Advertisement
ರಾಜ್ಯೋತ್ಸವದ ಮಾಸದಲ್ಲಿ ನೂರಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಪಟ್ಟಣದ ಕಲಾಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದ ಕಲಾ ಸಂಘವು ಕಲಾವಿದರ ಕೊರತೆಯಿಂದ ನಿರ್ಲಕ್ಷ್ಯಕೊಳ್ಳಗಾಗಿದೆ.
Related Articles
Advertisement
80 ರ ದಶಕದಲ್ಲಿ ಸಂಘದ ಸದಸ್ಯರೇ ಸೇರಿ ಒಂದು ಆರ್ಕೆಸ್ಟ್ರಾ ತಂಡ ಕಟ್ಟಿದ್ದರು. ಕೆಲ ದಿನಗಳ ನಂತರ ಅದೂ ಸ್ಥಗಿತಗೊಂಡಿತು. ಕೆಲ ದಿನಗಳ ನಂತರ ಕೆ.ಎಂ. ಕೃಷ್ಣಮೂರ್ತಿ ಶಾಸಕರಾಗಿದ್ದಾಗ ಹಿರಿಯ ಪತ್ರಕರ್ತ ಎಚ್.ಎಸ್. ಸೂರ್ಯನಾರಾಯಣ ಮತ್ತು ಸಾಹಿತಿ ಅಜ್ಜಂಪುರ ಜಿ.ಸೂರಿ ಯವರಿಗೆ ಕಟ್ಟಡದಜವಾಬ್ದಾರಿ ವಹಿಸಲಾಗಿತ್ತು. ನಂತರದಲ್ಲಿ ಸಂಘದಕಟ್ಟಡ ನಿರುಪಯುಕ್ತ ಎನ್ನುವಂತಾಗಿದೆ. ಕನ್ನಡ ಕಲಾ ಸಂಘ ಪ್ರಸ್ತುತ ಅಸ್ತಿತ್ವದಲ್ಲಿ ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಈಚೆಗೆ ಕನ್ನಡ ಸಾಹಿತ್ಯಪರಿಷತ್‌ನ ಕೆಲ ಸದಸ್ಯರು ಕಲಾ ಸಂಘಕ್ಕೆ ಮರುಜೀವ ನೀಡಲೆತ್ನಿಸಿದ್ದರೂ ಅದು ಮುಂದುವರಿಯಲಿಲ್ಲ. ಆವರಣದ ತುಂಬ ಗಿಡಗಂಟಿಗಳು ಬೆಳೆದಿವೆ.
ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಿ.ಕೆ. ರೇವಣ್ಣಯ್ಯ ಮತ್ತಿತರರು ನಡೆಸಿಕೊಂಡು ಬಂದಿದ್ದರು. ಕಳೆದ ಆರೇಳು ವರ್ಷಗಳಿಂದ ಕಲಾ ಸಂಘವು ಸದಸ್ಯರ ನಿರ್ಲಕ್ಷ್ಯದಿಂದ ಯಾವುದೇ ಚಟುವಟಿಕೆಗಳಿಲ್ಲದೆ ಸೊರಗುತ್ತಿದೆ. ರಾಜ್ಯೋತ್ಸವದ ಮಾಸವಾಗಿರುವ ಈತಿಂಗಳಲ್ಲಿ ಮತ್ತೆ ಮೈಕೊಡವಿಕೊಂಡು ಕಲಾ ಸಂಘವು ಸಾಂಸ್ಕೃತಿಕ ಚಟುವಟಿಕೆಗಳನ್ನು ಕಾಣುವುದೇ ಎಂಬುದುಕಲಾಭಿಮಾನಿಗಳ ಆಶಯವಾಗಿದೆ. ಪಟ್ಟಣದ ಹೆಮ್ಮೆಯ ಕೇಂದ್ರವಾಗಬಹುದಾಗಿದ್ದ ಕನ್ನಡ ಕಲಾ ಸಂಘ ಮತ್ತೆ ಪುನರುಜ್ಜೀವನಗೊಂಡು ಕನ್ನಡದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂಬ ಹಾರೈಕೆ ಕಡೂರಿನವರದ್ದಾಗಿದೆ.
ನೂರಾರು ಹಿರಿಯ ಕಲಾವಿದರು ಸೇರಿ ಕಟ್ಟಿದ ಕಡೂರು ಕನ್ನಡ ಕಲಾ ಸಂಘವು ಕೇವಲ ಕೆಲವು ಪಟ್ಟಭದ್ರ ವ್ಯಕ್ತಿಗಳ ಕಪಿಮುಷ್ಠಿಯಿಂದ ಬಿಡುಗಡೆಗೊಂಡು ನಮಗೆಕಟ್ಟಡದ ಕೀ ನೀಡಿದರೆ ದಿನ ನಿತ್ಯ ಸಂಗೀತ,ವಾದ್ಯಗೋಷ್ಠಿಗಳ ಅಭ್ಯಾಸ ಮಾಡಲು ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸಲು ತಾವು ಸಿದ್ಧರಾಗಿದ್ದೇವೆ. -ಹೊ.ರ.ಕೃಷ್ಣಕುಮಾರ್, ಚುಟುಕು ಕವಿ
-ಎ.ಜೆ.ಪ್ರಕಾಶಮೂರ್ತಿ