Advertisement

ರಾಸಾಯನಿಕ ಕಾರ್ಖಾನೆಯಿಂದ ವಿಷಾನಿಲ ಸೋರಿಕೆ: 3 ಮಕ್ಕಳು ಸೇರಿದಂತೆ 7 ಜನರು ದುರ್ಮರಣ

10:07 AM Feb 07, 2020 | Mithun PG |

ಉತ್ತರಪ್ರದೇಶ; ರಾಸಾಯಾನಿಕ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಾದ ಕಾರಣ ಮೂರು ಮಕ್ಕಳು ಸೇರಿದಂತೆ 7 ಜನರು ಸಾವನ್ನಪ್ಪಿದ ಘಟನೆ ಸಿತಾಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

Advertisement

ಬಿಸ್ವಾನ್‌ ನ ರಾಸಾಯನಿಕ ಕಾರ್ಖಾನೆಯ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾಗಿದ್ದು,  ಪರಿಣಾಮವಾಗಿ  ಕಾರ್ಖಾನೆಯೊಳಗೆ ಮಲಗಿದ್ದವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ವರದಿ ತಿಳಿಸಿದೆ.

ಸ್ಥಳೀಯರು ಅನಿಲ ಸೋರಿಕೆಯಾಗುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು , ಆದರೇ ತೀವ್ರತರವಾದ ವಾಸನೆಯಿಂದ ಕಾರ್ಖಾನೆಯೊಳಗೆ ತಕ್ಷಣ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕೂಡಲೇ ಪೊಲೀಸರು ಆಸುಪಾಸಿನಲ್ಲಿ ವಾಸಿಸುತ್ತಿದ್ದ ಜನರನ್ನು ತೆರವುಗೊಳಿಸಿದ್ದಾರೆ. ನಂತರ ಕಾರ್ಖಾನೆಯೊಳಗೆ ಇದ್ದ ಮೂರು ಮಕ್ಕಳು ಸೇರಿದಂತೆ 7 ಜನರ ಮೃತದೇಹಗಳನ್ನು ಹೊರ ತೆಗೆಯಲಾಯಿತು ಎಂದು ಸಿತಾಪುರ್ ಎಸ್’ಪಿ  ಎಲ್ ಆರ್ ಕುಮಾರ್ ತಿಳಿಸಿದ್ದಾರೆ.

ಸ್ಥಳೀಯರ ಘಟನೆಯಲ್ಲಿ ಕೆಲವು ಪ್ರಾಣಿಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಉತ್ತರಪ್ರದೇಶ ಮುಖ್ಯಮಂತ್ರಿ ಘಟನೆಯ ಕುರಿತು ಸಂತಾಪ ಸೂಚಿಸಿದ್ದು , ಅಧಿಕಾರಿಗಳಿಗೆ ಸಮಗ್ರ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ 4 ಲಕ್ಷ ಪರಿಹಾರ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next