ಕನಕಪುರ: ಕಾರ್ತಿಕ ಮಾಸದಲ್ಲಿ ಭಕ್ತರ ದಂಡು ಹೆಚ್ಚಾದಂತೆ ಶಕ್ತಿ ದೇವತೆ ಕಬ್ಬಾಳಮ್ಮನ ಕ್ಷೇತ್ರ ಕಸದ ಗುಂಡಿಯಾಗಿ ಮಾರ್ಪಡುತ್ತಿದೆ.
ತಾಲೂಕಿನ, ಸಾತನೂರು ಹೋಬಳಿಯ, ಶಕ್ತಿ ದೇವತೆ ಕಬ್ಟಾಳು ಗ್ರಾಮದ ಕಬ್ಟಾಳಮ್ಮ ದೇವಾಲಯದ ಸುತ್ತಮುತ್ತ ಪ್ರದೇಶದಲ್ಲಿ ಕಣ್ಣುಹಾಯಿಸಿದ ಕಡೆಯಲೆಲ್ಲ ಕಸದ ರಾಶಿ ಮುಖಕ್ಕೆ ರಾಚುತ್ತಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಕಸ ಸುರಿಯುವುದರಿಂದ ದೇವಾಲಯದ ಸುತ್ತಮುತ್ತ ಪ್ರದೇಶ ಮಲಿನಗೊಂಡು, ಗಬ್ಬುನಾರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಎಲ್ಲೆಂದರಲ್ಲಿ ಕಸದ ರಾಶಿ: ಕಬ್ಬಾಳು ಗ್ರಾಮದ, ಕಬ್ಬಾಳಮ್ಮ ದೇವಾಲಯ ಜಿಲ್ಲೆಯ, ಶಕ್ತಿ ದೇವತೆಯಾಗಿದ್ದು ಕಬ್ಬಾಳು ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತರು ಕಬ್ಟಾಳಮ್ಮನ ದರ್ಶನ ಪಡೆಯಲು ರಾಜ್ಯದ ಮೂಲೆಮೂಲೆಗಳಿಂದ ಭೇಟಿ ನೀಡುತ್ತಾರೆ. ಕಳೆದ ತಿಂಗಳು ಕಾರ್ತಿಕ ಮಾಸದ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡುವ ಭಕ್ತರ ದಂಡೂದುಪ್ಪಟ್ಟಾಗಿದೆ. ಸ್ಥಳೀಯ ಗ್ರಾಪಂ ಅಧಿಕಾರಿಗಳುಕಸ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇದರಿಂದ ಪೂಜೆ ಸಾಮಗ್ರಿಗಳ ಖರೀದಿ ಮತ್ತು ಅಂಗಡಿ ಮಳಿಗಳ ವ್ಯಾಪಾರವೂ ಹೆಚ್ಚಾಗಿದೆ. ಅಂಗಡಿಗಳಲ್ಲಿ ಉತ್ಪತ್ತಿ ಯಾಗುವ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ದೇವಾಲ ಯದ ಅಕ್ಕಪಕ್ಕದಲ್ಲೇ ತಂದು ಸುರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
ದೇಗುಲದ ಎದುರೇ ಕಸ: ಅಂಗಡಿ ವ್ಯಾಪಾರಿಗಳು, ವ್ಯಾಪಾರ ಮಾಡಿ ಪ್ಲಾಸ್ಟಿಕ್, ಪೂಜ ಸಾಮಾಗ್ರಿ ವಸ್ತುಗಳು, ಹೂವಿನ ಹಾರಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಹಾಗೂ ತ್ಯಾಜ್ಯದ ವಸ್ತುಗಳನ್ನು ಮೂಟೆ ಕಟ್ಟಿ ಎಲ್ಲೆಂದರಲ್ಲಿ ತಂದು ಬಿಸಾಡಿದ್ದಾರೆ. ಕಬ್ಟಾಳಮ್ಮನ ದೇವಾಲಯದ ಕಾಂಪೌಂಡ್ ಎದುರೇ ಕಸದ ರಾಶಿಯೇ ಬಿದ್ದಿದೆ. ಹಾಗೂ, ಕಬ್ಟಾಳ ಗ್ರಾಪಂ ಮುಂಭಾಗದ ಬೆಸ್ಕಾಂ, ಕಚೇರಿ ಮುಂಭಾಗದ ಖಾಲಿ ಜಾಗದಲ್ಲಿ ರಾಶಿಗಟ್ಟಲೆ, ಪ್ಲಾಸ್ಟಿಕ್ ವಸ್ತುಗಳು ತ್ಯಾಜ್ಯವನ್ನು ಮೂಟೆಗಟ್ಟೆಲೆ ಸುರಿಯಲಾಗಿದೆ.
