Advertisement
ಮಳೆಗೆ ನಗರ ವಾಸಿಗಳ ಬದುಕು ಕೊಚ್ಚುಹೋಗಿದೆ. ಇದೀಗ ಮಳೆ ಕಡಿಮೆಯಾಗಿದ್ದು, ಮಳೆ ಸೃಷ್ಟಿಸಿದ ಅವಾಂತರ ಸರಿ ಮಾಡುವಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದೆ. ಮಳೆ ನೀರು ನಗರದ ಮನೆ ಮನೆಗಳಿಗೂ ನುಗ್ಗಿದ್ದರಿಂದ ಕೊಚ್ಚಿ ತಂದಿದ್ದ ಕಸ ಕೊಳೆಯಲಾರಂಭಿಸಿತ್ತು. ನಗರ ಸಭೆಯ ಪೌರ ಕಾರ್ಮಿಕರ ಕಾರ್ಯಕ್ಷಮತೆಯಿಂದ ಕ್ಷಿಪ್ರವಾಗಿ ತೆಗೆಯುವ ಪ್ರಯತ್ನ ನಡೆಯಿತಾದರೂ ತೆಗೆದಷ್ಟೂ, ಕಸ ಕಂಡಿದ್ದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿತ್ತು.
Related Articles
Advertisement
ಕಸ ತೆರವಿಗೆ ಮೀನಮೇಷ: ಜಿಲ್ಲಾ ಕ್ರೀಡಾಂಗಣ ದಲ್ಲೇ ಯುವಜನ ಕ್ರೀಡಾ ಇಲಾಖೆಯ ವಸತಿ ಗೃಹ ಇದೆ. ಇನ್ನೊಂದು ಪಾರ್ಶ್ವಕ್ಕೆ ಆದಿಚುಂಚನಗಿರಿ ವಿದ್ಯಾರ್ಥಿಗಳ ವಸತಿಗೃಹ. ಅಲ್ಲದೆ, ಹೋಟೆಲ್ ಗಳು, ಬೇಕರಿಗಳು ಇಲ್ಲೇ ಇವೆ. ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ವ್ಯಾಯಾಮ ಮತ್ತಿತರ ಚಟುವಟಿಕೆಗಳಿಗೆ ಇಲ್ಲಿಗೆ ಬರುತ್ತಾರೆ. ಅವರಿಗೂ ಸೇರಿದಂತೆ ನಗರದ ಸಾರ್ವಜನಿಕರಿಗೆ ದುರ್ವಾಸನೆಯಿಂದಾಗಿ ತೀವ್ರ ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಸ ತೆರವಿಗೆ ಜಿಲ್ಲಾಧಿಕಾರಿಗಳೇ ಖಡಕ್ ಸೂಚನೆ ನೀಡಿದ್ದರು. ಕಸ ತೆಗೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ಇದು ನಗರ ಸಭೆಯೋ ಅಥವಾ ನರಕ ಸಭೆಯೋ ಎನ್ನುವಂತಹ ಪ್ರಶ್ನೆ ಉದ್ಬವವಾಗಿದೆ. ನಗರಸಭೆ ಅಧಿಕಾರಿಗಳ ಈ ವರ್ತನೆ ಅವರ ದಪ್ಪ ಚರ್ಮಕ್ಕೆ ಹಿಡಿದ ಕನ್ನಡಿಯಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಕಚೇರಿ ಮುಂಭಾಗವೇ ಕಸದ ರಾಶಿ : ನಗರದ ಮಂಜುನಾಥನಗರ ಮುಖ್ಯರಸ್ತೆ, ಎಪಿಎಂಸಿ ಮುಂಭಾಗ, ಡಾ.ಬಿ.ಆರ್‌ಅಂಬೇಡ್ಕರ್ ಭವನದ ಎದುರು ಹಾಗೂ ತಾಲೂಕು ಕಚೇರಿ ಮುಂಭಾಗ ಕೂಡ ಕಸದ ರಾಶಿ ಜೋರಾಗಿದ್ದು, ಅದರಮೇಲೆ ಮಳೆ ನೀರು ಬಿದ್ದಿದ್ದರಿಂದ ಕೊಳೆತ ಕಸದ ರಸ ರಸ್ತೆಯಲ್ಲೇ ಹರಿಯಲಾರಂಭಿಸಿದೆ. ಹೇಳಿಕೇಳಿ ಕೊರೊನಾ ಭೀತಿಯಲ್ಲಿರುವ ಜನತೆಗೆ ಸ್ವಚ್ಛತೆ ಕಾಪಾಡಿ ಎಂದು ಅರಿವು ಮೂಡಿಸಬೇಕಿದ್ದ ನಗರಸಭೆಯ ಅಧಿಕಾರಿಗಳ ವರ್ತನೆ, ಇಡೀ ನಗರಕ್ಕೆ ಕೆಟ್ಟ ಹೆಸರಿನ ಜೊತೆಗೆ ರೋಗದ ಕೊಡುಗೆ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಕೂಡಲೇ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ಕಸ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ನಗರವಾಸಿಗಳು ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ವರ್ತಕ ಸಿದ್ದರಾಜಯ್ಯ.ಎಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಸ ತೆರವಿಗೆ ಕ್ರಮ: ಪಾರ್ವತಮ್ಮ : ಕಸ ಸುರಿಯುವುದಕ್ಕಾಗಿಯೇ ತಿಂಗಳ ಬಾಡಿಗೆಗೆ ಜಾಗ ಮಾಡಲಾಗಿದೆ. ಅಲ್ಲಿ ರಸ್ತೆ ತೊಂದರೆ ಆಗಿತ್ತು. ರಿಪೇರಿ ಮಾಡಲು ಕೌನ್ಸಿಲ್ ಬಾಡಿ ಯಲ್ಲಿ ತೀರ್ಮಾನಿಸ ಲಾಗಿದೆ. ಆದರೆ, ಮಳೆಯಿಂದ ನೆರೆ ಬಂದಿದೆ. ಅದರಲ್ಲಿ ಪೌರ ಕಾರ್ಮಿ ಕರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಕಸ ಎಲ್ಲಾ ಕಡೆ ಇದೆ ನಿಜ, ಅದನ್ನ ತೆರವು ಮಾಡುವುದಕ್ಕೆ ತೊಂದರೆ ಆಗಿದೆ. ಕೂಡಲೇ ಅಧಿಕಾರಿಗಳಿಗೆ ಸೂಚಿಸಿ, ಕಸ ತೆರವಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ರಾಮನಗರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಬಿ.ಸಿ. ತಿಳಿಸಿದ್ದಾರೆ.
ನಗರದಲ್ಲಿ ಕಸದ ರಾಶಿ ಬಿದ್ದಿರುವು ದಲ್ಲದೆ, ಮಳೆ ನೀರಿಗೆ ಕೊಳೆತು ಗಬ್ಬುನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದ್ದು, ಕೂಡಲೇ ಕಸ ತೆರವು ಮಾಡಬೇಕು. ಇಲ್ಲವಾದರೆ ನಗರ ವಾಸಿ ಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. – ರಾಜೀವ, ನಿವಾಸಿ, ಹನುಮಂತನಗರ
ಮನೆ ಮನೆ ಕಸ ತೆಗೆದುಕೊಳ್ಳಲು ಬರಬೇಕಿದ್ದ ವಾಹನಗಳು ಕಳೆದ ಒಂದು ತಿಂಗಳಿನಿಂದ ಬರುತ್ತಿಲ್ಲ. ಮನೆಯಲ್ಲಿ ಕಸ ಇಟ್ಟುಕೊಳ್ಳಲಾಗದೆ ನಾವೇ ತೆಗೆದುಕೊಂಡು ಹೋಗಿ ರಸ್ತೆ ಬದಿ ದೊಡ್ಡ ದೊಡ್ಡ ರಾಶಿಗಳಲ್ಲೇ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲೂ ಕೂಡ ಕೊಳೆತು ನಾರುತ್ತಿದೆ. ಕೂಡಲೇ ಕಸ ಸಂಪೂರ್ಣ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.– ಎಸ್.ಸಿದ್ದರಾಜು, ರಾಮನಗರ
-ಎಂ.ಎಚ್.ಪ್ರಕಾಶ್ ರಾಮನಗರ