Advertisement
ಚನ್ನಪಟ್ಟಣದಲ್ಲಿ ಕಸದ ರಾಶಿ: ಚನ್ನಪಟ್ಟಣ ಎಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ವಿಶ್ವ ಪ್ರಸಿದ್ಧ ಬೊಂಬೆಆಟಿಕೆಗಳಿಗೆ ಹೆಸರುವಾಸಿಯಾದ ಪಟ್ಟಣ. ಇಲ್ಲಿನಬೊಂಬೆಗಳಿಗೆ ಇಂದಿಗೂ ಕೂಡ ದೇಶ ವಿದೇಶಗಳಲ್ಲಿ ತನ್ನದೇ ತಾದ ಬೇಡಿಕೆ ಇದೆ. ಆದರೆ, ಈ ಪಟ್ಟಣದಲ್ಲಿಪ್ರಸ್ತುತ ದಿನಗಳಲ್ಲಿ ಕಸದ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಎಲ್ಲಿ ನೋಡಿದರಲ್ಲಿ ಕಸದ ರಾಶಿ ಬಿದ್ದಿರುವುದನ್ನ ಕಾಣಬಹುದು. ನಗರದ ಪ್ರಮುಖ ರಸ್ತೆಗಳಾದ ಎಂ.ಜಿ.ರಸ್ತೆಯ ಅಣ್ಣೇಗೌಡ ಸರ್ಕಲ್, ಬಿ.ಎಂ.ರಸ್ತೆ,ಚರ್ಚ್ ರಸ್ತೆ, ಕುವೆಂಪುನಗರ, ವಿವೇಕಾನಂದನಗರ,ಡೂಮ್‌ಲೈಟ್ ಸರ್ಕಲ್, ಮದೀನಾ ಚೌಕ್ ಸೇರಿದಂತೆನಗರದ ಹಲವು ಬಡಾವಣೆಯಲ್ಲಿ ಕಸದ ರಾಶಿಯಿಂದ ಸಾರ್ವಜನಿಕರು ನಗರಸಭೆ ಹಿಡಿ ಶಾಪ ಹಾಕುತ್ತಿದ್ದಾರೆ.
Related Articles
Advertisement
ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರ: ಪ್ರಮುಖವಾಗಿ ನಗರಸಭೆ ಮುಂಭಾಗವೇ ಇರುವಅಣ್ಣೇಗೌಡ ಸರ್ಕಲ್ ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರ. ಪ್ರತಿದಿನ ಲಕ್ಷಾಂತರ ರೂ.ವಹಿವಾಟು ಆಗುವ ಸ್ಥಳವಾಗಿದೆ. ಇಲ್ಲಿ ದಿನಸಿವಹಿವಾಟು, ಬಾಳೆಹಣ್ಣು, ವಿಳ್ಳೇದೆಲೆ, ನಿಂಬೇಹಣ್ಣು,ರೈತರು ಬೆಳೆದ ತರಕಾರಿ, ಹೋಟೆಲ್ ಸೇರಿದಂತೆಪ್ರಮುಖ ಅಂಗಡಿ ಮಳಿಗೆಗಳು ಇದೇ ರಸ್ತೆಯಲ್ಲಿ ಇದೆ.ಪ್ರಸ್ತುತ ಬೆಂಗಳೂರು ಮೈಸೂರು ಹೆದ್ದಾರಿಯ ಮುನ್ನಈ ರಸ್ತೆಯಲ್ಲೇ ಎಲ್ಲ ವಾಹನಗಳ ಸಂಚಾರ ಇತ್ತು.
