Advertisement

ಬೆಳ್ಳುಳ್ಳಿ ಬೆಲೆ ಅರ್ಧಕ್ಕರ್ಧ ಕುಸಿತ, ಬೆಳೆಗಾರರು ಕಂಗಾಲು

02:01 PM Sep 10, 2021 | Team Udayavani |

ಗುಂಡ್ಲುಪೇಟೆ: ಬೆಳ್ಳುಳ್ಳಿ ಧಾರಣೆ ಕುಸಿತ ಕಂಡಿದ್ದು, ಕ್ವಿಂಟಲ್‌ಗೆ 8ರಿಂದ 10 ಸಾವಿರ ರೂ. ಇರುವುರಿಂದ ತಾಲೂಕಿನಲ್ಲಿ ಬೆಳ್ಳುಳ್ಳಿ ಬೆಳೆದ ರೈತರ ಕಣ್ಣಲ್ಲಿ ಕಣ್ಣೀರು ಬರುವಂತಾಗಿದೆ. ಇದರಿಂದ ಹಾಕಿದ ಬಂಡವಾಳವೂಕೈ ಸೇರದಾಗಿದೆ.

Advertisement

ಕಳೆದ ಸಾಲಿನಲ್ಲಿ ಕ್ವಿಂಟಲ್‌ಗೆ25ರಿಂದ30 ಸಾವಿರ ರೂ. ಬೆಲೆ ಇದ್ದ ಹಿನ್ನೆಲೆ ರೈತರು ಈ ಬಾರಿ ತಾಲೂಕಿನಲ್ಲಿ 700 ರಿಂದ 800 ಎಕರೆ ಪ್ರದೇಶ ದಲ್ಲಿ ಬೆಳ್ಳುಳ್ಳಿ ಬೆಳೆದಿದ್ದರು. ಪ್ರಸಕ್ತ ಸಾಲಿನಲ್ಲಿ ಮೊದಲ ಬೀಡಿನ ಬೆಳ್ಳುಳ್ಳಿ ಕ್ವಿಂಟಲ್‌ಗೆ 10 ಸಾವಿರ, ಎರಡನೇಯ ಕೊಯ್ಲಿಗೆ 6 ಸಾವಿರ,ಮೂರನೇ ದರ್ಜೆಗೆ 3 ಸಾವಿರ ರೂ.ಗೆ ಇಳಿದಿದೆ. ಇದೀಗ ಶೇ.70ರಷ್ಟು ಮಂದಿರೈತರುಬೆಳ್ಳುಳ್ಳಿಕಿತ್ತು ಮಾರಾಟ ಮಾಡಿದ್ದಾರೆ.

ಜಿಲ್ಲೆ ಮತ್ತು ತಾಲೂಕಿನಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ರೈತರು ಪಕ್ಕದ ತಮಿಳುನಾಡಿನ ಮೇಟುಪಾಳ್ಯಂಗೆ ಬೆಳೆ ತೆಗೆದುಕೊಂಡು
ಹೋಗುತ್ತಿದ್ದಾರೆ. ಅಲ್ಲಿಯೂ ಸೂಕ್ತ ಬೆಲೆ ಇಲ್ಲದ ಕಾರಣಕೇಳಿದ ಬೆಲೆಗೆಕೊಟ್ಟು ಬರಬೇಕಿದೆ. ತಾಲೂಕಿನ ಕಲ್ಲಿಗೌಡನಹಳ್ಳಿ, ಗೋಪಾಲಪುರ, ಕುಣಗಳ್ಳಿ, ಬೇರಂಬಾಡಿ, ಹಂಗಳ ಸೇರಿದಂತೆ ಇತರೆ ಭಾಗದಲ್ಲಿ ರೈತರು ಹೆಚ್ಚಿನ ರೀತಿಯಲ್ಲಿ ಬೆಳ್ಳುಳ್ಳಿ ಬೆಳೆ ಬೆಳೆದಿದ್ದಾರೆ. ಬಿತ್ತನೆ ಬೆಳ್ಳುಳ್ಳಿ ಕ್ವಿಂಟಲ್‌ಗೆ 15 ಸಾವಿರ ರೂ. ಕೊಟ್ಟು ತಂದಿದ್ದು, ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ 60 ಸಾವಿರ ರೂ.ಹಣವ್ಯಯಿಸಿದ್ದಾರೆ.ಔಷಧಿ,ಗೊಬ್ಬರ, ಕೂಲಿ ಆಳು ಸೇರಿದಂತೆ ಎಕರೆಗೆ 1.2 ಲಕ್ಷ ರೂ. ಖರ್ಚು ಮಾಡಿದ್ದಾರೆ.

