಕೊಂಡಿರುವುದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಪರಿಶೀಲನೆಯಿಂದ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 8 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಕ್ಷಗಳ ಪಟ್ಟಿಯಿಂದ ತೆಗದು ಹಾಕಲು ಚುನಾವಣ ಆಯೋಗ ತೀರ್ಮಾನಿಸಿದೆ.

Advertisement

ಇಂಡಿಯನ್‌ ಓಟರ್ ವೆಲ್‌ಫೇರ್‌ ಪಾರ್ಟಿ, ಕರ್ನಾಟಕ ಕ್ರಾಂತಿ ದಳ, ನವನಿರ್ಮಾಣ ನಾಗರಿಕ ಸಮಿತಿ, ರಾಷ್ಟ್ರೀಯ ಜನಾಂದೋಲನ ಪಕ್ಷ, ಸ್ವರ್ಣ ಯುಗ ಪಾರ್ಟಿ, ಟಿಪ್ಪು ಸುಲ್ತಾನ್‌ ನ್ಯಾಷನಲ್‌ ರಿಪಬ್ಲಿಕ್‌ ಪಾರ್ಟಿ, ಯುನೈಟೆಡ್‌ ಇಂಡಿಯನ್‌ ಡೆಮಾಕ್ರಟಿಕ್‌ ಕೌನ್ಸಿಲ್‌, ಅರಸ್‌ ಸಂಯುಕ್ತ ಪಕ್ಷ ಎಂಬ ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳನ್ನು ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದು ಹಾಕಲು ಚುನಾವಣ ಆಯೋಗ ಆದೇಶ ಹೊರಡಿಸಿದೆ.

ಇವು ಚುನಾವಣ ಆಯೋಗದ ಆದೇಶದಿಂದ ಬಾಧಿತವಾಗಿದ್ದಲ್ಲಿ, ಅಗತ್ಯ ದಾಖಲೆಗಳೊಂದಿಗೆ 30 ದಿನಗಳೊಳಗಾಗಿ ಕರ್ನಾಟಕ ರಾಜ್ಯ ಮುಖ್ಯ ಚುನಾ ವಣಾಧಿಕಾರಿ ಅಥವಾ ಭಾರತ ಚುನಾವಣ ಆಯೋಗವನ್ನು ಸಂಪರ್ಕಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಒಟ್ಟು 2,796 ನೋಂದಾಯಿತ ಮಾನ್ಯತೆ ಪಡೆ ಯದ ರಾಜಕೀಯ ಪಕ್ಷಗಳ ಪೈಕಿ ಕರ್ನಾಟಕಕ್ಕೆ ಸೇರಿದ 93 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್‌ 29ಸಿ ಅನ್ವಯ ಸ್ವೀಕರಿಸಲಾದ ರಾಜಕೀಯ ವಂತಿಗೆಗಳ ವಿವರಗಳನ್ನು ಪ್ರತಿ ವರ್ಷ ಸೆಪ್ಟಂಬರ್‌ 30ರೊಳಗೆ ಹಾಗೂ ಆಡಿಟ್‌ ವರದಿನ್ನು ಪ್ರತಿ ವರ್ಷ ಅಕ್ಟೋಬರ್‌ ತಿಂಗಳೊಳಗೆ ಮತ್ತು ಚುನಾ ವಣ ವೆಚ್ಚದ ವಿವರಗಳನ್ನು ವಿಧಾನಸಭೆ ಚುನಾವಣೆ ನಡೆದ 75 ದಿನಗಳೊಳಗಾಗಿ ಹಾಗೂ ಲೋಕಸಭೆ ಚುನಾವಣೆ ನಡೆದ 90 ದಿನ ಗಳೊಳಗಾಗಿ 2017-18, 2018-19 ಮತ್ತು 2019-20ನೇ ಹಣಕಾಸು ವರ್ಷಗಳಲ್ಲಿ ನಿಗದಿತ ಅವಧಿಯೊಳಗೆ ಸಲ್ಲಿಸಿಲ್ಲ.

ಈ ಪಕ್ಷಗಳು ಅಗತ್ಯ ದಾಖಲೆಗಳೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next