Advertisement

ಹೆಚ್ಚುವರಿ ಉಪ್ಪಿನ ಸೇವನೆಯಿಂದ ಜಠರ ಉಬ್ಬುವುದು

12:10 AM Jul 02, 2019 | mahesh |

ಹೆಚ್ಚು ಉಪ್ಪಿರುವ ಆಹಾರವನ್ನು ಸೇವಿಸುವವರು ಜಠರ ಉಬ್ಬುವ ಸಮಸ್ಯೆಯನ್ನು ಹೊಂದಿದ್ದಾರೆ ಎಂಬ ಅಂಶ ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಕಂಡುಬಂದಿದೆ. ಅಮೆರಿಕದ ಗ್ಯಾಸ್ಟ್ರೋಎಂಟರಾಲಜಿ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಲ್ಲಿ ಈ ಅಂಶವನ್ನು ತಿಳಿಸಲಾಗಿದೆ. ಎರಡು ವರ್ಷಗಳ ಹಿಂದೆ ನಡೆದ ಸಂಶೋಧನೆಯನ್ನು ಮತ್ತೆ ಪರಿಶೀಲಿಸಿದ ಸಂಶೋಧಕರು ಈ ಸಂಶೋಧನೆಗೆ ಒಳಪಟ್ಟ ವ್ಯಕ್ತಿಗಳಲ್ಲಿ ಹೆಚ್ಚು ಸೋಡಿಯಂ ಸೇವನೆ ಜಠರಗರುಳಿನ ಉಬ್ಬುವಿಕೆ ಕಾರಣವಾಗಿದೆ ಎಂಬ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಇದು ಕಡಿಮೆ ಫೈಬರ್‌ ಅಂಶವುಳ್ಳ ಆಹಾರಗಳನ್ನು ಸೇವಿಸುವ ಜನರಲ್ಲಿ ಕಂಡು ಬರುವ ಸಮಸ್ಯೆಗಿಂತ ಅಧಿಕ ಪ್ರಮಾಣದಲ್ಲಿದೆ. ಎರಡು ರೀತಿಯ ಆಹಾರ ಸೇವೆನೆ ಮಾಡುವ ಜನರಲ್ಲಿ ಸೋಡಿಯಂ ಅನ್ನು ಮೂರು ಮಟ್ಟದಲ್ಲಿ ಪರೀಕ್ಷಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next