Advertisement
ಬಿಬಿಎಂಪಿ ಕಸ ಸಮಸ್ಯೆ ನಿವಾರಣೆಗೆ “ಹೀ ಮ್ಯಾನ್’ ಬಳಕೆ ಮಾಡಲು ನಿರ್ಧರಿಸಿದ್ದು ನಿಜವಾದರೂ ಅದು ಹಾಲಿವುಡ್ ಸಿನಿಮಾ ಪಾತ್ರಧಾರಿ ಹೀ ಮ್ಯಾನ್ ಅಲ್ಲ. ಬದಲಿಗೆ ಭಾರೀ ಪ್ರಮಾಣದ ತ್ಯಾಜ್ಯ ರಾಶಿಯಾಗಿರುವಂತಹ ಸ್ಥಳಗಳಲ್ಲಿ ಜೆಸಿಬಿ ಮಾದರಿಯ ಹೀ ಮ್ಯಾನ್ ಎಂಬ ಯಂತ್ರ, ಕಸವನ್ನು ಒಂದೆಡೆಗೆ ಶೇಖರಿಸಿ ಆಟೋ ಟಿಪ್ಪರ್‌ಗಳಿಗೆ ತುಂಬುತ್ತದೆ.
Related Articles
Advertisement
ಮಾರ್ಷಲ್ ಜತೆಗೂಡಿದ “ಹೀಮ್ಯಾನ್’: ಕ್ಲೀನಪ್ ಮಾರ್ಷಲ್‌ಗಳ ಜತೆಗೆ ಹೀಮ್ಯಾನ್ ವಾಹನಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಕಸ ಹೆಚ್ಚಾಗಿ ಶೇಖರಣೆಯಾಗುವ ಕಡೆಗಳಲ್ಲಿ ಸೂಕ್ತವಾಗಿ ಕಸ ವಿಲೇವಾರಿ ಮಾಡಲು ಹೀ ಮ್ಯಾನ್ ಯಂತ್ರವನ್ನು ಬಳಸಲಾಗುತ್ತದೆ. ಈಗಾಗಲೇ ಸಂಕ್ರಾತಿ ಹಬ್ಬದ ಸಂದರ್ಭದಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಶೇಖರಣೆಯಾಗಿದ್ದ ನೂರಾರು ಟನ್ ಕಸವನ್ನು ಹೀ ಮ್ಯಾನ್ ಯಂತ್ರದ ಮೂಲಕ ಒಂದೇ ದಿನದಲ್ಲಿ ವಿಲೇವಾರಿ ಮಾಡಲಾಗಿದೆ. ಹೀಗಾಗಿ ಮುಂದೆ ಗುತ್ತಿಗೆ ಆಧಾರದ ಮೇಲೆ ವಾಹನ ಪಡೆದು ಕೆಲಸ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ತ್ಯಾಜ್ಯ ನಿಯಮ ಉಲ್ಲಂ ಸಿದವರಿಗೆ ದಂಡ ವಿಧಿಸಲು “ಕ್ಲೀನಪ್ ಮಾರ್ಷಲ್’ಗಳನ್ನು ಶೀಘ್ರದಲ್ಲೇ ನೇಮಕ ಮಾಡಲಾಗುತ್ತಿದೆ. ಜತೆಗೆ ಹೆಚ್ಚಾಗಿ ಶೇಖರಣೆಯಾಗುವ ಕಡೆಗಳಲ್ಲಿ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡಲು ಹೀ ಮ್ಯಾನ್ ವಾಹನ ಬಳಸಲಾಗುವುದು. ಸಂಕ್ರಾಂತಿ ಸಂದರ್ಭದಲ್ಲಿ ಮೊದಲ ಬಾರಿಗೆ ಬಳಸಿದ್ದ ವಾಹನ ಉತ್ತಮವಾಗಿ ಕೆಲಸ ಮಾಡಿದೆ. ಹೀಗಾಗಿ ಗುತ್ತಿಗೆ ಆಧಾರದ ಮೇಲೆ ಮತ್ತಷ್ಟು ವಾಹನ ಪಡೆಯಲಾಗುವುದು.-ಜಿ.ಪದ್ಮಾವತಿ, ಮೇಯರ್