ಇದನ್ನೂ ಓದಿ:ಉಡುಪಿ ಜಿಲ್ಲೆಯಾದ್ಯಂತ ವೀಕೆಂಡ್ ಕರ್ಫ್ಯೂ ರದ್ದು :ನೈಟ್ ಕರ್ಫ್ಯೂ ಮುಂದುವರಿಕೆ : ಕೂರ್ಮ ರಾವ್

ಬೆಳ್ಳುಳ್ಳಿ 3ತಿಂಗಳ ಬೆಳೆಯಾಗಿದ್ದು, ಬೆಳೆ ಹಾಕಿದ ನಂತರ ಮೈಕ್ರೋ ಸ್ಪಿಂಕ್ಲರ್‌ ಮೂಲಕ ನೀರು ಹಾಯಿಸಿಮೊದಲಿಗೆ ಗೆಡ್ಡೆಗೆಮೂರು ಬಾರಿಔಷಧಿ,
ನಂತರ ಬೆಳೆಗೆ ರೋಗ ಕಾಣಿಸಿಕೊಳ್ಳದಂತೆ ಹಂತ ಹಂತವಾಗಿ ಒಂದು ಎಕರೆಗೆ 10 ರಿಂದ 12 ಸಲ ಔಷಧ ಸಿಂಪಡಿಸಬೇಕು. ಜೊತೆಗೆ 25ರಿಂದ 30 ಮೂಟೆ ಗೊಬ್ಬರ ಹಾಕಬೇಕು. ಇಷೆ rಲ್ಲ ಶ್ರಮ ವಹಿಸಿದರೂ ಬೆಳ್ಳುಳ್ಳಿಗೆ ಬೆಂಬಲ ಬೆಲೆ ಇಲ್ಲದಿರುವುದ ರಿಂದ ಸಾಲದ ಸುಳಿಗೆ ಸಿಲುಕು ವಂತಾಗಿದೆ ಎಂದು ರೈತ ಹಂಗಳ ಮಾಧು ಅಳಲು ತೋಡಿಕೊಂಡರು. 3 ಎಕರೆ ಜಮೀನಿನಲ್ಲಿ 3.5 ಲಕ್ಷ ರೂ. ವ್ಯಯಿಸಿ ಬೆಳ್ಳುಳ್ಳಿ ಬೆಳೆದಿದ್ದೆ. ಇದೀಗ ಸೂಕ್ತ ಬೆಲೆ ಇಲ್ಲದ ಕಾರಣ ಹಾಕಿದ ಬಂಡವಾಳವೂ ಕೈ ಸೇರಿಲ್ಲ. ಸರ್ಕಾರ ಬೆಳೆ ನಷ್ಟ ಪರಿಹಾರ ನೀಡದಿದ್ದರೆ ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆಎಂದುಕಲ್ಲಿಗೌಡನಹಳ್ಳಿ ರೈತ ಬಸವರಾಜು ಅಸಹಾಯಕ ವ್ಯಕ್ತಡಿಸಿದ್ದಾರೆ.

Advertisement

ತಾಲೂಕಿನಲ್ಲಿ ಈ ಬಾರಿ ಅಧಿಕ ಮಂದಿರೈತರುಬೆಳ್ಳುಳ್ಳಿ ಬೆಳೆದಿರುವ ಹಿನ್ನೆಲೆ ಬೆಲೆ ಕುಸಿತ ಕಂಡಿದೆ.ಕೊರೊನಾದಿಂದ ಮಾರುಕಟ್ಟೆಗಳು ಇನ್ನು ಸರಿಯಾಗಿ ತೆರೆದಿಲ್ಲ.ಜೊತೆಗೆಕೊಳ್ಳುವವರ ಸಂಖ್ಯೆಯೂ ತೀರ ಕಡಿಮೆ ಇದೆ. ಇದರಿಂದ ಬೆಳ್ಳುಳ್ಳಿಗೆ ಸೂಕ್ತಬೆಲೆ ಸಿಕ್ಕಿಲ್ಲ.
-ಬಿ.ಎಸ್‌.ರಾಜು, ತೋಟಗಾರಿಗೆ
ಇಲಾಖೆ ಹಿರಿಯ ಸಹಾಯಕ
ನಿರ್ದೇಶಕ

ಬೆಳ್ಳುಳ್ಳಿ ಮಾರುಕಟ್ಟಕಲ್ಪಿಸಿ
ರಾಜ್ಯದಲ್ಲಿ ಬೆಂಗಳೂರಿನ ಯಶ್ವಂತಪುರ ಬಿಟ್ಟರೆ ಈ ಭಾಗದಲ್ಲಿ ಎಲ್ಲೂ ಬೆಳ್ಳುಳ್ಳಿ ಮಾರುಕಟ್ಟೆ ಇಲ್ಲದ ಕಾರಣ ಜಿಲ್ಲೆ ಸೇರಿದಂತೆ ತಾಲೂಕಿನ ರೈತರು ಪಕ್ಕದ ತಮಿಳುನಾಡಿನ ಮೇಟು ಪಾಳ್ಯಂಗೆಹೋಗಿ ಕೇಳಿದಷ್ಟ ದರಕ್ಕೆಮಾರಬೇಕಾ ಗಿದೆ. ಇದಕ್ಕೆ ವಾಹನ ಬಾಡಿಗೆಯೂ 10 ಸಾವಿರ ಕ್ಕಿಂತ ಹೆಚ್ಚು ತಗಲುತ್ತದೆ. ಸರ್ಕಾರ ಮೈಸೂರು ಭಾಗದಲ್ಲಿಬೆಳ್ಳುಳ್ಳಿ ಮಾರುಕಟ್ಟೆ ತೆಗೆದುಬೆಂಬಲ ಬೆಲೆ ಘೋಷಿಸಬೇಕೆಂದು ರೈತ ಮುಖಂಡ ಶಿವಪುರ ಮಹದೇವಪ್ಪ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next