Advertisement

ಕಸ ವಿಲೇವಾರಿ ನಿರ್ಲಕ್ಷ್ಯ ಬೇಡ

10:07 PM Mar 07, 2020 | mahesh |

ನಗರದಲ್ಲಿ ಕಸ, ತ್ಯಾಜ್ಯ ವಿಲೇವಾರಿ ಜವಾಬ್ದಾರಿಯನ್ನು ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗಿದೆ. ಅವರು ಕಸ ವಿಲೇವಾರಿ ಮಾಡುತ್ತಿದ್ದಾರಾದರೂ ಕೆಲವೆಡೆ ಕಸದ ರಾಶಿಗಳು ಕಂಡು ಬರುತ್ತಿವೆ.

Advertisement

ಮನೆ ಮನೆಗಳಿಂದ ಕಸ ಸಂಗ್ರಹಿಸುವುದರಿಂದ ಅದು ಸಾರ್ವಜನಿಕ ಸ್ಥಳದಲ್ಲಿ ಶೇಖರಣೆಯಾಗುವುದು ತಪ್ಪುತ್ತಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಮರ, ಗಿಡಗಳಿಂದ ಉಂಟಾಗುವ ಕಸ, ದಾರಿಹೋಕರು ಬಿಸಾಡುವ ಕಸಗಳು ಅಲ್ಲಲ್ಲಿ ಕಾಣಸಿಗುತ್ತವೆ. ಬಸ್‌ ನಿಲ್ದಾಣಗಳ ಹಿಂಭಾಗಗಳು, ಚರಂಡಿಗಳಲ್ಲಿ ತಿಂಡಿ ಪೊಟ್ಟಣಗಳು, ಚಾಕಲೇಟ್‌ ಮತ್ತಿರರ ತಿನಿಸುಗಳ ರ್ಯಾಪರ್‌ಗಳು ರಾಶಿಯಾಗಿವೆ. ಒಂದು ಮಳೆಗೇ ಇವು ರಸ್ತೆಗೆ ಬಂದು ಗಲೀಜಿಗೆ ಕಾರಣವಾಗುತ್ತವೆ.

ಪೌರಕಾರ್ಮಿಕರು ನಿಷ್ಠೆಯಿಂದ ಸಾರ್ವಜನಿಕ ಸ್ಥಳಗಳನ್ನು ಸ್ವತ್ಛಗೊಳಿಸುತ್ತಾರೆ. ಆದರೆ ಕೆಲವು ಕಡೆಗಳಲ್ಲಿ ಅವರಿಂದ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವೆಡೆ ಕಸದ ರಾಶಿಗೆ ಬೆಂಕಿ ಹಾಕುತ್ತಿರುವ ದೃಶ್ಯಗಳೂ ಆಗಾಗ್ಗೆ ಕಾಣಲು ಸಿಗುತ್ತವೆ. ಪ್ಲಾಸ್ಟಿಕ್‌ ಸೇರಿದ ಕಸಕ್ಕೆ ಹೊಗೆ ಹಾಕಿದರೆ ಮತ್ತಷ್ಟು ಹಾನಿಕರ ಎಂಬುದನ್ನು ಸಾರ್ವಜನಿಕರು ಕೂಡ ತಿಳಿದುಕೊಳ್ಳಬೇಕು. ಕಸವನ್ನು ರಾಶಿ ಹಾಕಿ ಹಾಗೆಯೇ ತೆರಳುತ್ತಿರುವುದು ಕೂಡ ಕಂಡು ಬಂದಿದೆ. ಮಂಗಳೂರು ಪುರಭವನ ಹಿಂಭಾಗದ ಫ‌ುಟ್‌ಬಾಲ್‌ ಮೈದಾನದ ಮೂಲೆಯಲ್ಲಿ ಕೂಡ ಈ ರೀತಿ ಕಸವನ್ನು ರಾಶಿ ಹಾಕಲಾಗಿದೆ. ಇದು ನಗರದ ಸ್ವತ್ಛತೆಯನ್ನು ಅವಹೇಳನ ಮಾಡುವಂತಿದೆ. ಕಸ ವಿಲೇವಾರಿ ನಿರ್ಲಕ್ಷ್ಯಕ್ಕೊಳಗಾಗದೆ ಅದು ಕೂಡ ಪಾಲಿಕೆಯ ಆದ್ಯತೆಯ ಕೆಲಸವಾಗಿರಲಿ.

Advertisement

Udayavani is now on Telegram. Click here to join our channel and stay updated with the latest news.

Next