Advertisement

ರಸ್ತೆಬದಿಯೇ ಕಸದ ಡಂಪಿಂಗ್‌ ಯಾರ್ಡ್‌

01:21 PM Apr 20, 2018 | |

ದರ್ಬೆ: ಪುತ್ತೂರು – ಕಾಣಿಯೂರು ರಾಜ್ಯ ಹೆದ್ದಾರಿಯ ಕಾವೇರಿಕಟ್ಟೆಯ ಬಳಿ ರಸ್ತೆಬದಿ ಸಾರ್ವಜನಿಕ ಕಸ, ತ್ಯಾಜ್ಯ ಎಸೆಯುವ ಸ್ಥಳವಾಗಿ ಗುರುತಿಸಿಕೊಂಡಿದೆ.

Advertisement

ಈ ಜಾಗದಲ್ಲಿ ಹಿಂದೆ ಕಸದ ತೊಟ್ಟಿಯನ್ನು ಅಳವಡಿಸಲಾಗಿತ್ತು. ಇತ್ತೀಚೆಗೆ ಕೆಲವು ಸಮಯಗಳಿಂದ ಆ ಕಸದ ತೊಟ್ಟಿ ಕಾಣಿಸುತ್ತಿಲ್ಲ. ಆದರೆ ಪ್ರಜ್ಞಾವಂತ ಸಾರ್ವಜನಿಕರು ಮಾತ್ರ ತೊಟ್ಟಿ ಇಲ್ಲದಿದ್ದರೇನು ನಮ್ಮ ಕೆಲಸ ನಾವು ಮಾಡುತ್ತೇವೆ ಎನ್ನುವಂತೆ ರಸ್ತೆ ಬದಿಯಲ್ಲೇ ಕಸದ ಗೋಣಿ, ತಾಜ್ಯಗಳನ್ನು ಎಸೆಯುತ್ತಿದ್ದಾರೆ.

ಪಕ್ಕದಲ್ಲೇ ಲಿಟ್ಲ್ ಫ್ಲವರ್  ಶಾಲೆ, ಸಂತ ಫಿಲೋಮಿನಾ ಸಮೂಹ ವಿದ್ಯಾಸಂಸ್ಥೆಗಳಿವೆ. ವಿದ್ಯಾರ್ಥಿಗಳು ದಿನನಿತ್ಯ ಈ ಅವ್ಯವಸ್ಥೆಯನ್ನೇ ನೋಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಇಲ್ಲಿ ಕಸ ಎಸೆಯುವವರ ಕುರಿತಂತೆ ಹಾಗೂ ಇದರಿಂದ ಆಗುತ್ತಿರುವ ಸಮಸ್ಯೆಯ ಕುರಿತು ಸ್ಥಳೀಯರು ನಗರಸಭೆ ಆಡಳಿತಕ್ಕೆ ನಿರಂತರ ಮನವಿ ನೀಡುತ್ತಲೇ ಇದ್ದಾರೆ. ಆದರೆ ಪರಿಹಾರ ಕ್ರಮವನ್ನೂ ನಗರಸಭೆ ಅನುಸರಿಸುತ್ತಿಲ್ಲ, ಜತೆಗೆ ಕಸ ಎಸೆಯುವ ಕಿಡಿಗೇಡಿಗಳಿಗೆ ದಂಡ ವಿಧಿಸುವ ಕೆಲಸವನ್ನೂ ಮಾಡುತ್ತಿಲ್ಲ ಎನ್ನುವುದು ಸಾರ್ವಜನಿಕ ಆರೋಪ.

Advertisement

Udayavani is now on Telegram. Click here to join our channel and stay updated with the latest news.

Next