Advertisement

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

07:42 PM Sep 24, 2021 | Team Udayavani |

ದಾಂಡೇಲಿ : ಕೊರೊನಾ ಬಹುಮಟ್ಟಿಗೆ ಜನರಲ್ಲಿ ಬಹಳಷ್ಟು ವಿಚಾರಗಳನ್ನು ಹಾಗೂ ತಾಂತ್ರಿಕತೆಯನ್ನು ಕಲಿಸಿಕೊಟ್ಟಿದೆ. ಡಿಜಿಟಲ್ ಜಗತ್ತಿಗೆ ಜನ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. ಮನುಷ್ಯರಂತೆ ಇತ್ತ ಪ್ರಾಣಿಗಳು ಸಹ ತನ್ನ ಸಾಮಾರ್ಥ್ಯವನ್ನು ವೃದ್ಧಿಸಿಕೊಂಡಂತೆ ಕಾಣುವಂತಿದೆ, ದಾಂಡೇಲಿಯ ಸೋಮಾನಿ ವೃತ್ತದಲ್ಲಿ ಹಂದಿಗಳ ಕರಾಮತ್ತು.

Advertisement

ಅಂದ ಹಾಗೆ, ನಗರದ ಸೊಮಾನಿ ವೃತ್ತದಲ್ಲಿ ಸ್ವಚ್ಚತೆಯ ದೃಷ್ಟಿಯಿಂದ ಕಸವನ್ನು ಹಾಕಲೆಂದು ಎರಡು ಡಬ್ಬಗಳನ್ನು ನೇತಾಡಿಸಿಕೊಳ್ಳಲಾಗಿದೆ. ಇಲ್ಲಿ ಸ್ಥಳೀಯ ವ್ಯಾಪಾರಿಗಳಿರಬಹುದು ಅಥವಾ ಇನ್ನಿತರ ಸಾರ್ವಜನಿಕರು ತ್ಯಾಜ್ಯವನ್ನು ತಂದು ಅಲ್ಲಿ ಹಾಕುತ್ತಾರೆ. ಇಲ್ಲಿ ರಾತ್ರಿ ವೇಳೆಯಲ್ಲಿ ಜನ ಓಡಾಡುವುದು ಕಡಿಮೆಯಾಗುತ್ತಿದ್ದಂತೆಯೆ ಕಸದ ಡಬ್ಬದ ಬಳಿ ಹಂದಿಗಳು, ಬಿಡಾಡಿ ನಾಯಿಗಳು ಬರುತ್ತವೆ. ಹಾಗೆ ಬಂದು ವಾಸನೆಯ ಮೂಲಕವೆ ಗ್ರಹಿಸಿಕೊಂಡು ಸಾಮಾರ್ಥ್ಯವನ್ನು ಉಪಯೋಗಿಸಿಕೊಂಡು, ನೇತಾಡುತ್ತಿರುವ ಕಸದ ಡಬ್ಬವನ್ನು ಒಂದು ಕೈಯಿಂದ ಬಗ್ಗಿಸಿ, ಕಸ ತೆಗದು ಹೊಟ್ಟೆತುಂಬ ತಿಂದು ತೇಗುತ್ತಿರುವುದು ಪ್ರತಿನಿತ್ಯದ ದೃಶ್ಯವಾಗಿದೆ. ಇಲ್ಲಿ ಡಬ್ಬದಿಂದ ಹೊರತೆಗೆದ ತ್ಯಾಜ್ಯವನ್ನು ಸುತ್ತಲು ಹರಡಿ, ಚೆಲ್ಲಾಡಿ ಮತ್ತಷ್ಟು ಅಸ್ವಚ್ಚತೆ ನಿರ್ಮಾಣ ಮಾಡುವಲ್ಲಿ ಹಂದಿಗಳು ಮತ್ತು ನಾಯಿಗಳು ನಾ ಮುಂದು, ನಾ ಮುಂದು ಎಂದು ಎಗಾಡಿಕೊಳ್ಳುತ್ತವೆ.

ಇದನ್ನೂ ಓದಿ :ಆನೆ ರಕ್ಷಣೆ ಕಾರ್ಯಾಚರಣೆ ವರದಿಗೆ ತೆರಳಿದ್ದ ಪತ್ರಕರ್ತ ಸಾವು ! ವಿಡಿಯೋ ನೋಡಿ

ಇಲ್ಲಿ ಗಮನಿಸಬೇಕಾದ ಅಂಶವೆಂದರೇ, ಸ್ವಚ್ಚತೆಯ ದೃಷ್ಟಿಯಿಂದ ಅಳವಡಿಸಲಾದ ಈ ಡಬ್ಬವನ್ನು ಕೊನೆಪಕ್ಷ ಸ್ವಲ್ಪ ಮೇಲಕ್ಕೇರಿಸಿ ನೇತಾಡಿಸುತ್ತಿದ್ದಲ್ಲಿ ಈ ರೀತಿಯ ವಾತವರಣ ನಿರ್ಮಾಣವಾಗುವುದಿಲ್ಲ. ಎಲ್ಲವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಇಲ್ಲಿಯ ವಾಸ್ತವ ಸ್ಥಿತಿ ಅಂತಾರೆ ನಗರದ ಸಾರ್ವಜನಿಕರು.

Advertisement

Udayavani is now on Telegram. Click here to join our channel and stay updated with the latest news.

Next