Advertisement

ನಟಿ ಗೀತಾ ಸಿದ್ಧಾರ್ಥ್ ನಿಧನ

09:57 AM Dec 16, 2019 | Hari Prasad |

ಮುಂಬಯಿ: ‘ಶೋಲೆ,’ ‘ಗರಂ ಹವಾ’, ‘ತ್ರಿಶೂಲ್‌’ ಖ್ಯಾತಿಯ, ಹಿಂದಿ ಸಿನೆಮಾ ಕ್ಷೇತ್ರದ ಹಿರಿಯ ನಟಿ ಗೀತಾ ಸಿದ್ಧಾರ್ಥ್ ನಿಧನ ಹೊಂದಿದ್ದಾರೆ. ಸಿನೆಮಾ ಮತ್ತು ಟಿವಿ ಕಲಾವಿದರ ಸಂಘಟನೆ ಅವರ ನಿಧನದ ಬಗ್ಗೆ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ. ಯಾವ ಕಾರಣದಿಂದಾಗಿ ಅವರು ಕೊನೆಯುಸಿರೆಳೆದರು ಎಂಬ ಅಂಶ ಸ್ಪಷ್ಟವಾಗಿಲ್ಲ.

Advertisement

1973ರಲ್ಲಿ ತೆರೆ ಕಂಡ ಎಂ.ಎಸ್‌. ಸತ್ಯು ಅವರ ‘ಗರಂ ಹವಾ’ ಮೂಲಕ ಅವರಿಗೆ ಹೆಚ್ಚಿನ ಖ್ಯಾತಿ ಬಂದಿತ್ತು. ಅದರಲ್ಲಿ ಅವರ ‘ಅಮೀನಾ’ ಎಂಬ ಹೆಸರಿನ ಪಾತ್ರ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಚಿತ್ರ ಸಾಹಿತಿ-ನಿರ್ದೇಶಕ ಗುಲ್ಜಾರ್‌ ಅವರ ‘ಪರಿಚಯ’ ಸಹಿತ ಹಲವಾರು ಸಿನೆಮಾಗಳಲ್ಲಿ ಅವರು ನಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next