Advertisement

ಮೊದಲ ಪ್ರಶಸ್ತಿಗೆ ಮುಗುರುಜಾ-ಕೆನಿನ್‌ ಫೈಟ್‌

09:42 AM Feb 01, 2020 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ಸ್ಲಾಮ್‌ ಮಹಿಳಾ ಸಿಂಗಲ್ಸ್‌ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಸ್ಪೇನಿನ ಗಾರ್ಬಿನ್‌ ಮುಗುರುಜಾ ಮತ್ತು ಅಮೆರಿಕದ ಸೋಫಿಯಾ ಕೆನಿನ್‌ ನಡುವೆ ಮಹತ್ವದ ಮುಖಾಮುಖೀ ನಡೆಯಲಿದೆ. ಯಾರೇ ಗೆದ್ದರೂ ಮೊದಲ ಸಲ “ಮೆಲ್ಬರ್ನ್ ಕ್ವೀನ್‌’ ಆಗಲಿದ್ದಾರೆ.

Advertisement

21ರ ಹರೆಯದ ಸೋಫಿಯಾ ಕೆನಿನ್‌ ಒಮ್ಮೆಯೂ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೇರಿಲ್ಲ, ಸೆಮಿಫೈನಲ್‌ಗ‌ೂ ತಲುಪಿರಲಿಲ್ಲ. ಗಾರ್ಬಿನ್‌ ಮುಗುರುಜಾ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ನಲ್ಲಿ ಫೈನಲ್‌ಗೆ ಏರಿರುವುದು ಇದೇ ಮೊದಲು.

ಕೆನಿನ್‌ ಮೂಲತಃ ರಶ್ಯದವರು. 21ರ ವಯಸ್ಸಿನಲ್ಲೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೇರಿ ಭಾರೀ ನಿರೀಕ್ಷೆ ಹುಟ್ಟಿಸಿದ್ದಾರೆ. ಕೆನಿನ್‌ಗೆ ಹೋಲಿಸಿದರೆ ಮುಗುರುಜಾ ಬಹಳ ಅನುಭವಿ. ಇದು ಅವರ 4ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌. 2 ಸಲ ಚಾಂಪಿಯನ್‌ ಆಗಿಯೂ ಮೂಡಿಬಂದಿದ್ದಾರೆ. ಹೀಗಾಗಿ ಅವರಿಗೆ ಇದು ಪ್ರತಿಷ್ಠೆಯ ಕದನ.

Advertisement

Udayavani is now on Telegram. Click here to join our channel and stay updated with the latest news.

Next