Advertisement

ಅಡುಗೆ ಮನೆಯಲ್ಲಿ ಅಡಗಿದೆ ಗ್ಯಾಸ್ಟ್ರಿಕ್‌ಗೆ ಮನೆಮದ್ದು

09:04 PM Oct 14, 2019 | mahesh |

ಅಸಿಡಿಟಿ ಇತ್ತೀಚಿಗೆ ಎಲ್ಲರಲ್ಲೂ ಬಾಧಿಸಿರುವ ಸಮಸ್ಯೆಯಾಗಿದೆ. ಹೊಟ್ಟೆಯ ಗ್ಯಾಸ್ಟ್ರಿಕ್‌ ಗ್ರಂಥಿಗಳಲ್ಲಿ ಆಮ್ಲಗಳು ಸ್ರವಿಸಿದಾಗ ಅಸಿಡಿಟಿ ಹೆಚ್ಚಾಗಿ ಉಸಿರಾಟದ ತೊಂದರೆ, ಹೊಟ್ಟೆನೋವು, ಎದೆ ಉರಿ, ಸಂಧಿ ನೋವು ಇತರ ಕೆಲವು ರೋಗ ಲಕ್ಷಣಗಳು ಕಂಡುಬರುತ್ತವೆ. ಇದು ಭಾರೀ ಕಿರಿಕಿರಿಯನ್ನು ಅನುಭವಿಸುವಂತೆ ಮಾಡುತ್ತದೆ. ಖಾಲಿ ಹೊಟ್ಟೆಗೆ ಚಹಾ, ಕಾಫಿ, ಧೂಮಪಾನ ಮುಂತಾದವುಗಳನ್ನು ಮಾಡುವುದರಿಂದ ಹುಳಿ ಆಮ್ಲಿಯತೆ ಹೆಚ್ಚಾಗುತ್ತದೆ. ಆ್ಯಸಿಡಿಟಿ ಸಮಸ್ಯೆಯಿಂದ ಮುಕ್ತಿ ಪಡೆಯಬೇಕಾದರೆ ಕೆಲವೊಂದು ಮನೆ ಮದ್ದುಗಳನ್ನು ಉಪಯೋಗಿಸುವುದು ಉತ್ತಮ. ಆ್ಯಸಿಡಿಟಿ ಸಮಸ್ಯೆ ಇರುವವರು ಈ ಟಿಪ್ಸ್‌ಗಳನ್ನೊಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ.

Advertisement

ತುಳಸಿ ಎಲೆ
ತುಳಸಿ ಎಲೆಯಲ್ಲಿ ಕಾರ್ಬಿನೇಟ್‌ ಅಂಶವಿರುವುದರಿಂದ ಇದು ಗ್ಯಾಸ್ಟ್ರಿ ಕ್‌ ಅನ್ನು ಹೋಗಲಾಡಿಸುತ್ತದೆ. 3-4 ತುಳಸಿ ಎಲೆಯನ್ನು ನೀರಿನಲ್ಲಿ ಕುದಿಸಿ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಕುಡಿಯುವುದರಿಂದ ಗ್ಯಾಸ್ಟ್ರಿ ಕ್‌ ನಿವಾರಣೆಯಾಗುತ್ತದೆ.

ದಾಲ್ಚಿನ್ನಿ
ದಾಲ್ಚಿನ್ನಿಯನ್ನು ಚಹಾಕ್ಕೆ ಹಾಕಿ ಕುಡಿಯುವುದರಿಂದ ಆ್ಯಸಿಡಿಟಿ ಕಡಿಮೆಯಾಗಬಹುದು. ದಾಲ್ಚಿನ್ನಿ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಅದಲ್ಲದೆ ದಾಲಿcನ್ನಿ ಉತ್ತಮ ಪೋಷಕಾಂಶಗಳನ್ನು ಕೂಡ ಹೊಂದಿದೆ.

