Advertisement
ನಗರ ಮೇ 2: ಸ್ವಚ್ಛ ಪುತ್ತೂರಿನ ಕನಸು ಬಿತ್ತಿ ನಗರವಿಡೀ ಜಾಗೃತಿ ಮೂಡಿಸಿದ್ದ ನಗರಸಭೆ ವ್ಯಾಪ್ತಿಯ ಮರೀಲು ರೈಲ್ವೇ ಸೇತುವೆ ಸನಿಹದ ತೋಡು ತ್ಯಾಜ್ಯ ತುಂಬುವ ಅನಧಿಕೃತ ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ.
Related Articles
Advertisement
ಮಾದರಿ ವಾರ್ಡ್..!
ವಾರ್ಡ್ ನಂಬರ್ 23 ಮತ್ತು 24ರ ಸರಹದ್ದಿನಲ್ಲಿ ಇರುವ ಈ ತೋಡು ರಸ್ತೆ ಸನಿಹದಲ್ಲೇ ಇದೆ. ಈ ಹಿಂದೆ ಮರೀಲು ಯೂತ್ ಕೌನ್ಸಿಲ್, ಚರ್ಚ್ ವತಿಯಿಂದ ಈ ಪರಿಸರದ ವಾರ್ಡ್‌ಗಳನ್ನು ಮಾದರಿ ವಾರ್ಡ್ ಆಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಹಮ್ಮಿಕೊಂಡಿತ್ತು. ಸ್ವಚ್ಛತಾ ಫಲಕ, ರಸ್ತೆ ಫಲಕ ಸೇರಿದಂತೆ ಸಭೆ ಸಮಾರಂಭ ಆಯೋಜಿಸಿ ಜಾಗೃತಿ ಮೂಡಿಸಿತ್ತು. ಆದರೆ ಈ ತ್ಯಾಜ್ಯದ ರಾಶಿ ಮಾದರಿ ವಾರ್ಡ್ ಕನಸಿಗೆ ಅಡ್ಡಿ ಉಂಟು ಮಾಡಿದೆ.
ಅಪರಿಚಿತರ ಕೃತ್ಯ
ಇಲ್ಲಿ ತ್ಯಾಜ್ಯ, ಕಸ ಎಸೆಯುವವರು ಈ ವಾರ್ಡ್‌ನವರು ಅಲ್ಲ. ಬದಲಿಗೆ ಹೊರ ಭಾಗದಿಂದ ಬಂದು ಎಸೆದು ಹೋಗುತ್ತಾರೆ. ಕೆಲ ಮಾಂಸದ ಅಂಗಡಿ ಯಿಂದ ತ್ಯಾಜ್ಯವನ್ನು ರಾತ್ರಿ ವೇಳೆ ತೋಡಿಗೆ ಎಸೆಯುತ್ತಾರೆ. ವಾಹನ ನಿಲ್ಲಿಸದೆ ತ್ಯಾಜ್ಯದ ಚೀಲಗಳನ್ನು ತೋಡಿಗೆ ಎಸೆಯಲು ಇಲ್ಲಿ ಸಾಧ್ಯವಿರುವ ಕಾರಣ ಕಿಡಿಗೇಡಿಗಳ ಕೃತ್ಯಕ್ಕೆ ಸೂಕ್ತ ಸ್ಥಳ ಎನಿಸಿದೆ. ವಾಹನ ನಿಲ್ಲಿಸದೆ ತ್ಯಾಜ್ಯ ಎಸೆಯುವ ಕಾರಣ ತೋಡಿನ ಬಹುತೇಕ ಭಾಗದಲ್ಲಿ ತ್ಯಾಜ್ಯ ತುಂಬಿದೆ.
ನಗರಸಭೆ ಮೌನ
ಈ ಹಿಂದೆ ಪುರಸಭಾ ಅವಧಿಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ ಅಂದಿನ ಆಡಳಿತ ಸಿಸಿ ಕೆಮಾರ ಅಳವಡಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಅದು ಈ ತನಕ ಕಾರ್ಯಗತವಾಗಿಲ್ಲ. ವಾರ್ಡ್-24 ಪುತ್ತೂರುಮೂಲೆ ರಸ್ತೆ ಈ ತೋಡಿನಲ್ಲೇ ಹಾದು ಹೋಗಿದೆ. ಮಳೆಗಾಲದ ಆರಂಭ, ಬೇಸಗೆ ಕಾಲದ ಆರಂಭದಲ್ಲಿ ವಾಹನ ತೊಳೆದು ನೀರು ಮಲೀನ ಮಾಡುವ ಪ್ರಕರಣ ಎಗ್ಗಿಲ್ಲದೆ ಸಾಗುತ್ತದೆ. ಅದರ ಜತೆಗೆ ಕಸ, ತ್ಯಾಜ್ಯದ ಕಾಟ ತೋಡಿನ ಸ್ವರೂಪವನ್ನೆ ಹಾಳು ಮಾಡಿದೆ. ಅದಾಗ್ಯೂ ನಗರಸಭೆ ಕ್ಯಾರೆ ಅಂದಿಲ್ಲ.