Advertisement
ಗಾರ್ಡನ್ಹಸುರು ಸಮೃದ್ಧಿಯ ಸಂಕೇತ. ಇದನ್ನು ಪಾಸಿಟಿವ್ ಕಲರ್ ಎಂದು ನಂಬಿದವರೂ ನಮ್ಮಲ್ಲಿದ್ದಾರೆ. ನಿಸರ್ಗವೆಂದರೆ ಮೊದಲಿಗೆ ನಮಗೆ ನೆನಪಿಗೆ ಬರುವುದು ನಮ್ಮ ಮನದಾಳಕ್ಕೆ ಎಂದೂ ಹೋಗುವ ಬಣ್ಣ ಹಸಿರು. ಹೀಗೆ ಬಹು ವಿಧದಲ್ಲಿ ಮಾನ್ಯತೆ ಪಡೆದಿರುವ ಗ್ರೀನರಿಯ ಜತೆಗೆ ಇನ್ನೊಂದಷ್ಟು ಬಣ್ಣಗಳನ್ನು ಗಿಡ ಮರಗಳ ಮೂಲಕ ನಮ್ಮ ಅಂಗಳವನ್ನು ಶೃಂಗಾರ ಮಾಡಿದರೆ ನಮ್ಮ ಮನಸ್ಸಿನ ಜತೆಗೆ ಆಗಮಿಸುವ ಅತಿಥಿಗಳ ಸಂತೋಷವನ್ನು ವೃದ್ಧಿಸುವಲ್ಲಿಯೂ ಇದು ಕೆಲಸ ಮಾಡುತ್ತದೆ.
ನೀವು ಗಾರ್ಡನ್ ನಿರ್ಮಿಸಬೇಕು ಎಂದು ಯೋಚಿಸುತ್ತಿರುವ ಪ್ರದೇಶದಲ್ಲಿರುವ ಮಣ್ಣಗೆ ಅನುಗುಣವಾಗಿ ನೀವು ಬೆಳೆಸಬೇಕೆಂದಿರುವ ಸಸ್ಯಗಳ ಆಯ್ಕೆ ಇದ್ದರೆ ಚೆನ್ನ. ಜತೆಗೆ ಸೂರ್ಯನ ಬೆಳಕು ಹೇಗೆ ಬೀಳುತ್ತದೆ ಎನ್ನುವ ಆಧಾರದಲ್ಲಿ ಗಾರ್ಡನ್ ಏರಿಯಾವನ್ನು ಆಯ್ಕೆ ಮಾಡಿಕೊಳ್ಳುವುದು ಸಹ ತೀರಾ ಮುಖ್ಯ. ಜತೆಗೆ ಹೇಗೆ ಗಾರ್ಡನ್ ಏರಿಯಾವನ್ನು ಸಿದ್ಧ ಪಡಿಸುವುದು ಎನ್ನುವ ಕುರಿತಾದಂತೆ ನೀಲ ನಕಾಶೆಯನ್ನು ಸಿದ್ಧ ಪಡಿಸಿ, ಆ ರೀತಿಯಲ್ಲಿಯೇ ಅದಕ್ಕೆ ಯೋಜನೆಗಳನ್ನು ರೂಪಿಸಿಕೊಂಡಿರಿ ಎಂದಾದಲ್ಲಿ ನಿಮ್ಮ ಗಾರ್ಡನ್ ಕನಸು ಮತ್ತಷ್ಟು ಪರಿಣಾಮಕಾರಿಯಾಗಿ ಮೂಡುವುದು ಸಾಧ್ಯ. ಗಾರ್ಡನ್‌ನಲ್ಲಿ ನಿಮ್ಮ ಮನೆಯಲ್ಲಿಯೇ ಉಪಯೋಗಕ್ಕಿಲ್ಲದ ಹಳೆಯ ಪಾತ್ರೆಗಳು, ಬಕೆಟ್, ಮಗ್ ಇತ್ಯಾದಿಗಳನ್ನು ಬಳಕೆ ಮಾಡಿ ಸಸಿ ನೆಟ್ಟರೆ ಕಡಿಮೆ ಖರ್ಚಿನಲ್ಲಿ ಹಸಿರುಮನೆಯು ನಿಮ್ಮನೆ ಮುಂದೆ ನಿರ್ಮಾಣವಾಗುತ್ತದೆ. ಅದರೊಂದಿಗೆ ನಿಮ್ಮನೆಯಲ್ಲಿ ರಾಶಿ ಬಿದ್ದ ಹಳೆ ವಸ್ತುಗಳಿಗೂ ಮುಕ್ತಿ ಕೊಟ್ಟ ನೆಮ್ಮದಿ ನಿಮ್ಮ ಪಾಲಿನದಾಗುತ್ತದೆ. ನೀರಿನ ವ್ಯವಸ್ಥೆಯ ಬಗೆಗೂ ನೀವು ಚಿತ್ತ ಹರಿಸಿದಿರಿ ಎಂದಾದಲ್ಲಿ ವರ್ಷಪೂರ್ತಿ ಅವು ತಾಜಾ ಎನಿಸಿಕೊಳ್ಳುತ್ತದೆ
Related Articles
Advertisement
•ಭುವನ ಬಾಬು, ಪುತ್ತೂರು