ಮಜ್ಜಿಗೆ
ಆಯುರ್ವೇದದಲ್ಲಿ ಮಜ್ಜಿಗೆ ವಿಶೇಷ ಸ್ಥಾನಮಾನವಿದೆ. ಮಸಾಲೆಯುಕ್ತ ಆಹಾರನ್ನು ನೀವು ಸೇವಿಸಿದಾಗ ಒಂದು ಲೋಟ ಮಜ್ಜಿಗೆ ಕುಡಿಯಿರಿ ಇದರಿಂದ ಅÂಸಿಡಿಟಿ ನಿವಾರಣೆಯಾಗುತ್ತದೆ.

ಲವಂಗ
ಸಾಮಾನ್ಯವಾಗಿ ಲವಂಗವನ್ನು ನಾವು ಆಹಾರ ಪದಾರ್ಥಗಳಲ್ಲಿ ಬಳಸಿಕೊಳ್ಳುತ್ತೇವೆ. ಲವಂಗ ಪ್ರಕೃತಿಯಲ್ಲಿ ಕಾರ್ಮಿನೇಟಿವ್‌ ಅಂಶವನ್ನು ಹೊಂದಿದ್ದು, ಜೀರ್ಣಾಂಗವ್ಯೂಹದ ಆಮ್ಲಿಯತೆಯನ್ನು ತಡೆಯುತ್ತದೆ. ಪುಡಿಮಾಡಿದ ಲವಂಗ ಮತ್ತು ಏಲಕ್ಕಿಯನ್ನು ಸಮಾನ ಪ್ರಮಾಣದಲ್ಲಿ ಪುಡಿ ಮಾಡಿ ಸೇವಿಸುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ನಿವಾರಿಸಬಹುದು.

Advertisement

ಬೆಲ್ಲ
ಬೆಲ್ಲದಲ್ಲಿ ಹೆಚ್ಚಿನ ಮೆಗ್ನೇಶೀಯಂ ಅಂಶದಿಂದಾಗಿ ಬೆಲ್ಲವು ಕರುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ ಅಲ್ಲದೆ ಬೆಲ್ಲ ತಿನ್ನುವುದರಿಂದ ಹೊಟ್ಟೆಯ

ಶುಂಠಿ
ಶುಂಠಿಯಲ್ಲಿ ಆನೇಕ ಆರೋಗ್ಯ ಪ್ರಯೋಜನಗಳಿವೆ. ಶುಂಠಿ ಅತ್ಯುತ್ತಮ ಜೀರ್ಣಕಾರಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಹೊಟ್ಟೆಯಲ್ಲಿರುವ ಹುಳಿ ಆಮ್ಲಗಳನ್ನು ತಟಸ್ಥಗೊಳಿಸುವಲ್ಲಿ ಇದರ ಪಾತ್ರ ಮಹತ್ವವಾದುದು. ನೀವು ತಾಜಾ ಶುಂಠಿಯ ತುಂಡನ್ನು ಅಥವಾ ಒಂದು ಚಮಚ ಶುಂಠಿ ರಸವನ್ನು ದಿನಕ್ಕೆ ಎರಡು ಮೂರು ಬಾರಿ ಸೇವಿಸುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಬಾಳೆಹಣ್ಣು
ಆರೋಗ್ಯಕ್ಕೆ ಅನುಕೂಲವಾಗುವ ಗುಣಲಕ್ಷಣಗಳಿಗೆ ಬಂದಾಗ ಬಾಳೆ ಹಣ್ಣುಗಳು ಹೆಚ್ಚು ಪ್ರಾಮುಖ್ಯತೆ ಯನ್ನು ಹೊಂದಿರುತ್ತದೆ. ಬಾಳೆಹಣ್ಣು ನೈಸರ್ಗಿಕ ಅಂಟಾಸಿಡ್‌ಗಳನ್ನು ಹೊಂದಿರುತ್ತದೆ. ಇದು ಆಸಿಡ್‌ ರಿಫ್ಲಕ್ಸ್‌ ವಿರುದ್ದ ಕಾರ್ಯನಿರ್ವಹಿಸುತ್ತದೆ. ಆಮ್ಲಿಯತೆಯನ್ನು ತೊಡೆದು ಹಾಕಲು ಬಾಳೆಹಣ್ಣು ಸರಳ ಮನೆಮದ್ದು.

ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next