Advertisement

ಪೆರ್ಡೂರು: ಕಸದ ರಾಶಿಗೆ ಮುಕ್ತಿ, ಚರಂಡಿ ದುರಸ್ತಿ

02:20 AM Sep 01, 2018 | Team Udayavani |

ಹಿರಿಯಡ್ಕ: ಉಡುಪಿಯಿಂದ ಪೆರ್ಡೂರು ಪ್ರವೇಶಿಸುವಾಗ ನಮಗೆ ಮೊದಲ ದರ್ಶನವಾಗುವುದು ರಾಶಿಬಿದ್ದ  ಕಸಗಳು ಹಾಗೂ ಅದನ್ನು ತಿನ್ನಲು ಬಂದ ದನಗಳ ಸಾಲು. ಈ ಬಗ್ಗೆ ಹಲವು ಬಾರಿ ಪಂಚಾಯತ್‌ ಗಮನಕ್ಕೆ ತಂದು, ಪತ್ರಿಕೆಯ ಮೂಲಕ ಸಮಸ್ಯೆ ಬಗ್ಗೆ ತಿಳಿಸಿ ಕೊನೆಗೂ ಪೆರ್ಡೂರು ಗ್ರಾ. ಪಂ. ಎಚ್ಚೆತ್ತುಕೊಂಡು ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ನೀಡಿದೆ. ಪೆರ್ಡೂರು ಗ್ರಾ. ಪಂ. ಅಧ್ಯಕ್ಷರು ಹಾಗೂ ಪಿಡಿಒ ಅವರ ವಿಶೇಷ ಮುತುವರ್ಜಿಯಲ್ಲಿ ಅನಂತಪದ್ಮನಾಭ ದೇವಸ್ಥಾನ ಬಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಎಲ್ಲೆಂದಲ್ಲಿಯೂ ಕಸದ ರಾಶಿ ಹಾಗೂ ಪೆರ್ಡೂರು ಹೆಸ್ಕೂಲ್‌ ಬಳಿ ಇರುವ ತ್ಯಾಜ್ಯದ ರಾಶಿಯನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಪ್ರಮುಖ ಬೀದಿಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು  ಈ ಬಗ್ಗೆ  ಪಂಚಾಯತ್‌ ಎಚ್ಚೆತ್ತುಕೊಂಡು ಪ್ರಮುಖ ಬೀದಿಯ ಎರಡು ಬದಿಯ ಚರಂಡಿಯನ್ನು ದುರಸ್ತಿಗೊಳಿಸಿದ್ದಾರೆ. ಹೊಂಡಬಿದ್ದ ರಸ್ತೆಗೆ ಜಲ್ಲಿ ಪುಡಿ  ಹಾಕಿದ್ದು ಹಾಗೂ ರಸ್ತೆ ಬದಿ ಮಳೆಯ ನೀರಿನಿಂದ ಸಂಪೂರ್ಣ ಕೊಚ್ಚಿಹೋಗಿದ್ದ ಪ್ರದೇಶಗಳಿಗೆ ಕ್ರಶರ್‌ ಪುಡಿಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿದೆ.

Advertisement

ಕಟ್ಟುನಿಟ್ಟಿನ ಕ್ರಮ ಪೆರ್ಡೂರಿನ ಕಸದ ಸಮಸ್ಯೆ


ಇಂದು ನಿನ್ನೆಯದಲ್ಲ. ಪೆರ್ಡೂರು ದೇವಸ್ಥಾನದ ಬಳಿ ಕಸತಂದು ರಾಶಿ ಹಾಕುತ್ತಾರೆ.ಇದನ್ನು ಪಂಚಾಯತ್‌ ವತಿಯಿಂದ ತೆರವುಗೊಳಿಸಿದರೂ ಮತ್ತೆ ತಂದು ಹಾಕುತ್ತಾರೆ. ಯಾರೇ ಕಸತಂದು ಹಾಕಿದರೂ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮದೊಂದಿಗೆ ದಂಡವನ್ನು ವಿಧಿಸಲಾಗುವುದು.
– ಶಾಂಭವಿ ಕುಲಾಲ್‌, ಅಧ್ಯಕ್ಷರು, ಗ್ರಾ.ಪಂ. ಪೆರ್ಡೂರು.

ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಈಗಾಗಲೇ ಚರಂಡಿ
ದುರಸ್ತಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಸೇರಿದಂತೆ ಶಾಶ್ವತ ಮುಕ್ತಿಗೆ ಪಂಚಾಯತ್‌ನಿಂದ ವ್ಯವಸ್ಥೆ ಮಾಡಲಾಗಿದ್ದು ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸುವ ನಿಟ್ಟಿನಲ್ಲಿ ತ್ಯಾಜ್ಯವಿಲೇವಾರಿ ಘಟಕದ ಕೆಲಸ ಪ್ರಗತಿಯಲ್ಲಿದೆ.
– ಸುರೇಶ್‌,  ಪಂ. ಅ. ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next