Advertisement
ತಾಲೂಕಿನ ಗೊಬ್ಬೂರ (ಬಿ) ಗ್ರಾಮ ಜಿಲ್ಲಾ ಪಂಚಾಯಿತಿ ಮತಕ್ಷೇತ್ರವಾಗಿದ್ದು, ಗ್ರಾ.ಪಂಕೇಂದ್ರ ಸ್ಥಳವಾಗಿದೆ. ತಾಲೂಕಿನಲ್ಲಿ ದೊಡ್ಡ ಗ್ರಾಮವಾಗಿದೆ. ಗ್ರಾ.ಪಂನವರು ನಿತ್ಯ ಮುಖ್ಯರಸ್ತೆಗಳ ಪಕ್ಕದಲ್ಲಿ ಕಸದ ರಾಶಿ ಹಾಕುವ ಮೂಲಕನೈರ್ಮಲ್ಯ ಸಮಸ್ಯೆಗೆ ಕಾರಣ ವಾಗುತ್ತಿದ್ದಾರೆ. ಗೊಬ್ಬೂರ ಮಾತ್ರವಲ್ಲದೇ ತಾಲೂಕಿನ ಅನೇಕಗ್ರಾಮಗಳಲ್ಲಿ ಕಸದ ಸಮಸ್ಯೆ ತಲೆದೋರಿದ್ದು, ಕಸದ ಸಮಸ್ಯೆ ನಿವಾರಣೆಗೆ ಸಂಬಂಧ ಪಟ್ಟವರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
Related Articles
Advertisement
ಸಾರ್ವಜನಿಕರಲ್ಲೂ ಬಂದಿಲ್ಲ ಜಾಗೃತಿ: ಇನ್ನು ಗ್ರಾ.ಪಂನವರು ಗ್ರಾಮದ ಕಸ ತಂದು ರಸ್ತೆಗಳ ಪಕ್ಕದಲ್ಲಿ ಹಾಕುತ್ತಾರೆ. ಜೊತೆಗೆ ಗ್ರಾಮಸ್ಥರು,ಸಾರ್ವಜನಿಕರಲ್ಲೂ ಜಾಗೃತಿ ಮೂಡಿಲ್ಲ.
ನಿಯಮ ಗಾಳಿಗೆ: ಸರ್ಕಾರ ಕಸ ವಿಲೇವಾರಿಗಾಗಿಯೇ ವಿನೂತನ ಕಾರ್ಯಕ್ರಮ ಹಾಕಿಕೊಳ್ಳುತ್ತಿದೆ. ಕಸವನ್ನು ಹಸಿ ಮತ್ತುಒಣ ಕಸವೆಂದು ವಿಂಗಡಿಸಿ ಪಂಚಾಯಿತಿಒದಗಿಸಿದ ಕಸದ ತೊಟ್ಟಿಗಳಿಗೆ ಹಾಕುವಂತೆನಿಯಮ ರೂಪಿಸಲಾಗಿದೆ. ಆದರೆ ಕಸವನ್ನುಸರ್ಕಾರದ ನಿಯಮತೆ ವಿಲೇವಾರಿ ಮಾಡದೆಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿಮನಸೋ ಇಚ್ಚೆ ಕಸ ಹಾಕುತ್ತಿದ್ದಾರೆ. ಇದರಿಂದಾಗಿಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ವಾಹನಗಳಲ್ಲಿ ಚಲಿಸುವಾಗ ಯಾವುದೇಗ್ರಾಮಗಳು ಬಂದರೂ ತಲೆಬಿಸಿ ಶುರುವಾಗುತ್ತದೆ.ಗ್ರಾಮ ಹತ್ತಿರವಾಗುತ್ತಿದ್ದಂತೆ ಕಸದ ರಾಶಿರಸ್ತೆಗಳ ಪಕ್ಕದಲ್ಲಿರುತ್ತದೆ. ಇದರಿಂದ ದುರ್ನಾತಬೀರುತ್ತದೆ. ಆದ್ದರಿಂದ ಕೂಡಲೇ ಕಸ ವಿಲೆವಾಗಿಗೆಕ್ರಮ ಕೈಗೊಳ್ಳಬೇಕು ಎಂದು ಸಮಾಜ ಸೇವಕಜೆ.ಎಂ ಕೊರಬು ಮನವಿ ಮಾಡಿದ್ದಾರೆ.
ಸರ್ಕಾರದ ನಿಯಮದಂತೆ ಕಸ ವಿಲೇವಾರಿ ಆದರೆ ಯಾವ ಊರುಗಳಲ್ಲೂ ಸಮಸ್ಯೆ ಆಗುವುದಿಲ್ಲ. ಪಂಚಾಯಿತಿಯವರಿಗೆ ಕನಿಷ್ಠ ಕಾಳಜಿ ಇಲ್ಲ. ಸಾರ್ವಜನಿಕರಲ್ಲೂ ಜಾಗೃತಿ ಬಂದಿಲ್ಲ. ಹೀಗಾಗಿ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಕಸ ವಿಲೇವಾರಿಗಾಗಿ ಸರ್ಕಾರ ಕೈಗೊಂಡ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು.-ಶ್ರೀಮಂತ ಬಿರಾದಾರ, ಹೋರಾಟಗಾರ
ದೇವಲ ಗಾಣಗಾಪುರ, ಮಾಶಾಳ ಸೇರಿದಂತೆ ನಾಲ್ಕೈದು ಕಡೆ ಮಾತ್ರಸ್ಥಳ ಮತ್ತು ವಾಹನ ಸೌಕರ್ಯವಿದೆ.ಉಳಿದ ಕಡೆ ವಾಹನವಿದ್ದರೆ ನಿವೇಶನವಿಲ್ಲ,ನಿವೇಶನವಿದ್ದಲ್ಲಿ ವಾಹನ ಸಮಸ್ಯೆ ಇದೆ.ಇದಕ್ಕಾಗಿ 100ಹಿ100 ನಿವೇಶನ ಬೇಕು.ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತದೆ. -ನಬಿಸಾಬ್, ತಾ.ಪಂ, ಇಒ
-ಮಲ್ಲಿಕಾರ್ಜುನ ಹಿರೇಮಠ