ವರ್ತಕರ ಬೇಜವಾಬ್ದಾರಿ: ಸ್ಥಳೀಯ ಸಂಸ್ಥೆ ಅಧಿಕಾರಿಗಳು ದೇವಾಲಯದ ಮುಂಭಾಗದ, ಅಂಗಡಿ ತೆರವುಗೊಳಿಸಿ, ದೇವಾಲಯದ ಕಾಂಪೌಂಡ್, ಮುಂಭಾಗ ಸ್ವಚ್ಛಗೊಳಿಸಿದರು.ಆದರೆ, ಸ್ಥಳೀಯ ರಾಜಕಾರಣಿಗಳು, ಮಧ್ಯ ಪ್ರವೇಶಿಸಿ, ದೇವಾಲಯದ, ಮುಂಭಾಗದಲ್ಲೇ ಅಂಗಡಿಗಳಿದ್ದು ವ್ಯಾಪಾರ ವಹಿವಾಟಿಗೆ ಅವಕಾಶ ಕೊಟ್ಟಿದ್ದಾರೆ. ಇದರಿಂದ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟು, ಎಲ್ಲೆಂದರಲ್ಲಿ, ತ್ಯಾಜ್ಯಎಸೆದು ಶಕ್ತಿ ದೇವತೆ ಕಬ್ಟಾಳಮ್ಮನ ಕ್ಷೇತ್ರವನ್ನು ಮಲಿನ ಮಾಡಿದ್ದಾರೆ. ಶಕ್ತಿ ದೇವತೆಯಾದ ಹಾಗೂ ಪವಿತ್ರ ಸ್ಥಳವಾದ ಕಬ್ಬಾಳಮ್ಮ ದೇಗುಲದ ಪರಿಸರವನ್ನು ಸ್ವಚ್ಛವಾಗಿ ಇಡಬೇಕು. ಕಸದ ರಾಶಿ ತೆರವುಗೊಳಿಸಿ, ಸ್ವಚ್ಛತೆ ಕಾಪಾಡಬೇಕು ಎಂದು ಕಬ್ಟಾಳಮ್ಮನ. ಭಕ್ತರು, ಹಾಗೂ, ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಬ್ಟಾಳಮ ದೇವಾಲಯದ ಸುತ್ತಮುತ್ತ ಪ್ರದೇಶದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಎಸೆದು ಕಬ್ಟಾಳಮ್ಮ ದೇವಾಲಯದ ಸುತ್ತಮುತ್ತಲಿನ ಪ್ರದೇಶ ಮಲಿನ ಗೊಳಿಸಲಾಗಿದೆ.ದಿನನಿತ್ಯ, ದೇವಾಲಯಕ್ಕೆ ಬರುವ ಭಕ್ತರು ಮೂಗು ಮುಚ್ಚಿ ಕೊಂಡು ಓಡಾಡು ಸ್ಥಿತಿ ನಿರ್ಮಾಣವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು
– ಶಂಕರೇಗೌಡ, ಸಮಾಜ ಸೇವಕ