Advertisement

“ಗೇಟ್‌’ಪರೀಕ್ಷೆ: ಅಪೆಕ್ಸ್‌ –ಆಳ್ವಾಸ್‌ ಎಂಜಿನಿಯರಿಂಗ್‌ ತಾಂತ್ರಿಕ ಒಪ್ಪಂದ

12:45 AM Nov 23, 2021 | Team Udayavani |

ಮೂಡುಬಿದಿರೆ: ಅಕಾಡೆಮಿ ಇನ್‌ ಪರ್ಸ್ಯೂಟ್ ಆಫ್‌ ಎಂಜಿನಿಯರಿಂಗ್‌ ಎಕ್ಸಲೆನ್ಸ್‌ (ಅಪೆಕ್ಸ್‌) ಮತ್ತು ಆಳ್ವಾಸ್‌ ತಾಂತ್ರಿಕ ಮಹಾವಿದ್ಯಾಲಯ, ಮೂಡುಬಿದಿರೆ ಇವುಗಳ ನಡುವೆ ತಾಂತ್ರಿಕ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಲಾಯಿತು.

Advertisement

ಉದಯೋನ್ಮುಖ ಎಂಜಿನಿಯರುಗಳಿಗೆ “ಗೇಟ್‌’ ಪರೀಕ್ಷೆಯ ಮಹತ್ವ ವನ್ನು ಗಮನದಲ್ಲಿರಿಸಿಕೊಂಡು ಆಳ್ವಾಸ್‌ ತಾಂತ್ರಿಕ ಮಹಾವಿದ್ಯಾ ಲಯವು ಸಿಎಸ್‌ಐಆರ್‌, ಇಸ್ರೋ, ಐಐಎಸ್‌ಸಿ, ಐಐಟಿಯಂಥ ಸಂಸ್ಥೆ ಗಳಲ್ಲಿ ಎಂ.ಟೆಕ್‌., ಪಿಎಚ್‌.ಡಿ. ಪದವಿ ಪಡೆದ ಪರಿಣಿತರನ್ನು ಒಳ ಗೊಂಡ ಅಪೆಕ್ಸ್‌ ಸಂಸ್ಥೆಯ ಮುಖೇನ ನಡೆಯಲಿರುವ “ಗೇಟ್‌’ ತರಬೇತಿಯನ್ನು ನ. 28ರಿಂದ ಆರಂಭ ವಾಗಲಿದೆ. ಇದರಿಂದಾಗಿ ಇಂಥ ತರಬೇತಿಗೆ ದೂರದ ಹೈದರಾಬಾದ್‌ ಅಥವಾ ದಿಲ್ಲಿ ವರೆಗೆ ತೆರಳುವ ಅನಿವಾರ್ಯ ನೀಗಿಸಿದಂತಾಗಿದೆ.

ದೇಶದ ಯಾವುದೇ ಎಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ಹಾಗೂ ಸಿವಿಲ್‌ ವಿಭಾಗಗಳ ವಿದ್ಯಾರ್ಥಿಗಳು ಮತ್ತು ಗೇಟ್‌ ಪರೀಕ್ಷಾ ಕಾಂಕ್ಷಿಗಳು ಈ ತರಬೇತಿ ಸೌಲಭ್ಯ ಪಡೆದು ಕೊಳ್ಳಬಹುದು. ದೂರದವರಿಗೆ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಕಾಲೇಜಿನ ಆವರಣ  ದಲ್ಲಿಯೇ ಹಿರಿಯ ತಜ್ಞರೂ ಭೇಟಿ, ಮಾರ್ಗದರ್ಶನಕ್ಕೆ ಲಭ್ಯರಿರುವುದು ವಿಶೇಷ.

ಐಐಟಿ ಹಾಗೂ ಐಐಎಸ್‌ಸಿಗಳಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌.ಡಿ. ಪದವಿಗಳಿಗೆ ಈ ತರಬೇತಿ ಅಗತ್ಯ. ಎಂಆರ್‌ಪಿಎಲ್‌, ಐಒಸಿಎಲ್‌, ಡಿಆರ್‌ಡಿಒ, ಒಎನ್‌ಜಿಸಿ, ಕೆಐಒಸಿಎಲ್‌ಗ‌ಳಂತಹ ಸರಕಾರಿ ಅಥವಾ ಸಾರ್ವಜನಿಕ ಉದ್ಯಮ ವಲಯಗಳಲ್ಲಿ ಎಂಜಿನಿಯರಿಂಗ್‌ ಉದ್ಯೋಗಾವಕಾಶಗಳನ್ನು ಪಡೆ ಯಲು ಈ ತರಬೇತಿ ಕಡ್ಡಾಯ. ಸಿಎಸ್‌ಐಆರ್‌, ಇಸ್ರೋ, ಡಿಆರ್‌ಡಿಒ, ಐಐಎಸ್‌ಸಿ, ಐಐಟಿಯಂತಹ ಸಂಸ್ಥೆಗಳಲ್ಲಿ ಫೆಲೋಶಿಪ್‌, ವಿದೇಶಿ ವಿ.ವಿ.ಗಳಲ್ಲಿ ಉನ್ನತ ವ್ಯಾಸಂಗ, ಸರಕಾರಿ ಉದ್ಯೋಗಗಳು, ಕ್ಯಾಂಪಸ್‌ ನೇಮಕಾತಿ ಹೀಗೆ ಹಲವಾರು ವಿಷಯಗಳಲ್ಲಿ ಗೇಟ್‌ ಪರೀಕ್ಷೆಯ ತಯಾರಿ ಬಹಳಷ್ಟು ಪ್ರಯೋಜನಕಾರಿ ಎಂದು ಅಪೆಕ್ಸ್‌ ಮತ್ತು ಆಳ್ವಾಸ್‌ ತಾಂತ್ರಿಕ ಮಹಾವಿದ್ಯಾಲಯಗಳ ಪ್ರಮುಖರು ತಿಳಿಸಿದ್ದಾರೆ.

ಇದನ್ನೂ ಓದಿ:ವಿಜಯಪುರ: ಪಕ್ಷೇತರ ಸ್ಪರ್ಧೆಯ ಭೀತಿ; ಸುನಿಲ ಗೌಡಗೆ ಕಾಂಗ್ರೆಸ್ ಟಿಕೇಟ್

Advertisement

ಒಡಂಬಡಿಕೆ ಕಾರ್ಯಕ್ರಮದಲ್ಲಿ ಅಪೆಕ್ಸ್‌ ಸಂಸ್ಥೆಯ ಸಂಸ್ಥಾಪಕ ಡಾ| ಅನಂತ ಪೈ ಎಸ್‌., ಪ್ರಾಂಶುಪಾಲ ಡಾ| ಪೀಟರ್‌ ಫರ್ನಾಂಡಿಸ್ , ಸಿವಿಲ್‌ ವಿಭಾಗದ ಮುಖ್ಯಸ್ಥ ಡಾ| ಅಜಿತ್‌ ಹೆಬ್ಟಾರ್‌, ಮೆಕ್ಯಾನಿಕಲ್‌ ವಿಭಾಗದ ಮುಖ್ಯಸ್ಥ ಡಾ| ಸತ್ಯನಾರಾಯಣ, ಸಂಯೋಜಕ, ಸಿವಿಲ್‌ ವಿಭಾಗದ ಪ್ರೊ| ಶಂಕರಗಿರಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಯನ್ನು https://apexacademics.co.in ಅಂತ ರ್ಜಾಲದಲ್ಲಿ ಪಡೆಯಬಹುದಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next