ವ್ಯಾಪಕವಾದ ಕಸದ ಸಮಸ್ಯೆ: ಮೈಸೂರು ಸಂಸ್ಥಾನದ ರಾಜರು ಮಾಡಿದ ರಸ್ತೆಯನ್ನ ಇಂದಿಗೂ ಕೂಡ ಇಲ್ಲಿಉಳಿಸಿಕೊಂಡಿರುವುದನ್ನು ಗಮನಿಸಬಹುದು. ಆದರೆ,ಈ ರಸ್ತೆಯ ಇಕ್ಕೇಲೆಗಳು ಪ್ರಸ್ತುತ ಕಸ ವಿಲೇವಾರಿ ಕೇಂದ್ರವಾಗಿ ಬಿಟ್ಟಿದೆ. ಇಲ್ಲಿ ಹೇಳ್ಳೋರು ಕೇಳ್ಳೋರು ಯಾರೂಇಲ್ಲದೆ ರಾತ್ರಿ ವೇಳೆ ಅಪರಿಚಿತರು ಬಂದು ಕಸ ಹಾಕಿಹೋಗುತ್ತಿದ್ದಾರೆ. ಈ ಕಸವನ್ನ ಪ್ರತಿದಿನ ಸ್ವತ್ಛ ಮಾಡುವನಗರಸಭೆ ಕೂಡ ಇತ್ತ ಗಮನ ಹರಿಸದೆ ಪ್ರಸ್ತುತ ದಿನಗಳಲ್ಲಿಕಸದ ಸಮಸ್ಯೆ ವ್ಯಾಪಕವಾಗಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಸದ ಸಮಸ್ಯೆ ಶಾಶ್ವತವಾಗಿಬಗೆಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕಳೆದ ಒಂದು ವರ್ಷಗಳಿಂದಲೂ ನಿರಂತರವಾಗಿ ಕಸದ ಸಮಸ್ಯೆ ಇದೆ.ಕಸದ ಸಮಸ್ಯೆ ಬಗ್ಗೆ ನಗರಸಭೆಗೆ ಸಾಕಷ್ಟುಬಾರಿ ಗಮನಕ್ಕೆ ತಂದರೂ, ಯಾವುದೇಪ್ರಯೋಜನವಾಗಿಲ್ಲ. ಮುಂಜಾನೆ ಅಂಗಡಿಬಾಗಿಲು ತೆರೆಯುತ್ತಿದ್ದಂತೆ ಗಬ್ಬು ವಾಸನೆಬೀರುತ್ತಿದೆ. ಕಸ ಗುಡಿಸುವವರಿಗೆ ಹೇಳಿದ್ರೆಬೇಕಾದ್ರೆ ಕಮಿಷನರ್‌ಗೆ ದೂರು ನೀಡಿಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ.ಕಸದ ಸಮಸ್ಯೆ ಶಾಶ್ವತವಾಗಿ ಬಗೆಹರಿಸಬೇಕು. – ರಾಜೇಶ್, ದಿನಸಿ ಅಂಗಡಿ ಮಾಲೀಕರು, ಚನ್ನಪಟ್ಟಣ
ಮಳೆ ಹೆಚ್ಚಾದ ಹಿನ್ನೆಲೆ ಸಂಜೆ ಹೊತ್ತು ಕಸದ ಗಾಡಿಗಳು ಕಸವನ್ನುಸಾಗಿಸುವುದು ಕಷ್ಟವಾಗಿದೆ. ಕಸ ವಿಲೇವಾರಿ ಮಾಡುವಾಗ ಮಳೆಯಿಂದ ಗಾಡಿಗಳುಹೂತುಕೊಳ್ಳುತ್ತಿವೆ. ಮಳೆ ಕಡಿಮೆಯಾದಮೇಲೆ ಹಂತ- ಹಂತವಾಗಿ ಕಸದ ಸಮಸ್ಯೆಬಗೆಹರಿಸಲಾಗುವುದು. – ಶಿವನಂದ್ ಕರೀಗೌಡ, ನಗರಸಭೆ ಆಯುಕ್ತ, ಚನ್ನಪಟ್ಟಣ
– ಎಂ.ಶಿವಮಾದು