ನವದೆಹಲಿ: ದೇಶದಲ್ಲಿ ಹಲವು ಸ್ತರಗಳ ಅತ್ಯುನ್ನತ ಸಾರಿಗೆ ಸಂಪರ್ಕವನ್ನು ಕಲ್ಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿರುವ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಯೋಜನೆಗೆ ಕೇಂದ್ರ ಸಂಪುಟದ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಅ. 13ರಂದು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು. ಈ ಯೋಜನೆಯ ನಿಧಿಗೆ ಆರಂಭಿಕ 100 ಲಕ್ಷ ಕೋಟಿ ರೂ.ಗಳನ್ನು ದೇಣಿಗೆ ನೀಡುವುದಾಗಿಯೂ ಪ್ರಕಟಿಸಿದ್ದರು.
ಉನ್ನತ ಮಟ್ಟದ ಸಾರಿಗೆ ಸೌಲಭ್ಯದಿಂದಾಗಿ, ದೇಶದಲ್ಲಿ ಸರಕು ಸಾಗಣೆ ವೆಚ್ಚ ಗಣನೀಯವಾಗಿ ತಗ್ಗಿ, ದೇಶದ ಸರಕು ಸಾಗಣೆಯ ನಿರ್ವಹಣಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚುತ್ತದೆ ಹಾಗೂ ಯಾವುದೇ ಸಾಮಗ್ರಿಗಳು ಒಂದು ಕಡೆಯಿಂದ ಮತ್ತೂಂದು ಕಡೆಗೆ ತ್ವರಿತವಾಗಿ ಸಾಗಾಣಿಕೆಯಾಗುತ್ತವೆ ಎಂದು ಅವರು ವಿವರಿಸಿದ್ದರು.
ಗತಿಶಕ್ತಿ ಯೋಜನೆಯ ಮೇಲ್ವಿಚಾರಣೆಗಾಗಿ ಕೇಂದ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿಯ ನೇತೃತ್ವವಿರುವ ಕೇಂದ್ರದ 18 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳುಳ್ಳ ಉನ್ನತ ಮಟ್ಟದ ಕಾರ್ಯದರ್ಶಿಗಳ ನಿಯೋಗವನ್ನು (ಇಜಿಒಎಸ್) ರಚಿಸಲಾಗುತ್ತದೆ.
ಇದನ್ನೂ ಓದಿ :ಲ್ಯಾಪ್‌ಟಾಪ್‌ಗಳಲ್ಲಿ ಅಡಗಿಸಿಟ್ಟಿದ್ದ 2.19 ಕೋಟಿ ಮೌಲ್ಯದ ಚಿನ್ನ ವಶ !