Advertisement
ಇನ್ನು ಇದೇ ಅವಧಿಯಲ್ಲಿ ಕಸ ವಿಂಗಡಣೆ ಮಾಡುವುದರಲ್ಲಿ ಲೋಪ ವೆಸಗಿದ ಹಾಗೂ ಸಮರ್ಪಕವಾಗಿ ಕಸ ನೀಡದ ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್, ಹೋಟೆಲ್, ಮಾಲ್ ಹಾಗೂ ವಾಣಿಜ್ಯ ಉದ್ಯಮಗಳಿಗೆ 28.95ಲಕ್ಷ ರೂ. ದಂಡ ವಿಧಿಸಲಾಗಿದೆ. 55,371 ವಾಣಿಜ್ಯ ಉದ್ದಿಮೆಗಳಿಗೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದು, ಕಸ ವಿಂಗಡಣೆ ಮಾಡದ ಆರೋಪದ ಮೇಲೆ 30.85 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಇದರಲ್ಲಿ 28.95 ಲಕ್ಷ ರೂ. ಇಲ್ಲಿಯವರೆಗೆ ಸಂಗ್ರಹ ಮಾಡಲಾಗಿದೆ. ಅದೇ ರೀತಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ 1.95 ಕೋಟಿ ರೂ.ದಂಡ ವಿಧಿಸಲಾಗಿದ್ದು, 1.84 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಅಲ್ಲದೆ, 47.8 ಸಾವಿರ ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
Related Articles
Advertisement
ಯಾವ ವಲಯದಲ್ಲಿ ಹೆಚ್ಚು ದಂಡ? : ಕಸ ವಿಂಗಡಣೆ ಲೋಪವೆಸಗುವ ಉದ್ದಿಮೆಗಳಲ್ಲಿ ಬೆಂಗಳೂರು ಪೂರ್ವ ವಲಯ ಮುಂಚೂಣಿಯಲ್ಲಿದೆ. ಅದರಲ್ಲೂ ವಾಣಿಜ್ಯ ಉದ್ದಿಮೆಗಳಲ್ಲಿ ಲೋಪ ಹೆಚ್ಚು ಕಂಡುಬಂದಿದೆ. ಈ ಭಾಗದ ಉದ್ದಿಮೆಗಳಿಂದ ಪಾಲಿಕೆ 18.2 ಲಕ್ಷ ರೂ. ದಂಡ ಸಂಗ್ರಹಿಸಿದೆ. ಇನ್ನು ನಿಷೇಧಿತ ಪ್ಲಾಸ್ಟಿಕ್ ಬಳಕೆಯಲ್ಲಿ ಬೊಮ್ಮನಹಳ್ಳಿ ವಲಯ ಮುಂಚೂಣಿಯಲ್ಲಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಸಿದ ಉದ್ದಿಮೆಗಳ ಮೇಲೆ ಕಳೆದ ವರ್ಷ ಪಾಲಿಕೆ ಆರೋಗ್ಯಾಧಿಕಾರಿಗಳು 64. 84 ಲಕ್ಷ ರೂ. ದಂಡ ವಿಧಿಸಿದ್ದಾರೆ. ವಲಯವಾರು ನೋಟಿಸ್ ನೋಡಿದರೆ, ಪಶ್ಚಿಮ ವಲಯದ ಉದ್ದಿಮೆಗಳಿಗೆ 19,755 ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಗೊಂದಲಕ್ಕೆ ತೆರೆ ಎಳೆಯಲು ಪಾಲಿಕೆ ಚಿಂತನೆ: ನಗರದಲ್ಲಿ ಸಗಟು ಉತ್ಪಾದಕರು (ಹೆಚ್ಚು ಕಸ ಉತ್ಪಾದಿಸುವವರು)ಅವರು ಉತ್ಪಾದಿಸುವ ಕಸವನ್ನು ಅವರೇ ವಿಲೇವಾರಿ ಮಾಡಬೇಕು ಎಂಬ ನಿಯಮ ಇದೆ. ಈ ನಿಯಮ ತಿದ್ದುಪಡಿಗೆ ಸಿದ್ಧವಾಗಿದೆ. ರಾ ಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರಂತರ ವಾಗಿ ಪಾಲಿಕೆಗೆ ಚಾಟಿ ಬೀಸಿದ ಪರಿಣಾಮ ಪಾಲಿಕೆ ಎಚ್ಚೆತ್ತುಕೊಂಡಿದೆ. ಈಗ 10 ಕೆ.ಜಿ.ವರೆಗೆ ಉತ್ಪತ್ತಿಯಾಗುವ ಕಸವನ್ನು ಮಾತ್ರ ಸಂಗ್ರಹ ಮಾ ಡುತ್ತಿದೆ.ಇದಕ್ಕಿಂತ ಹೆಚ್ಚು ಕಸ ಉತ್ಪಾದನೆ ಮಾಡುವವರುತಾವೇ ಪ್ರತ್ಯೇಕವಾಗಿ ವಿಲೇವಾರಿ ಮಾಡುತ್ತಿದ್ದರು. ಸಗಟು ಉತ್ಪಾದಕರು ಎಲ್ಲೆಂದರಲ್ಲಿ ಎಸೆಯು ತ್ತಿರುವಬಗ್ಗೆ, ಬಿಬಿಎಂಪಿ ವಾಹನಗಳಿಗೇ ಕಸ ಸಾಗಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದವು. ಎನ್‌ಜಿಟಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ -2016ರ ನಿಯಮ ಉಲ್ಲಂ ಘನೆ ಮಾಡುತ್ತಿದ್ದು ಸರಿ ಪಡಿಸಿಕೊಳ್ಳಲು ತಿಳಿಸಿತ್ತು.