Advertisement
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀಧರ್ ವೈಷ್ಣವ್, “ಇದೊಂದು ತಂದೆ ಮಗನ ಬಾಂಧವ್ಯದ ಸುತ್ತ ನಡೆಯುವಂಥ ಸಿನಿಮಾ. ತನ್ನ ತಂದೆಯೇ ಕೊಲೆ ಮಾಡಿದವರನ್ನು ಗರುಡನ ಕಣ್ಣಿನಂತೆ ಸೂಕ್ಷ್ಮವಾಗಿ ಹುಡುಕುವ ಥ್ರಿಲ್ಲಿಂಗ್ ಕಥೆ ಸಿನಿಮಾದಲ್ಲಿದೆ. ಸಿನಿಮಾದ ಕಥೆಗೆ ಹೋಲಿಕೆಯಾಗುತ್ತದೆ ಎಂಬ ಕಾರಣಕ್ಕೆ “ಗರುಡಾಕ್ಷ’ ಎಂದು ಟೈಟಲ್ ಇಡಲಾಗಿದೆ. ಸದ್ಯ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಿನಿಮಾದ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.
Related Articles
Advertisement
“ಕ್ಷೀರಪಥ ಮೂವೀಸ್’ ಬ್ಯಾನರ್‌ನಲ್ಲಿ ಎಸ್. ನರಸಿಂಹ ಮೂರ್ತಿ ನಿರ್ಮಿಸುತ್ತಿರುವ “ಗರುಡಾಕ್ಷ’ ಚಿತ್ರಕ್ಕೆ ಚಿತ್ರಕ್ಕೆ ವೀರೇಶ್ ಎನ್‌ಟಿಎ ಛಾಯಾಗ್ರಹಣ, ಎನ್. ಎಂ. ವಿಶ್ವ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಶ್ರೀವತ್ಸ ಸಂಗೀತವಿದೆ. ಡಾ. ವಿ ನಾಗೇಂದ್ರ ಪ್ರಸಾದ್, ಅರಸು ಅಂತಾರೆ ಸಾಹಿತ್ಯವಿದೆ. ಚಿತ್ರಕ್ಕೆ ಸುರೇಶ್ ನೃತ್ಯ, ವೈಲೆಂಟ್ ವೇಲು ಸಾಹಸ ಸಂಯೋಜನೆಯಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ ಫೆಬ್ರವರಿ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.