Advertisement

ಗ್ಯಾಸ್ ಗೀಜರ್‌ ನಿಂದ ಅನಿಲ ಸೋರಿಕೆ: ಉಸಿರುಗಟ್ಟಿ ತಾಯಿ – ಮಗು ಸಾವು

05:39 PM Jan 16, 2022 | Team Udayavani |

ಬೆಂಗಳೂರು: ಗ್ಯಾಸ್ ಗೀಜರ್‌ ನಿಂದ ಅನಿಲ ಸೋರಿಕೆ ಉಸಿರುಗಟ್ಟಿ ತಾಯಿ- ಮಗು ಸಾವನ್ನಪ್ಪಿರುವ ದಾರುಣ ಘಟನೆ  ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ನಡೆದಿದೆ.

Advertisement

ತಾಯಿ ಮಂಗಳ(35) ಮಗು ಗೌತಮಿ (07)  ಮೃತರು.

ಗ್ಯಾಸ್ ಗೀಜರ್‌ ಬಳಸಿ ಸ್ನಾನ ಮಾಡುವಾಗ, ಗೀಜರ್ ಅನಿಲ ಸೋರಿಕೆಯಾಗಿ ತಾಯಿ- ಮಗುವಿಗೆ ಉಸಿರುಗಟ್ಟಿ ಈ ಘಟನೆ ಸಂಭವಿಸಿದ್ದು, ಮನೆ ಮಾಲೀಕೆ ಗಾಯಿತ್ರಿ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಪತಿ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ ಎನ್ನಲಾಗಿದ್ದು, ನರಸಿಂಹಮೂರ್ತಿ ದಂಪತಿ 15 ವರ್ಷದ ಹಿಂದೆ ರಾಮನಗರದಿಂದ ಬಂದು ನಗರದಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next