ಸುಳ್ಯ: ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯ, ಪ್ಲಾಸ್ಟಿಕ್, ಕಸಗಳು ಮಳೆ ನೀರಿನೊಂದಿಗೆ ನದಿ, ಹೊಳೆಗೆ ಸೇರಿ ಮತ್ತೆಲ್ಲೋ ರಾಶಿ ಬೀಳುತ್ತಿರುವ ದೃಶ್ಯ ಕಂಡು ಬರಲಾರಂಭಿಸಿದೆ. ಸಾರ್ವ ಜನಿಕರು ಎಲ್ಲೆಂದರಲ್ಲಿ ಎಸೆ ಯುವ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ನೀರು ಮತ್ತೆ ಜನ ಸಮೂಹದತ್ತಲೇ ತಂದು ಒಪ್ಪಿಸಿದೆ.
ಪ್ಲಾಸ್ಟಿಕ್ ಬಾಟಲ್ ರಾಶಿ
ಬಾಟಲಿಯನ್ನು ಎಲ್ಲೆಲ್ಲೋ ಎಸೆದ ಪರಿಣಾಮ ಅದು ನೀರಲ್ಲಿ ಸೇರಿಕೊಂಡು ನದಿಯಲ್ಲಿ ಸಾಗುತ್ತಾ ಬಂದು ದಡದಲ್ಲಿ ರಾಶಿ ಬಿದ್ದು ಅಣಕಿಸುವಂತಿದೆ. ಜತೆಗೆ ಪ್ಲಾಸ್ಟಿಕ್ ಬ್ಯಾಗ್, ಇತರ ಪ್ಲಾಸ್ಟಿಕ್ ಉತ್ಪನ್ನಗಳೂ ಇವೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ಭಾಗದಿಂದ ಹರಿಯುವ ಕುಮಾರಧಾರಾ ನದಿಯಲ್ಲಿ ಈ ರೀತಿಯ ಭಾರೀ ಪ್ರಮಾಣದ ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯಗಳು ಕಂಡು ಬಂದಿದೆ. ಜನರು ಜಾಗೃತಗೊಂಡಲ್ಲಿ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ.
ಪರಿಸರಕ್ಕೆ ಮಾರಕವಾಗುವ ತ್ಯಾಜ್ಯ ಗಳು ನೀರಿನೊಂದಿಗೆ ಬೆರೆಯುವುದು ಇನ್ನೂ ಅಪಾಯಕಾರಿ. ಒಂದೆಡೆ ಸೇರುವ ಇಂತಹ ಬಾಟಲಿಯಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣ ವಾಗಲಿದೆಯೆಂಬ ಆತಂಕ ಸ್ಥಳೀಯರದ್ದು.