Advertisement

ಅಂಗನವಾಡಿ ಆವರಣದಲ್ಲಿ ಕಂಗೊಳಿಸುತ್ತಿದೆ ಕೈತೋಟ

03:04 PM Oct 27, 2021 | Team Udayavani |

ತೆಲಸಂಗ: ಮಕ್ಕಳಿಗೆ ಚಿಕ್ಕವರಿರುವಾಗಲೇ ಪರಿಸರ ಕಾಳಜಿ ಮೂಡಿಸಲು ಹಾಗೂ ಪಾಲಕರಲ್ಲಿ ಪೌಷ್ಟಿಕ ಆಹಾರದ ಕುರಿತು ಜಾಗೃತಿ ಮೂಡಿಸಲು ಅಂಗನವಾಡಿ ಅಂಗಳದಲ್ಲಿ ಕೈತೋಟ ಮಾಡಿ ತರಕಾರಿ ಬೆಳೆಯಲಾಗುತ್ತಿದೆ.

Advertisement

ತೆಲಸಂಗ ವಲಯ ವ್ಯಾಪ್ತಿಯ ತೆಲಸಂಗ, ಕನ್ನಾಳ, ಬನ್ನೂರ, ಹಾಲಳ್ಳಿ ಒಟ್ಟು 4ಗ್ರಾಮಗಳ 19 ಅಂಗನವಾಡಿ ಕೇಂದ್ರಗಳ ಪೈಕಿ 7 ಅಂಗನವಾಡಿ ಕೇಂದ್ರಗಳ ಅಂಗಳದಲ್ಲಿ ಕೈತೋಟ ಹಸಿರಿನಿಂದ ಕಂಗೊಳಿಸಿ ಜನರನ್ನು ಆಕರ್ಷಿಸುತ್ತಿವೆ.

ಸುಮಾರು ಒಂದು ವರ್ಷದ ಹಿಂದೆ ಅಂಗನವಾಡಿ ಅಂಗಳದಲ್ಲಿ ಆಸಕ್ತ ಅಂಗನವಾಡಿ ಕಾರ್ಯಕರ್ತೆಯರು ಕೈತೋಟ ಮಾಡುವಂತೆ ಇಲಾಖೆ ಹೇಳಿತ್ತು. ಕೈತೋಟ ಹೇಗೆ ಮಾಡುವುದು ಎಂದು ತಿಳಿಸಲು ಅನೇಕ ಸಭೆಗಳನ್ನು ನಡೆಸಿ ತರಕಾರಿ ಮತ್ತು ಹಣ್ಣುಗಳ ಬೀಜ ವಿತರಿಸಿ ಉತ್ತೇಜನ ನೀಡಿತ್ತು. ಆದರೆ ಕೆಲ ಅಂಗನವಾಡಿ ಕೇಂದ್ರಗಳಿಗೆ ಅಂಗಳದ ಕೊರತೆ, ಇನ್ನು ಕೆಲ ಅಂಗನವಾಡಿ ಕೇಂದ್ರಗಳಿಗೆ ನೀರಿನ ಕೊರತೆ ಮತ್ತು ಕೆಲ ಕಾರ್ಯಕರ್ತೆಯರ ಇಚ್ಛಾಶಕ್ತಿ ಕೊರತೆಯಿಂದ ಅನೇಕ ಕಡೆ ಕೈತೋಟ ಮಾಡಲು ಸಾಧ್ಯವಾಗಿಲ್ಲ.

ತೆಲಸಂಗ ವ್ಯಾಪ್ತಿಯ 4 ಗ್ರಾಮಗಳ 19 ಕೇಂದ್ರಗಳ ಪೈಕಿ 7 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಕೈತೋಟ ಮಾಡಿ ಹೌದೆನಿಸಿಕೊಂಡಿದ್ದಾರೆ. ಗ್ರಾಮದ ಬನದನಾಲಾ, ಶಾಸಕರ ಮಾದರಿ ಶಾಲೆ ಆವರಣದಲ್ಲಿನ ಅಂಗನವಾಡಿ ಹಾಗೂ ಎಸ್‌.ಸಿ ಓಣಿ, ಕೆವಿಜಿಬಿ ಬ್ಯಾಂಕ್ ಎದುರಗಡೆಯ ಕೇಂದ್ರ 4ರಲ್ಲಿ ಒಟ್ಟು ಗ್ರಾಮದ 4 ಅಂಗನವಾಡಿ ಕೇಂದ್ರಗಳ ಅಂಗಳದಲ್ಲಿ ಕೈತೋಟ ಮಾಡಿದ್ದಾರೆ. ಇಲ್ಲಿ ಮಕ್ಕಳು, ಮಹಿಳೆಯರಲ್ಲಿ ಕೈತೋಟ, ಪೌಷ್ಟಿಕಾಂಶ, ಸಾವಯುವ ತರಕಾರಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜನರೂ ತಮ್ಮ ಮನೆಯಂಗಳದಲ್ಲಿ ಮನೆಗಾಗುವಷ್ಟು ತರಕಾರಿ ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ.

ಇದನ್ನೂ ಓದಿ: ಜೀವನಾಡಿ ಕೆಆರ್‌ಎಸ್‌ ಡ್ಯಾಂ ಅಂತೂ ಭರ್ತಿ

Advertisement

ಪ್ರತಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಕೈತೋಟ ರೂಪಿಸಲು ಕಾರ್ಯಕರ್ತೆಯರ ಶ್ರಮ ಬಹಳಷ್ಟಿದೆ. ನೀರು, ಅಂಗಳದ ಕೊರತೆಯ ಮಧ್ಯೆಯೂ ಕೆಲ ಅಂಗನವಾಡಿ ಕಾರ್ಯಕರ್ತೆಯರು ಮಾದರಿ ಕಾರ್ಯ ಮಾಡಿದ್ದಾರೆ. -ಎಸ್‌.ಎಸ್‌.ಶಾಸ್ತ್ರೀಮಠ ಮೇಲ್ವಿಚಾರಕಿ, ತೆಲಸಂಗ.

ತೋಟ ಮಾಡಲು ನಾವು ಶ್ರಮವಹಿಸಬಹುದು. ಆದರೆ ತೋಟದ ರಕ್ಷಣೆಯ ಜವಾಬ್ದಾರಿ ಬಹಳಷ್ಟಿದೆ. ಶಾಲಾ ಅವ ಧಿಯ ನಂತರ ದನಗಳ ಹಾವಳಿ, ನೀರಿನ ಕೊರತೆ ಇವೆಲ್ಲದರ ಮಧ್ಯೆಯೂ ಅತ್ಯುತ್ತಮವಾಗಿ ತೋಟ ಮಾಡಿದ್ದು ತುಂಬಾ ತೃಪ್ತಿ ತಂದಿದೆ. -ಮಹಾದೇವಿ ಹತ್ತಿ, ಅಂಗನವಾಡಿ ಕೇಂದ್ರ-1 ಕಾರ್ಯಕರ್ತೆ, ತೆಲಸಂಗ.

Advertisement

Udayavani is now on Telegram. Click here to join our channel and stay updated with the latest news.

Next