Advertisement

ಗರೀಬ್‌ ಕಲ್ಯಾಣ ವಿಸ್ತರಣೆ: ಪ್ರಧಾನಿಗೆ ನಳಿನ್‌ ಕುಮಾರ್‌ ಕಟೀಲ್‌ ಧನ್ಯವಾದ

08:16 PM Nov 24, 2021 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ವಿತರಿಸಲಾಗುತ್ತಿರುವ ಉಚಿತ ಪಡಿತರವನ್ನು 2022ರ ಮಾರ್ಚ್‌ ಅಂತ್ಯದ ವರೆಗೆ ವಿಸ್ತರಿಸುವ ಕೇಂದ್ರ ಸರಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸ್ವಾಗತಿಸಿದ್ದಾರೆ. ಈ ನಿರ್ಧಾರಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನತೆಯ ಪರವಾಗಿ ಧನ್ಯವಾದ ಸಮರ್ಪಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬರುವ ಬಡವರು ಹಸಿವಿನಿಂದ ತೊಂದರೆಗೆ ಸಿಲುಕಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಪ್ರಧಾನಿ ಅನುಷ್ಠಾನಕ್ಕೆ ತಂದಿದ್ದರು. ಪ್ರಧಾನಿಯವರು ಈ ಯೋಜನೆಯನ್ನು ವಿಸ್ತರಿಸಿದ್ದರಿಂದ ದೇಶದ ಸುಮಾರು 80 ಕೋಟಿಗೂ ಹೆಚ್ಚು ಫ‌ಲಾನುಭವಿಗಳು ಇನ್ನೂ ನಾಲ್ಕು ತಿಂಗಳು ಅಂದರೆ 2022ರ ಮಾರ್ಚ್‌ ಅಂತ್ಯದ ವರೆಗೆ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಇದು ಅತ್ಯಂತ ಜನಪರ ನಿರ್ಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳ್ಳುಳ್ಳಿಯನ್ನು ಶುಂಠಿಯೆಂದ ಪಾಕ್‌ ಸಚಿವ!

ಈ ಹಿಂದೆ ದೀಪಾವಳಿವರೆಗೆ ಈ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಬಡಜನರಿಗೆ ನೆರವಾಗುವ ವಿಶ್ವದ ಅತ್ಯಂತ ದೊಡ್ಡ ಯೋಜನೆಯನ್ನು ಇದೀಗ ಮತ್ತಷ್ಟು ವಿಸ್ತರಿಸಿರುವುದು ಪ್ರಧಾನಿಯವರಿಗೆ ಬಡಜನರ ಕುರಿತು ಇರುವ ಕಳಕಳಿಯನ್ನು ಅನಾವರಣಗೊಳಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next