Advertisement
ಸಾಮಾನ್ಯವಲ್ಲದ ಚಿಹ್ನೆಗಳುಧ್ವನಿ ಬದಲಾವಣೆ: ಎದೆಯುರಿಯು ಧ್ವನಿಪೆಟ್ಟಿಗೆ ಮತ್ತು ಧ್ವನಿತಂತುಗಳು ಊದಿಕೊಳ್ಳುವುದಕ್ಕೆ ಕಾರಣವಾಗಬಹುದು. ಎದೆಯುರಿಯ ಆಮ್ಲದಿಂದಾಗಿ ಹೀಗಾಗುತ್ತದೆ. ಇದರಿಂದ ಧ್ವನಿ ಒಡಕಾಗಬಹುದು. ಆದ್ದರಿಂದ ಒಡಕು, ದೊರಗು ಧ್ವನಿ ಹೊಂದಿರುವ ರೋಗಿಗಳಲ್ಲಿ ಎದೆಯುರಿಯನ್ನು ಶಂಕಿಸಬಹುದಾಗಿದೆ.
Related Articles
Advertisement
ಎದೆಯುರಿಯನ್ನು ಉಂಟು ಮಾಡಬಹುದಾದ ಅಪಾಯಾಂಶಗಳುಎದೆಯುರಿಯು ಉಂಟಾಗುವುದಕ್ಕೆ ಅಥವಾ ಹೆಚ್ಚುವುದಕ್ಕೆ ಜೀವನಶೈಲಿ, ಪರಿಸರ ಮತ್ತಿತರ ಹಲವು ಕಾರಣಗಳಿರುತ್ತವೆ. ಟ್ರಾನ್ಸಿಯೆಂಟ್ ಲೋವರ್ ಈಸೊಫೇಜಿಯಲ್ ಸ್ಪಿಂಕ್ಟರ್ ರಿಲ್ಯಾಕ್ಸೇಶನ್: ಲೋವರ್ ಈಸೊಫೇಜಿಯಲ್ ವಾಲ್Ì ಅಥವಾ ಸ್ಪಿಂಕ್ಟರ್ ಆಗಾಗ ತೆರೆದುಕೊಳ್ಳುವುದು (ಚಿತ್ರ 1ರಲ್ಲಿ ಎಲ್‌ಇಎಸ್ ಭಾಗ). ಇದರಿಂದ ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ನುಗ್ಗುತ್ತದೆ. ಸಾಫ್ಟ್ ಡ್ರಿಂಕ್‌ಗಳು, ಕೊಬ್ಬು ಹೆಚ್ಚಿರುವ ಆಹಾರವನ್ನು ಕಂಠಮಟ್ಟ ತಿನ್ನುವುದು ಮತ್ತು ಗರ್ಭಿಣಿಯಾಗಿರುವುದು ಈ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅನ್ನನಾಳದ ವಾಲ್ ದುರ್ಬಲವಾಗಿರುವುದು: ಎದೆಯುರಿ ಹೊಂದಿರುವ ಕೆಲವು ರೋಗಿಗಳು ಈ ತೊಂದರೆಯನ್ನು ಹೊಂದಿರುತ್ತಾರೆ. ಧೂಮಪಾನವು ಈ ವಾಲ್ವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. ಹಯಾಟಸ್ ಹರ್ನಿಯಾ: ಹೊಟ್ಟೆಯ ಮೇಲ್ಭಾಗವು ಎದೆಯ ಭಾಗಕ್ಕೆ ನುಗ್ಗುವುದು. ಈ ಸ್ಥಿತಿಯು ಹೊಟ್ಟೆಯ ಆಮ್ಲವು ಅನ್ನನಾಳವನ್ನು ಪ್ರವೇಶಿಸುವುದನ್ನು ತಡೆಯುವ ವಾಲ್ವನ್ನು ದುರ್ಬಲಗೊಳಿಸುತ್ತದೆ . ಜಠರ ಖಾಲಿಯಾಗುವುದು ವಿಳಂಬ: ಜಠರವು ಖಾಲಿಯಾಗಲು ವಿಫಲವಾಗುವ ಮೂಲಕ ಹೊಟ್ಟೆ ಹೆಚ್ಚು ಕಾಲ ತುಂಬಿದ್ದರೆ ಆಗ ಎದೆಯುರಿ ಹೆಚ್ಚುತ್ತದೆ. ಕೆಲವು ಔಷಧಗಳು, ತುಂಬಾ ಎಣ್ಣೆಜಿಡ್ಡಿನ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ಜಠರ ಖಾಲಿಯಾಗುವುದು ನಿಧಾನವಾಗುತ್ತದೆ. ಈಸೊಫೇಜಿಯಲ್ ಆಮ್ಲ ತೆರವಾಗುವುದು: ಈಸೊಫೇಜಿಯಲ್ ಚಲನೆಯು ಮೇಲ್ಗಡೆಗೆ ನುಗ್ಗಿದ ಆಮ್ಲವನ್ನು ಮರಳಿ ಜಠರಕ್ಕೆ ತಳ್ಳುತ್ತದೆ. ಪ್ರತ್ಯಾಮ್ಲವಿರುವ ಜೊಲ್ಲಿನಿಂದ ಅದು ತಟಸ್ಥವಾಗುತ್ತದೆ. ಆದ್ದರಿಂದ ನಿದ್ದೆಯ ಸಮಯದಲ್ಲಿ ಆಗುವಂತೆ ಜೊಲ್ಲು ಉತ್ಪಾದನೆ ಕಡಿಮೆಯಾಗುವುದು ಕೂಡ. ಡಾ| ಗಣೇಶ್ ಭಟ್
ಪ್ರೊಫೆಸರ್, ಮುಖ್ಯಸ್ಥರು, ಯುನಿಟ್‌ಐಐ
ಗ್ಯಾಸ್ಟ್ರೋಎಂಟರಾಲಜಿ ವಿಭಾಗ,
ಕೆಎಂಸಿ, ಮಣಿಪಾಲ. ಮುಂದುವರಿಯುವುದು